24 C
Hubli
ಮಾರ್ಚ್ 21, 2023
eNews Land
ರಾಜಕೀಯ

ಧಾರವಾಡ ಎಂಎಲ್ಸಿ ಚುನಾವಣೆ: ಪ್ರದೀಪ್ ಶೆಟ್ಟರ್ ನಾಮಪತ್ರ ಸಲ್ಲಿಕೆ

Listen to this article

ಇಎನ್ಎಲ್ ಧಾರವಾಡ

ವಿಧಾನ ಪರಿಷತ್ ಚುನಾವಣೆ ಧಾರವಾಡದಲ್ಲಿ ಬಿಜೆಪಿ ಅಭ್ಯರ್ಥಿ ಪ್ರದೀಪ ಶೆಟ್ಟರ್ ನಾಲ್ಕು ಸೆಟ್ ಗಳಲ್ಲಿ ಉಮೇದುವಾರಿಕೆ ಸಲ್ಲಿಕೆ ಮಾಡಿದರು.

ನಗರದ ನೌಕರರ ಭವನದ ಎದುರಿಂದ ಭರ್ಜರಿ ಮೆರವಣಿಗೆಯಲ್ಲಿ ಆಗಮಿಸಿದ ಅವರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿ ನಾಮಪತ್ರ ಸಲ್ಲಿಕೆ ಮಾಡಿದರು.

ಬಳಿಕ ಮಾತನಾಡಿದ ಅವರು, ಧಾರವಾಡ ಕ್ಷೇತ್ರಕ್ಕೆ ಮೂರನೇ ಬಾರಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಕಳೆದ ಆರು ವರ್ಷದಿಂದ ಬಿಜೆಪಿ ಎಂಎಲ್‌ಸಿ ಆಗಿದ್ದೆ. ಪರಿಷತ್ ಒಳಗೆ, ಹೊರಗೆ ಹೋರಾಟಗಳನ್ನು ಮಾಡಿದ್ದೇವೆ ಎಂದರು.

ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದೇನೆ. ಅನುದಾನ ತಂದು ಗ್ರಾಪಂಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇನೆ. ಮೂರನೇ ಸಲ ಇವತ್ತು ಬಿಜೆಪಿ ಟಿಕೆಟ್ ಕೊಟ್ಟಿದೆ. ಈ ಸಲವೂ ಗೆದ್ದು ಜಯಶಾಲಿಯಾಗಿ ಬರುವೆ. ಮುಂದಿನ ಆರು ತಿಂಗಳಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡುವೆ ಎಂದರು.

Related posts

ಉಮ್ಮಳಿಸಿ ಬಂದ ದುಃಖ ತಡೆದು ಮಾತನಾಡಿದ ಸಿಎಂ; ಯಾಕೆ ಗೊತ್ತಾ? ಇದು ದೇಶದ ವಿಷ್ಯ!!

eNewsLand Team

ಪ್ರಲ್ಹಾದ ಜೋಶಿ ಕಚೇರಿಯಲ್ಲಿ ದೀಪಾವಳಿ

eNEWS LAND Team

ಮಂಡ್ಯದಲ್ಲಿ ಅಮಿತ್ ಶಾ ಸಮಾವೇಶಕ್ಕೆ ಲಕ್ಷ ಜನರ ನಿರೀಕ್ಷೆ: ಎಸ್.ಟಿ.ಸೋಮಶೇಖರ್

eNEWS LAND Team