24 C
Hubli
ಸೆಪ್ಟೆಂಬರ್ 27, 2023
eNews Land
ರಾಜಕೀಯ

ಜೆಡಿಎಸ್ ಪಕ್ಷದ ನೂತನ ಕಾರ್ಯಲಯ ಉದ್ಘಾಟನೆ

ಇಎನ್ಎಲ್ ಅಣ್ಣಿಗೇರಿ: ತಾಲೂಕಿನ ಮುಂಬರುವ ಪುರಸಭೆ ಚುನಾವಣೆ ಹಿನ್ನಲೆಯಲ್ಲಿ ಪಕ್ಷದ ಅಭ್ಯರ್ಥಿ ಗೆಲವುವಿನಲ್ಲಿ ಆಸಕ್ತಿವಹಿಸಿ ಪ್ರಾಮಾಣಿಕ ಸೇವೆಗೈದು, ಜೆಡಿಎಸ್ ಸದಸ್ಯರು ಪಣತೊಡುವುದರ ಮೂಲಕ ಪಟ್ಟಣದ ಸಮಗ್ರ ಅಭಿವೃದ್ದಿಗೆ ಕಾರಣಕರ್ತರಾಗಬೇಕೆಂದು ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ ಅಭಿಪ್ರಾಯಪಟ್ಟರು.
ಪಟ್ಟಣದ ಕೆರಿಓಣಿಯ ಬೆಂತೂರ ಅವರ ಕಟ್ಟಡದಲ್ಲಿ ನೂತನವಾಗಿ ಪ್ರಾರಂಭಿಸಿದ  ಜೆಡಿಎಸ್.ಪಕ್ಷದ ಕಾರ್ಯಲಯ, ಸದಸತ್ವ ಅಭಿಯಾನ, ಉದ್ಘಾಟನೆ ನೇರವೆರಸಿ ಮಾತನಾಡಿದರು.
ನಂತರ ಮಾತನಾಡಿ, ಪಟ್ಟಣದ 23 ವಾರ್ಡುಗಳಿಗೆ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೆ ಇಳಿಸಿ ಗೆಲವು ಸಾಧಿಸುವ ಮೂಲಕ ಪುರಸಭೆಯಲ್ಲಿ  ಜೆಡಿಎಸ್. ಪಕ್ಷ ಆಡಳಿತ ಚುಕ್ಕಾಣಿ ಹಿಡಿಯಬೇಕಿದೆ. 2018 ರಿಂದ 2021 ರವೆಗೆ ಯಾವುದೇ ಅತಿವೃಷ್ಟಿ ಪರಿಹಾರ, ಬೆಳೆವಿಮೆ, ರೈತರ ಖಾತೆಗೆ ಜಮಾ ಆಗಿಲ್ಲ. ಖಾಸಗಿ ಕಂಪನಿಗಳ ಬದಲಾಗಿ ಎಲ್.ಆಯ್.ಸಿ.ಮೂಲಕ ಬೆಳೆವಿಮೆ ಯೋಜನೆ ಜಾರಿಗೆ ತರಬೇಕೆಂದರು. ಪಟ್ಟಣದಲ್ಲಿ ದ್ವಿಪಥ ರಸ್ತೆ, ರೈತರ ಜಮೀನುಗಳಿಗೆ ಸಂಚರಿಸಲು ಚಕ್ಕಡಿ ರಸ್ತೆ, ನಿರ್ಮಾಣ ನನ್ನ ಆಡಳಿತದಲ್ಲಿ ಕೈಗೊಂಡಷ್ಟು ಅಭಿವೃದ್ಧಿ ಮತ್ಯಾರು ಮಾಡಿಲ್ಲವೆಂದರು.
ವಾಯುಭಾರ ಕುಸಿತದಿಂದ ನಿರಂತರ ಅತಿವೃಷ್ಟಿ ಮಳೆಗೆ ಬೆಳೆಹಾನಿಯಾಗಿದ್ದು, ರೈತರು ಆರ್ಥಿಕವಾಗಿ ಸಂಕಷ್ಟ ಪರಿಸ್ಥಿತಿಯಲ್ಲಿ ಪರದಾಡಬೇಕಿದೆ. ವಿಮಾ ಅಧಿಕಾರಿಗಳು ಕೇವಲ ಹಳ್ಳದ ಪಕ್ಕದಲ್ಲಿರುವ ಹೊಲಗದ್ದೆಗಳ ಜಮೀನು ಸಮೀಕ್ಷೆ ಮಾಡಿ, ಇನ್ನುಳಿದ ಜಮೀನುಗಳನ್ನು ಪರಿಗಣಿಸದೇ ಪರಿಹಾರ ನೀಡುತ್ತಿದ್ದಾರೆ. ರೈತ ಸಮೂಹದಲ್ಲಿ ಮಲತಾಯಿ ಧೋರಣೆ ಮಾಡುತ್ತಿರೋದು ಸೂಕ್ತವಲ್ಲ. ತಾಲೂಕಿನ ಎಲ್ಲಾ ರೈತರ ಜಮೀನುಗಳ ಬೆಳೆ ಹಾನಿ ಸಮೀಕ್ಷೆ ಮಾಡಿ ಪರಿಹಾರ ನೀಡಬೇಕೆಂದು ಸರ್ಕಾರಕ್ಕೆ ತಹಶೀಲ್ದಾರ ಮೂಲಕ ಮಾನ್ಯ ಮುಖ್ಯಮಂತ್ರಿಯವರಿಗೆ ಮನವಿ ನೀಡಲಾಗಿದೆ.ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಬಿ.ಬಿ.ಗಂಗಾಧರಮಠ ಮಾತನಾಡಿ ಪಕ್ಷದ ಕಾರ್ಯಕರ್ತರು ನಿಷ್ಠೆ ಪ್ರಾಮಾಣಿಕತೆಯಿಂದ ಬರುವ ಪುರಸಭೆ, ತಾ.ಪಂ. ಜಿ.ಪಂ. ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಹೆಚ್ಚಿನ ಸ್ಥಾನ ಗೆಲ್ಲುವ ನಿಟ್ಟಿನಲ್ಲಿ ಶ್ರಮವಹಿಸಿ ಕೆಲಸಮಾಡಬೇಕೆಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಅಣ್ಣಿಗೇರಿ ತಾಲೂಕ ಜೆಡಿಎಸ್.ಅಧ್ಯಕ್ಷ ಪ್ರದೀಪ ಲೆಂಕಿನಗೌಡ್ರ, ಭಗವಂತ ಪುಟ್ಟಣ್ಣವರ, ಶಿವಶಂಕರ ಕಲ್ಲೂರ, ಹಸನಸಾಬ ಘೂಡುನಾಯ್ಕರ, ಲಕ್ಷ್ಮಣ ಬೆಂತೂರ, ಬಸಪ್ಪ ಬೀರಣ್ಣವರ, ಜೀವನ್ ಪವಾರ, ನಾರಾಯಣ ಮಾಡೊಳ್ಳಿ, ದಾವಲಸಾಬ ದರವಾನ, ಕಾರ್ಯಕರ್ತರು ಉಪಸ್ಥಿತರಿದ್ದರು.

Related posts

ಜನ ಸ್ವರಾಜ್ ಯಾತ್ರೆಗೆ ಕಹಳೆ ಊದಿ ಚಾಲನೆ

eNewsLand Team

ಸಿಎಂ ಬೊಮ್ಮಾಯಿ‌ ಬಗ್ಗೆ ಹಿಂದೊಮ್ಮೆ ಆ ಗಾದಿ ಆಕಾಂಕ್ಷಿತ ಬೆಲ್ಲದ್ ಹೇಳಿದ್ದೇನು? ಆಶ್ಚರ್ಯ ಪಡ್ತೀರಿ!!

eNewsLand Team

ಬಿಜೆಪಿಗೆ ನಟ ಸುದೀಪ್ ಬೆಂಬಲ: ಸಿಎಂ ಬೊಮ್ಮಾಯಿ

eNEWS LAND Team