27 C
Hubli
ಮಾರ್ಚ್ 28, 2023
eNews Land
ಸಣ್ಣ ಸುದ್ದಿ

ಬಮ್ಮಿಗಟ್ಟಿಯಲ್ಲಿ ಅಂಕಲಗಿ ಅಡವಿ ಸಿದ್ದೇಶ್ವರ ಜಾತ್ರೆ

Listen to this article

ಇಎನ್ಎಲ್ ಕಲಘಟಗಿ: ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಅಂಕಲಗಿ ಅಡವಿ ಸಿದ್ದೇಶ್ವರ ಜಾತ್ರೆ ಭಕ್ತರ ಹರ್ಷೋದ್ಗಾರದ ಮಧ್ಯೆ ಗುರುವಾರ ವಿಜೃಂಭಣೆಯಿಂದ ನೆರವೇರಿತು. ಮಠದದಿಂದ ಆರಂಭವಾದ ರಥೋತ್ಸವ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಠಕ್ಕೆ ಬಂದು ತಲುಪಿತು. ತರಹೇವಾರಿ ಪುಷ್ಪಮಾಲೆಗಳಿಂದ ಕಂಗೊಳಿಸಿದ ರಥೋತ್ಸವ ನೋಡುಗರ ಕಣ್ಮನ ಸೆಳೆಯಿತು. ಭಕ್ತರು ರಥಕ್ಕೆ ಹೂವು, ಹಣ್ಣು ಅರ್ಪಿಸಿ ನಮಸ್ಕರಿಸಿದರು. ಶ್ರದ್ಧೆ, ಭಕ್ತಿಯಿಂದ ರಥ ಎಳೆದರು. ಹರಹರ ಮಹಾದೇವ, ಅಂಕಲಗಿ ಅಡವಿ ಸಿದ್ದೇಶ್ವರನಿಗೆ ಜಯವಾಗಲಿ ಎಂದು ಘೋಷಣೆ ಮೊಳಗಿಸಿದವು.

ಬೆಳಗ್ಗೆಯಿಂದಲೆ ಮಠದಲ್ಲಿ ಧಾರ್ಮಿಕ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನಡೆದವು. ಭಕ್ತರು ವಿಶೇಷಪೂಜೆ ಸಲ್ಲಿಸಿ ಭಕ್ತಿ ಮೆರದರು. ಕರ್ತೃ ಗದ್ದುಗೆಗೆ ಮಾಹಾರುದ್ರಾಭಿಷೇಕ, ಸಹಸಬಿಲ್ವಾರ್ಚನೆ, ಅಲಂಕಾರ ಮಹಾಪೂಜೆ  ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳು ನಡೆದವು. ಮಂಟೂರಿನ ಶಿವಲಿಂಗೇಶ್ಚರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. 

ಗ್ರಾಮದ ವೆಂಕಟೇಶ್ವರ, ಗ್ರಾಮದೇವಿ, ಅಂಕಲಗಿ ಅಡವಿ ಸಿದ್ದೇಶ್ವರ, ಗುರುಬಸವೇಶ್ವರ ಯುವಕ ಸಂಘದ ಡೊಳ್ಳು, ಭಜನೆ, ಜಾಂಜ್, ಕರಡಿ ಮಜಲು ಮೆರವಣಿಗೆಗೆ ಕಳೆ ತಂದವು.
ರಥೋತ್ಸವಕ್ಕೂ ಮುನ್ನ ನಡೆದ ಧರ್ಮಸಭೆಯಲ್ಲಿ ಗ್ರಾಮದ ಅರ್ಚಕರು ಹಾಗೂ ತಾಲೂಕಿನ ಎಲ್ಲ ಪತ್ರಕರ್ತರನ್ನು ಸನ್ಮಾನಿಸಲಾಯಿತು. ಕೋತಬಾಳ ಅಡವಿ ಸಿದ್ಧೇಶ್ವರ ಸಂಸ್ಥಾನಮಠದ ಗಂಗಾಧರ ಸ್ವಾಮೀಜಿ, ಮಂಟೂರು ಆನಂದ ಆಶ್ರಮದ ಮಹಾಂತ ಸ್ವಾಮೀಜಿ, ಶಿರಸಂಗಿ ಮಹಾಲಿಂಗೇಶ್ವರ ಮಠದ ಬಸವಮಹಾಂತ ಸ್ವಾಮೀಜಿ, ಬಮ್ಮಿಗಟ್ಟಿ ಸಿದ್ಧಾರೂಢ ಮಠದ ದಯಾನಂದ ಸ್ವಾಮೀಜಿ, ಮಂಟೂರು ಗ್ರಾಮದ ಅಂದಾನಯ್ಯ , ರುದ್ರಯ್ಯ ಚಿಕ್ಕಮಠ ಶ್ರೀ ಸಾನ್ನಿಧ್ಯ ವಹಿಸಿದ್ದರು. ಜಗದೀಶ ಮೆಣಸಿನಕಾಯಿ ಸ್ವಾಗತಿಸಿದರು. ಮಲ್ಲೇಶ ಮುಕ್ಕಣ್ಣವರ ನಿರೂಪಿಸಿದರು.

Related posts

ಕಾಮಸಮುದ್ರದಲ್ಲಿ ಭೂಮಿ ಪೂಜೆ ನೆರವೇರಿಸಿದ: ರಾಜಮ್ಮ

eNEWS LAND Team

ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯ ಭೇಟಿ ಮಾಡಿದ ಸಿಎಂ ಬೊಮ್ಮಾಯಿ

eNEWS LAND Team

ಮಸ್ಕಿ: ಬಸಾಪುರದಲ್ಲಿ ನರೇಗಾ ಕಾರ್ಯಾಗಾರ

eNEWS LAND Team