24.3 C
Hubli
ಮೇ 26, 2024
eNews Land
ಸಣ್ಣ ಸುದ್ದಿ

ಅಣ್ಣಿಗೇರಿ ತಾಲೂಕ ಹೂಗಾರ ಸಮಾಜ ಸೇವಾ ಘಟಕದಿಂದ ಶಿವಶರಣ ಮಾದಯ್ಯನವರ ಜಯಂತಿ

ಇಎನ್‌ಎಲ್ ಅಣ್ಣಿಗೇರಿ: ಶಿವಶರಣ ಮಾದಯ್ಯನವರ ಕಾಯಕ, ನಿಷ್ಠೆ, ಆಧ್ಯಾತ್ಮ ಚಿಂತನೆ, ವಚನ ಸಂದೇಶಗಳು, ಬದುಕಿನ ಮೌಲ್ಯಗಳು, ಹಿಂದೆ-ಇoದು-ಮುoದು  ಎಂದೆoದು ಸಮಾಜದ ಭಾಂದವರು ಒಪ್ಪಿಕೊಂಡು ಗುರು ತೋರಿದ ಸನ್ಮಾರ್ಗದಲ್ಲಿ ಮುನ್ನೆಡೆಸುವ ದೈವಿಪುರುಷರಾಗಿದ್ದರು. 12ನೇ ಶತಮಾನದ ಸುವರ್ಣ ಯುಗದಲ್ಲಿ ಶರಣರ ಸತ್ಸಂಗದಲ್ಲಿ ಶಿವಶರಣ ಮಾದಯ್ಯನವರ ಕರ್ತವ್ಯನಿಷ್ಠೆ ಪ್ರಾಮಾಣಿಕತೆ, ಭಕ್ತಿ, ಶೃದ್ಧೆ, ಆಚಾರ, ವಿಚಾರ, ಸಂಪ್ರದಾಯ, ಸತ್ಯಶುದ್ಧಕಾಯಕದಿಂದ ಶಿವನೊಲುಮೆಗೆ ಪಾತ್ರರಾಗಿದ್ದರೆಂದು ಅಣ್ಣಿಗೇರಿ ತಾಲೂಕ ಹೂಗಾರ ಸಮಾಜ ಸೇವಾ ಘಟಕದ ಗೌರವಾಧ್ಯಕ್ಷ ಅರುಣಕುಮಾರ ಹೂಗಾರ ಹೇಳಿದರು.

ಅಣ್ಣಿಗೇರಿ ತಾಲೂಕ ಹೂಗಾರ ಸಮಾಜ ಸೇವಾ ಘಟಕ ಆಯೋಜಿಸಿದ ಶಿವಶರಣ ಮಾದಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧ್ಯಕ್ಷತೆವಹಿಸಿದ ಅಣ್ಣಿಗೇರಿ ತಾಲೂಕ ಹೂಗಾರ ಸಮಾಜ ಸೇವಾ ಘಟಕದ ಅಧ್ಯಕ್ಷ ಸೋಮು ಹೂಗಾರ ಮಾತನಾಡಿ ತಾಲೂಕಿನ ಸಮಾಜ ಭಾಂದವರು ಶಿವಶರಣ ಮಾದಯ್ಯ ಜಯಂತಿಯನ್ನು ಅಚರಿಸುತ್ತಿರೋದು ಸಂತಸ ತಂದಿದೆ. ಸಮಾಜದ ಸಂಘಟನೆ, ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಅಭಿವೃದ್ಧಿ ಪಥದತ್ತ ಸಾಗಬೇಕಾದರೆ ತಮ್ಮೆಲ್ಲರ ಪ್ರೀತಿ ವಿಶ್ವಾಸ, ಸಹಕಾರ,ತನು-ಮನ-ಧನದಿಂದ  ನಿರಂತರ ಸಮಾಜ ಎಳ್ಗೆಗೆ  ಒಗ್ಗಟ್ಟಿನ ಮಂತ್ರಪಾಲನೆ ಮೈಗೂಡಿಸಿಕೊಂಡು ಕಾರ್ಯತತ್ಪರಾದರೇ ಜಿಲ್ಲೆಯಲ್ಲಿ ಮಾದರಿ ಹೂಗಾರ ಸಮಾಜವನ್ನು ಕಟ್ಟಿಬೆಳೆಸಲು ಸಾಧ್ಯವೆಂದರು.
ಈ ಸಂದರ್ಭದಲ್ಲಿ ಚಂದ್ರಶೇಖರ ಹೂಗಾರ, ರಾಜು ರಬರವಿ, ಅಮೃತಪ್ಪ ಹೂಗಾರ, ವೀಣಾ, ಶೈಲಾ, ಪ್ರಭಾವತಿ, ನೀಲಾ, ನಿರ್ಮಲಾ, ರತ್ನವ್ವ, ಅನಸವ್ವ, ಶಾಂತವ್ವ, ಬಸವರಾಜ, ವಿಜಯ, ಮಹೇಶ, ಶೇಖರ ಹೂಗಾರ ಬಂಧುಗಳು ಉಪಸ್ಥಿತರಿದ್ದರು.

Related posts

ಅಣ್ಣಿಗೇರಿ ಸ್ಥಿರಾಸ್ತಿಗಳ ಮಾರುಕಟ್ಟೆ ಬೆಲೆ ಪರಿಷ್ಕರಣೆ : ಆಕ್ಷೇಪಣೆ ಆಹ್ವಾನ

eNEWS LAND Team

ಸೇತುವೆ ನಿರ್ಮಾಣ ಕಾಮಗಾರಿಗೆ ಚಾಲನೆ

eNEWS LAND Team

ಪಿಡಿಓ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕೆಂದ ಜಿ.ಪಂ ಸಿಇಓ

eNEWS LAND Team