ಇಎನ್ಎಲ್ ಕಲಘಟಗಿ:
ತಾಲೂಕಿನ ಬೇಗೂರು ಗ್ರಾ.ಪಂ ಗೆ ಆಯ್ಕೆಯಾದ 19 ಸದಸ್ಯರಲ್ಲಿ 14 ಸದಸ್ಯರಿಗೆ ಶಾಸಕ ಸಿ ಎಂ ನಿಂಬಣ್ಣವರ ತಾಲೂಕಿನ ಬಿಜೆಪಿ ಕಚೇರಿಯಲ್ಲಿ ಸನ್ಮಾನಿಸಿದರು. ಹೊಸ ವರ್ಷ ಬರುವ ಮೊದಲೇ ಉತ್ತಮ ಫಲಿತಾಂಶ ಕೊಟ್ಟಿದ್ದೀರಿ, ನಿಮ್ಮ ಮೇಲೆ ಜನರು ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳಿ, ತಮ್ಮೆಲ್ಲರನ್ನು ಸನ್ಮಾನಿಸಲು ಸಂತೋಷ ಎನಿಸುತ್ತದೆ. ಮತದಾರರನ್ನು ಕಡೆಗಣಿಸಬೇಡಿ, ಅಭಿವೃದ್ದಿಯತ್ತ ಗಮನಕೊಡಿ.ಇದು ದೇವರು ನಿಮಗೆ ಕೊಟ್ಟ ಅವಕಾಶ, ಜನ ಸೇವೆಯೇ ಜನಾರ್ಧನನ ಸೇವೆ ಎಂದು ತಿಳಿದು ಆಡಳಿತ ನಡೇಸಿರಿ ಎಂದು ಶಾಸಕ ಸಿ ಎಂ ನಿಂಬಣ್ಣವರ ಹೇಳಿದರು.
ಈ ಸಂದರ್ಭದಲ್ಲಿ ಹುಲ್ಲಂಬಿ ಗ್ರಾಮದ ಸಾವಕ್ಕ ಫ ಸುತಗಟ್ಟಿ , ಸಿದ್ದವ್ವ ಬ ಸಿಗ್ಗಟ್ಟಿ ,ತುಮರಿಕೊಪ್ಪ ಗ್ರಾಮದ ಮಂಜವ್ವ ಯ ಸಂತಪ್ಪನವರ, ನಾಗವ್ವ ಜ ಅಂಗಡಿ , ತಿಪ್ಪಣ್ಣ ಕುರುಬರ, ತುಕಾರಾಮ ಹುಗಾಡಿ, ಶಕುಂತಲಾ ಹರಿಜನ, ಬೇಗೂರ ಗ್ರಾಮದ ಶಂಕ್ರಪ್ಪ ಬಡಿಗೇರ, ಈಶ್ವರಪ್ಪ ಬಡಿಗೇರ, ಹನುಮಂತಪ್ಪ ಮ ಗೌರಿ, ನಿಂಗಪ್ಪ ಬ ಸುಳ್ಳದ, ಶಂಕ್ರಪ್ಪ ಬೋಳಣ್ಣವರ, ರೇಣುಕಾ ಚ ಬೀಸರಳ್ಳಿ, ಬಿಸರಳ್ಳಿ ಗ್ರಾಮದ ದ್ರಾಕ್ಷಾಯಣಿ ಹಡಪದ, ಈ ಸದಸ್ಯರನ್ನು ಶಾಸಕರು ಸನ್ಮಾನಿಸಿದರು. ಈ ವೇಳೆ ಸುರೇಶ ಶೀಲವಂತರ ಲಿಂಗರಾಜ ತಿರ್ಲಾಪೂರ, ಆಯ್.ಸಿ ಗೋಕುಲ, ಪರಶುರಾಮ ರಜಪೂತ, ನಿಂಗಪ್ಪ ಸುತಗಟ್ಟಿ, ಬಸವರಾಜ ಶೆರೆವಾಡ, ಮಂಜುನಾಥ ಕಮತರ, ಚನಬಸಪ್ಪ ಶಿಗ್ಗಟ್ಟಿ , ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು, ಮತ್ತು ತಾಲೂಕಿನ ಜನತೆಗೆ ಶಾಸಕ ನಿಂಬಣ್ಣವರ ಹೊಸ ವರ್ಷದ ಶುಭಾಶಯ ಕೋರಿದರು .