33 C
Hubli
ಏಪ್ರಿಲ್ 25, 2024
eNews Land
ರಾಜಕೀಯ

ಬಿಜೆಪಿ ಚುನಾವಣಾ ಭಯದಿಂದಾಗಿ ತಾಪಂ ಜಿಪಂ ಚುನಾವಣೆ ನಡೆಸಿಲ್ಲ ; ಎಚ್.ಕೆ.ಪಾಟೀಲ್ ಟೀಕೆ

ಇಎನ್ಎಲ್ ಧಾರವಾಡ

ಬಿಜೆಪಿ ಸೋಲಿನ ಭಯದಿಂದ ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯನ್ನು ಮುಂದೂಡುತ್ತಿದೆ. ಈ ಕಾರಣಕ್ಕೆ ಸ್ಥಳೀಯ ಸಂಸ್ಥೆಯಿಂದ ವಿಧಾನ ಪರಿಷತ್ತಿಗೆ ನಡೆವ ಚುನಾವಣೆಯಲ್ಲಿ ಮತದಾರರು ಕಡಿಮೆ ಆಗಿದ್ದಾರೆ ಎಂದು ಮಾಜಿ ಸಚಿವ ಎಚ್.ಕೆ. ಪಾಟೀಲ್ ಅಸಮಾಧಾನ ವ್ಯಕ್ತಪಡಿಸಿದರು.

ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ನಾಮಪತ್ರ ಸಲ್ಲಿಕೆ ವೇಳೆ ಮಾದ್ಯಮದ ಜತೆ ಮಾತನಾಡಿದ ಅವರು, ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಸದಸ್ಯ ಮತದಾರರು ಹೆಚ್ಚಾಗಿದ್ದರೆ ಒಳ್ಳೆಯದು. ಇರಲೇಬೇಕು ಎಂದೇನಿಲ್ಲ. ಚುನಾವಣೆ ಮೇಲೆ ಹೆಚ್ಚಿನ ಪರಿಣಾಮ ಉಂಟಾಗುವುದಿಲ್ಲ.
ಆದರೆ ರಾಜ್ಯ ಸರ್ಕಾರ ಚುನಾವಣಾ ಭಯದಿಂದಾಗಿ ಬಿಜೆಪಿ ಜಿಪಂ, ತಾಪಂ ಚುನಾವಣೆಯನ್ನು ವಿಳಂಬ ಮಾಡುತ್ತಿದೆ. ಇದು ಕರ್ನಾಟಕ ಗ್ರಾಮ ಸ್ವರಾಜ್ ಹಾಗೂ ಪಂಚಾಯತ ರಾಜ್ ಕಾನೂನಿಗೆ‌ ವ್ಯತಿರಿಕ್ತವಾಗಿ ನಡೆಯುವುದು ಮಾತ್ರವಲ್ಲದೆ, ಸಂವಿಧಾನದ 73, 74ನೇ ತಿದ್ದುಪಡಿ ಮೂಲಕ ತಿಳಿಸಲಾದ ಸದಸ್ಯರ ಅವಧಿ ಮುಗಿಯುವ ಪೂರ್ವದಲ್ಲಿ ಚುನಾವಣೆ ಮಾಡಬೇಕು ಎಂಬ ಉಲ್ಲಂಘನೆ ಮಾಡಿದಂತಾಗುತ್ತದೆ. ಇದು ಅತ್ಯಂತ ದುರ್ದೈವದ ಸಂಗತಿಯಾಗಿದೆ. ಇದು ಬಿಜೆಪಿಯವರಿಗೆ ಸ್ಥಳೀಯ ಸಂಸ್ಥೆಗಳ ಕುರಿತು ಇರುವ ಅನಾಧರವನ್ನು‌ ತೋರುತ್ತದೆ ಎಂದು ಎಚ್.ಕೆ.ಪಾಟೀಲ್ ಟೀಕಿಸಿದರು.

ಎಲ್ಲ ಹಿರಿಯ ನಾಯಕರ ಒಪ್ಪಿಗೆ ಮೇರೆಗೆ ಎಸ್.ಆರ್.ಪಾಟೀಲ್ ಅವರ ಬದಲು ಇನ್ನೊಬ್ಬ ನಾಯಕರಿಗೆ ಟಿಕೆಟ್ ನೀಡಲಾಗಿದೆ. ಪಾಟೀಲರು ಕೂಡ ಸಮ್ಮತಿ ವ್ಯಕ್ತಪಡಿಸಿದ್ದಾರೆ.

ಪಕ್ಷದ‌ ಒಳಗೆ ಟಿಕೆಟಿಗಾಗಿ ಪೈಪೋಟಿ ಸಾಮಾನ್ಯ ವಿಷಯ. ಕೆಲವೆಡೆ ಪ್ರಬುದ್ಧ ನಾಯಕರು ಇಲ್ಲದ ಸಂದರ್ಭದಲ್ಲಿ ಬಹಿರಂಗವಾಗಿ ಅಸಮಾಧಾನ ಹೊರಹಾಕುತ್ತಾರೆ. ಅದಕ್ಕೆ ವಿಶೇಷ ಮಹತ್ವ ಇರುವುದಿಲ್ಲ. ಹೀಗಾಗಿ ಅದರ ಬಗ್ಗೆ ಹೆಚ್ಚಿನ ಮಾತನಾಡಲ್ಲ ಎಂದರು.

ಧಾರವಾಡದಲ್ಲಿ ಎರಡು ಅಭ್ಯರ್ಥಿ ಬದಲಾಗಿ ಒಬ್ಬರನ್ನೇ ಕಣಕ್ಕಿಳಿಸಿದ ಬಗ್ಗೆ ಮಾತನಾಡಿ, ಕೋಟಾ ವ್ಯವಸ್ಥೆ ಇರುವಾಗ ಒಬ್ಬರನ್ನೇ ಸ್ಪರ್ಧೆಗೆ ಇಳಿಸಬೇಕಾದ ಅನಿವಾರ್ಯತೆ ಇರುತ್ತದೆ. ಹೀಗಾಗಿ ಹಿಂದಿನಿಂದಲೂ ಒಬ್ಬರನ್ನೆ ನಾವು ಅಭ್ಯರ್ಥಿಯಾಗಿ ಕಣಕ್ಕೆ ಇಳಿಸುತ್ತಿದ್ದೇವೆ ಎಂದರು.

ಪಕ್ಷೇತರ ಅಭ್ಯರ್ಥಿ ಬಿ.ಎಸ್.ಕೊಟಗಿ, ಬಿಜೆಪಿ ಅಭ್ಯರ್ಥಿ ಪ್ರದೀಪ್ ಶೆಟ್ಟರ್, ಜನತಾ ಪಕ್ಷದಿಂದ ಪಕ್ಕೀರೆಡ್ಡಿ ಅಅತ್ತಿಗೇರಿ ಹಾಗೂ ಶಿವಕುಮಾರ್ ತಳವಾರ್, ಪಕ್ಷೇತರ ಮಲ್ಲಿಕಾರ್ಜುನ ಹಾವೇರಿ, ಕಾಂಗ್ರೆಸ್ ಅಭ್ಯರ್ಥಿ ಸಲೀಂ ಅಹ್ಮದ್ ನಾಮಪತ್ರ ಸಲ್ಲಿಕೆ ಮಾಡಿದರು

Related posts

2 ದಿನಗಳಲ್ಲಿ ಗೊಂದಲ ಬಗೆಹರಿಯಲಿದೆ: ಸಿಎಂ ಬೊಮ್ಮಾಯಿ

eNEWS LAND Team

ಪರಿಷತ್ ಕದನ; ನಾಮಪತ್ರ ಸಲ್ಲಿಸಿದ ಗುರಿಕಾರ, ಗಡದಿನ್ನಿ

eNewsLand Team

ವಿಧಾನ ಪರಿಷತ್ ಚುನಾವಣೆ: ಫಲಿತಾಂಶ ತೃಪ್ತಿ ತಂದಿದೆ: ಸಿಎಂ ಬೊಮ್ಮಾಯಿ

eNEWS LAND Team