22 C
Hubli
ಏಪ್ರಿಲ್ 20, 2024
eNews Land
ಸಣ್ಣ ಸುದ್ದಿ

ದುಷ್ಟವ್ಯಸನ  ತ್ಯಜಿಸಿ ನೈತಿಕಮೌಲ್ಯ ಬೆಳಿಸಿಕೊಳ್ಳಲು ಕರೆ:ಜ್ಯೂಲಿಕಟ್ಟಿ

ಇಎನ್ಎಲ್ ಅಣ್ಣಿಗೇರಿ: ಮಾದಕ ವಸ್ತುಗಳ ಬಳಕೆ ನಿಯಂತ್ರಣ, ಮತ್ತು ಮಹಿಳಾ ದೌರ್ಜನ್ಯ ಅಪರಾಧ ತಡೆ ಕುರಿತು ಪೋಲಿಸ್ ಠಾಣಾಧಿಕಾರಿ ಎಲ್.ಕೆ.ಜ್ಯೂಲಿಕಟ್ಟಿ ಮಾಹಿತಿ ನೀಡಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ  ಸ್ವಾಮಿ ವಿವೇಕಾನಂದರ 159 ನೇ ದಿನಾಚರಣೆ ನಿಮಿತ್ಯ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಂತರ ಮಾತನಾಡಿ, ಮಾದಕ ವಸ್ತುಗಳ ಬಳಕೆ ದೇಶದಲ್ಲಿ ಉತ್ತರ ಪ್ರದೇಶ ರಾಜ್ಯ ಪ್ರಥಮವಾಗಿದ್ದು, ಕರ್ನಾಟಕ ರಾಜ್ಯ 9ನೇ ಸ್ಥಾನದಲ್ಲಿದೆ. ವೃತ್ತಿಪರ ಕೋರ್ಸ್ ವಿದ್ಯಾರ್ಥಿಗಳ ಸಮೂಹದಲ್ಲಿ ಮಾದಕ ವಸ್ತುಗಳ ಬಳಕೆ ಅಧಿಕವಾಗಿದ್ದು, ವಿದ್ಯಾರ್ಥಿಗಳು ನಿಯಂತ್ರಣ ಸಾಧಿಸುವ ಮೂಲಕ ದುಷ್ಟವ್ಯಸನ ತ್ಯಜಿಸಿ ನೈತಿಕಮೌಲ್ಯಗಳ ಗುಣಗಳನ್ನು ಅಳವಡಿಸಿಕೊಂಡು ಉತ್ತಮ ಬದುಕು ಸಾಧಿಸಬೇಕೆಂದರು.
ಸಾoಸ್ಕೃತಿಕ ವಿಭಾಗದ ಸಂಚಾಲಕರಾದ ಡಾ.ಸುಧಾ ಎಸ್.ಕೌಜಗೇರಿ ಪ್ರಾಸ್ತವಿಕವಾಗಿ ಮಾತನಾಡಿದರು.
ಸ್ವಾಮಿ ವಿವೇಕಾನಂದರ ಜೀವನದ ಪ್ರಮುಖ ಘಟ್ಟದ ಕುರಿತು, ತತ್ವಸಂದೇಶ, ಬಗ್ಗೆ ಡಾ.ಎ.ಸಿ.ವಾಲಿ ಸವಿಸ್ತಾರವಾಗಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ.ಬಿ.ಎನ್.ಹೊಸಮನಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ರೂಪಿಸುವುದರಲ್ಲಿ ತಂದೆ-ತಾಯಿ ಪಾತ್ರ ಮುಖ್ಯವಾಗಿದ್ದು, ಬದುಕಿನುದ್ದಕ್ಕೂ ಕಷ್ಟಕಾರ್ಪಣ್ಯಗಳನ್ನುಂಡು ಉತ್ತಮ ಸಂಸ್ಕಾರ, ಉಜ್ವಲ ಜೀವನ ರೂಪಿಸಿಕೊಟ್ಟ ಮಾತಾಪಿತೃರನ್ನು ವೃದ್ದಾಪ್ಯವಸ್ಥೆಯಲ್ಲಿ ಕಾಳಜಿಪೂರ್ವಕ  ಆಶ್ರಯ, ಆರೋಗ್ಯ ಬಗ್ಗೆ ಗಮನಹರಿಸಿ ರಕ್ಷಣೆ ಮಾಡಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ವಾಯ್.ಆಯ್.ಚವ್ಹಾಣ ಉಮಾದೇವಿ ಕಣವಿ, ಗೀತಾ ಹಿರೇಮಠ, ಎಸ್.ಎಸ್.ಸೂಡಿ, ಶ್ರೀಧರ ಲೋಣಕರ, ಪಿ.ಎಸ್.ಹಿರೇಗೌಡರ, ಶಿವರಾಜ ಎಮ್.ಕೆ. ಸೀಮಾ ಗ್ರಾಂಪುರೋಹಿತ್, ಅಧ್ಯಾಪಕರ ವೃಂದ, ಸಿಬ್ಬಂದಿ ವರ್ಗ, ವಿದ್ಯಾರ್ಥಿ-ವಿರ್ದ್ಯಾನಿಯರು ಉಪಸ್ಥಿತರಿದ್ದರು.  
ಜ್ಯೋತಿಕಾ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಭವನೇಶ್ವರಿ ಐಗರಿ.ಸ್ವಾಗತಿಸಿದರು. ಫಕ್ಕೀರವ್ವ ತೋಟಕಾವು ನಿರೂಪಿಸಿದರು. ವಿಜಯಲಕ್ಷ್ಮಿ ಪಾಟೀಲ ವಂದಿಸಿದರು. 

Related posts

ಭಂಡಿವಾಡ ಶ್ರೀ ಮಾರುತಿ ದೇವರ ಕಾರ್ತಿಕೋತ್ಸವ

eNEWS LAND Team

ವಿದ್ಯಾರ್ಥಿಗಳಿಗೆ ಬಸ್‍ಪಾಸ್‍ಗಾಗಿ ಆನ್‍ಲೈನ್ ಅರ್ಜಿ ಆಹ್ವಾನ

eNewsLand Team

ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನಕ್ಕೆ ಭೂಮಿಪೂಜೆ

eNEWS LAND Team