29.4 C
Hubli
ಏಪ್ರಿಲ್ 29, 2024
eNews Land
ಸಣ್ಣ ಸುದ್ದಿ

ಶಕ್ತಿ ಯೋಜನೆ ಖಂಡಿಸಿ ಅಟೋ ಚಾಲಕರ ಪ್ರತಿಭಟನೆ

ಇಎನ್ಎಲ್ಅಣ್ಣಿಗೇರಿ: ಪಟ್ಟಣದ ಅಮೃತೇಶ್ವರ ಅಟೋ ಚಾಲಕರ ಸಂಘದ ಅಟೋ ಮಾಲಿಕರು, ಚಾಲಕರು, ವಿವಿಧ ಬೇಡಿಕೆಗೆ ಆಗ್ರಹಿಸಿ ಸರ್ಕಾರದ ಗ್ಯಾರಂಜಿ ಯೋಜನೆ ಖಂಡಿಸಿ ಅಮೃತೇಶ್ವರ ಮೈದಾನದಿಂದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಸಮಾವೇಶಗೊಂಡು ತಹಶೀಲ್ದಾರ ಶಿವಾನಂದ ಹೆಬ್ಬಳ್ಳಿ ಅವರಿಗೆ ಮನವಿ ಸಲ್ಲಿಸಿದರು.

ಶಕ್ತಿ ಯೋಜನೆ ಜಾರಿಯಾದ ನಂತರ ಸರ್ಕಾರಿ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಿದೆ. ಸುತ್ತಮುತ್ತಲಿನ ಧರ್ಮಕ್ಷೇತ್ರಗಳಿಗೆ ತೆರಳಲು ಶೇ.90 ರಷ್ಟು ಮಹಿಳೆಯರು ಬಸ್‌ಗಳಲ್ಲಿ ಸಂಚರಿಸುತ್ತಿದ್ದಾರೆ. ದಿನನಿತ್ಯ ಸಂಚರಿಸುವ ವಿದ್ಯಾರ್ಥಿಗಳು, ಪುರಷರು, ಉದ್ಯೋಗಿಗಳು ಪ್ರಯಾಣಿಸೋದು ಕಷ್ಟಕರವಾಗಿದೆ. 50 ಜನರು ಸಂಚರಿಸುವ ಬಸ್‌ಗಳಲ್ಲಿ ನೂರಕ್ಕೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದಾರೆ. ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಪಟ್ಟಣಕ್ಕೆ ಬರುವ ವಿದ್ಯಾರ್ಥಿಗಳಿಗೆ ಕಾಲೇಜ ಸಮಯಕ್ಕೆ ಬಸ್ ಸೌಲಭ್ಯವಿಲ್ಲದೇ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳುತಿದೆ. ಗ್ರಾಮೀಣ ಹದೆಗೆಟ್ಟ ರಸ್ತೆಗಳಲ್ಲಿ ಸಂಚರಿಸಲು ಬಸ್ ಸೌಲಭ್ಯವಿಲ್ಲದೇ ಜನರು ಪರದಾಡುವಂತಾಗಿದೆ. ಎಂದು ಅಲ್ಲಮಪ್ರಭು ದಿಡ್ಡಿ ಅರೋಪಿಸಿದರು. 

ಅಟೋ, ಟ್ಯಾಕ್ಷಿ, ವಿವಿಧ ಎಲ್ಲೋ (ಹಳದಿ) ಬೋರ್ಡ,  ಖಾಸಗಿ ಬಾಡಿಗೆ ವಾಹನಗಳಿಗೆ ಸಂಚರಿಸಲು ನಿತ್ಯ ಪ್ರಯಾಣಿಕರಿಲ್ಲದೇ ಸಂಕಷ್ಟ ಪರಿಸ್ಥಿತಿ ಎದುರಾಗಿದೆ. ದಿನಸಿ ತರಕಾರಿ ಬೆಲೆ ಗಗನಕ್ಕೇರಿದ್ದು ಕುಟುಂಬ ನಿರ್ವಹಣೆ ಮಾಡೋದು ಕಷ್ಟವಾಗಿದೆ. ಅದೆಷ್ಟೋ ಚಾಲಕರು ದುಡಿಮೆಯಿಲ್ಲದೇ ಒಂದು ಹೊತ್ತಿನ ಊಟಕ್ಕೂ ಲೆಕ್ಕಹಾಕಿ ಬದುಕು ನಿರ್ವಹಣೆ ಮಾಡಬೇಕಿದೆ. ತಕ್ಷಣವೇ ಸರ್ಕಾರ ನಮ್ಮ ಬೇಡಿಕೆ ಪರಿಗಣಿಸಿ ಸೂಕ್ತ ಕ್ರಮಕೈಗೊಳ್ಳಬೇಕೆಂದು ಭರತೇಶ ಜೈನ, ಆಗ್ರಹಿಸಿದರು. 

ಈ ಸಂದರ್ಭದಲ್ಲಿ ಸುರೇಶ ಮಂಗಳೂರ, ಅಶೋಕ ಅಜ್ಜಿ, ಆಟೋ ಚಾಲಕರ ಸಂಘದ ಪದಾಧಿಕಾರಿಗಳು ಸದಸ್ಯರು, ಚಾಲಕರು, ಉಪಸ್ಥಿತರಿದ್ದರು.  

Related posts

ಕಿತ್ತೂರ ರಾಣಿ ಚೆನ್ನಮ್ಮನ ಆದರ್ಶ ಪ್ರಸಕ್ತ ಸಮಾಜಕ್ಕೆ ಮಾದರಿ

eNEWS LAND Team

ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನಕ್ಕೆ ಭೂಮಿಪೂಜೆ

eNEWS LAND Team

ಹಳೇ ಹುಬ್ಬಳ್ಳಿ ವೀರಭದ್ರೇಶ್ವರ ಜಾತ್ರೆ!

eNEWS LAND Team