24.3 C
Hubli
ಮೇ 26, 2024
eNews Land
ರಾಜಕೀಯ

ಪರಿಷತ್ ಕದನ; ನಾಮಪತ್ರ ಸಲ್ಲಿಸಿದ ಗುರಿಕಾರ, ಗಡದಿನ್ನಿ

ಇಂದು ಐದು ಜನ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಇಎನ್ಎಲ್ ಧಾರವಾಡ:

ವಿಧಾನ ಪರಿಷತ್ತಿನ ಕರ್ನಾಟಕ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಸ್ಪರ್ಧಾಕಾಂಕ್ಷಿಗಳಾಗಿ ಇಂದು ಐದು ಜನ ಅಭ್ಯರ್ಥಿಗಳು ಸಹಾಯಕ ಚುನಾವಣಾಧಿಕಾರಿಗಳಾಗಿರುವ, ಧಾರವಾಡ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ನಾಮಪತ್ರಗಳನ್ನು ಪ್ರತ್ಯೇಕವಾಗಿ ಸಲ್ಲಿಸಿದರು.

ಕಾಂಗ್ರೇಸ್ ಪಕ್ಷದ ಅಭ್ಯರ್ಥಿಯಾಗಿ ಬಸವರಾಜ ಗುರಿಕಾರ ಅವರು ದ್ವಿಪ್ರತಿಯಲ್ಲಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕರಾದ ಎಚ್.ಕೆ.ಪಾಟೀಲ, ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್, ಮಾಜಿ ಸಭಾಪತಿ ವೀರಣ್ಣ ಮತ್ತಿಗಟ್ಟಿ ಇದ್ದರು.

ಜೆಡಿಎಸ್ ಪಕ್ಷದ ಅಭ್ಯರ್ಥಿಯಾಗಿ ಶ್ರೀಶೈಲ ಗುಡದಿನ್ನಿ ನಾಮಪತ್ರ ಸಲ್ಲಿಸಿದರು. ಇವರೊಂದಿಗೆ ಮುಖಂಡರಾದ ಗುರುರಾಜ ಹುಣಸಿಮರದ, ದೇವರಾಜ ಕಂಬಳಿ, ಇತರರು ಇದ್ದರು.

ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಬಸವರಾಜ ಹೊರಟ್ಟಿ ನಾಮಪತ್ರ ಸಲ್ಲಿಕೆ: ರೆಕಾರ್ಡ್!!

ಪಕ್ಷೇತರ ಅಭ್ಯರ್ಥಿಯಾಗಿ ಕೃಷ್ಣವಾಣಿ ಶ್ರೀನಿವಾಸಗೌಡ, ಕರಿಬಸಪ್ಪ ಪಿ.ಎಂ, ತುಳಸಪ್ಪ ಕೆ. ದಾಸರ ಅವರು ನಾಮಪತ್ರ ಸಲ್ಲಿಸಿದರು. ಮತ್ತು ಪಕ್ಷೇತರ ಅಭ್ಯರ್ಥಿ ವೆಂಕನಗೌಡ ಆರ್. ಗೋವಿಂದಗೌಡರ ಇಂದು ಸಹ ನಾಮಪತ್ರ ಸಲ್ಲಿಸಿದರು.

Related posts

ಬೆಂಗಳೂರು ಮಿಷನ್ 2022 ಪ್ರಗತಿ ಪರಿಶೀಲನೆ ನಡೆಸಿದ ಸಿಎಂ ಬೊಮ್ಮಾಯಿ

eNEWS LAND Team

ರಿಪೋರ್ಟ್ ಕಾರ್ಡ್ ಮುಂದಿಟ್ಟು ಬಹುಮತ ಸಾಧಿಸಲಿದ್ದೇವೆ: ಜೆ.ಪಿ.ನಡ್ಡಾ

eNewsLand Team

ಬಿಟ್ ಕಾಯಿನ್; ಪ್ರಧಾನಿ ನರೇಂದ್ರ ಮೋದಿ ಗರಂ ಆದ್ರಾ? ಸಿಎಂಗೆ ಅಭಯ ನೀಡಿದ್ರಾ?

eNewsLand Team