37 C
Hubli
ಮಾರ್ಚ್ 28, 2024
eNews Land
ಸಣ್ಣ ಸುದ್ದಿ

ಬಸವೇಶ್ವರ ಮೂರ್ತಿಗೆ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಅಪಮಾನ  ಮಾಡಿದ ದುಷ್ಕರ್ಮಿಗಳಿಗೆ ಬಂಧಿಸಿ ಎಂದು ಆಗ್ರಹ : ಶ್ರೀ ಬಸವಣ್ಣಜ್ಜನವರು

ಇಎನ್ಎಲ್ ಕುಂದಗೋಳ:

ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಹನಸಿ ಗ್ರಾಮದಲ್ಲಿ ಬಸವೇಶ್ವರ ಮೂರ್ತಿಗೆ  ಮಸಿ ಬಳೆದು ಅಪಮಾನ  ಮಾಡಿದ ಹಾಗೂ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಧ್ವಂಸ ಮಾಡಿದ ದುಷ್ಕರ್ಮಿಗಳ ಹಿಂದಿರುವವರನ್ನು ಬಂಧಿಸಿ ಶಿಕ್ಷೆಗೆ ಒಳಪಡಿಸಬೇಕೆಂದು.

ಪಟ್ಟಣದ ಕಲ್ಯಾಣಪುರ ಮಠದ ಶ್ರೀ ಬಸವಣ್ಣಜ್ಜನವರ ಉಪಸ್ಥಿತಿಯಲ್ಲಿ ತಾಲೂಕು ಲಿಂಗಾಯತ ಪಂಚಮಸಾಲಿ ಸಮಾಜದ ಹಾಗೂ ಕಿತ್ತೂರು ಚೆನ್ನಮ್ಮ ಸೇವಾ ಸಮಿತಿಯವರು ಆಗ್ರಹಿಸಿದರು.

ಬಸವಣ್ಣಜ್ಜನವರು ಮಾತನಾಡಿ ಸರ್ವರನ್ನು ಒಂದುಗೂಡಿಸುವ ತತ್ವ ಸಾರಿದ ಮಹಾನ್ ಮಾನವತಾವಾದಿ ಬಸವಣ್ಣ ಅವರ ಕೊಡುಗೆ ಅಪಾರ ಅಂತಹ ಮಹಾತ್ಮರಿಗೆ   ಅವಮಾನ ಸಂಗೋಳ್ಳಿ ರಾಯಣ್ಣ ಮೂರ್ತಿಗೆ ದಕ್ಕೆ ಮಾಡಿದ್ದು ಹಾಗೂ ಕನ್ನಡ ಧ್ವಜಕ್ಕೆ ಬೆಂಕಿ ಹಚ್ಚುವುದು ಸುಸಂಸ್ಕೃತ ಸಮಾಜದಲ್ಲಿ ಅಶಾಂತಿ  ಉಂಟು ಮಾಡುವ  ಹುನ್ನಾರ ಎಂದು ಕಂಡುಬರುತ್ತದೆ. ಇಂತಹ ಕೃತ್ಯಗಳಿಗೆ ಬೆಂಬಲಿಸುವ ಸಂಘಟನೆಗಳಿಗೆ ಹಾಗೂ  ಕಿಡಿಗೇಡಿಗಳಿಗೆ ಸೂಕ್ತ ನೀತಿ ಪಾಠ ಕಲಿಸಬೇಕು ಎಂದು ಹೇಳಿದರು. ನಂತರ ಪ್ರತಿಭಟನೆಯಕಾರರು ತಾಲೂಕು ತಹಶೀಲ್ದಾರಾದ ಅಶೋಕ್ ಶಿಗ್ಗಾಂವಿ ಅವರ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.

      ಈ ಪ್ರತಿಭಟನೆಯಲ್ಲಿ ಅರವಿಂದ ಕಟಗಿ, ಸೋಮ ರಾವ್ ದೇಸಾಯಿ, ನಾಗರಾಜ್ ದೇಶಪಾಂಡೆ, ಮುತ್ತಣ್ಣ ಕುರ್ತುಕೋಟಿ,  ಮಲ್ಲಪ್ಪ ನರೇಗಲ್, ವಾಯ್.ಎನ್. ಪಾಟೀಲ್, ಬಸಣ್ಣ ನಾವಳ್ಳಿ, ಮುತ್ತು ಚಕಾರಿ, ಅಪ್ಪಣ್ಣ ಹುಂಡೇಕಾರ್, ಹಾಗೂ ಇನ್ನೂ ಮುಂತಾದವರು ಪಾಲ್ಗೊಂಡಿದ್ದರು.

Related posts

ಸಂವಿಧಾನ ಗೌರವಿಸಿ ನೀತಿ-ನಿಯಮಗಳನ್ನರಿತು ಕರ್ತವ್ಯನಿರತರಾಗಬೇಕು: ಮಂಜುನಾಥ ಅಮಾಸಿ

eNEWS LAND Team

ಫೆ.2 ನರೇಗಾ ದಿನ ಆಚರಿಸಿದ ನರೇಗಾ ನೌಕರರ ಕ್ಷೇಮಾಭಿವೃದ್ಧಿ ಸಂಘ

eNEWS LAND Team

ನಮ್ಮ ನಡೆ ಪ್ರಕೃತಿ ಕಡೆ ಜಾಥಾ

eNewsLand Team