27 C
Hubli
ಮೇ 25, 2024
eNews Land
ರಾಜಕೀಯ ಸುದ್ದಿ

ಎಚ್.ಡಿ.ಕುಮಾರಸ್ವಾಮಿ ನೇತೃತ್ವಲ್ಲಿ ಅರಮನೆ ಶಂಕರ್ ಪರ ಮತಯಾಚನೆ: ಬಸವನಗುಡಿ ಕ್ಷೇತ್ರದಲ್ಲಿ ಪ್ರಚಾರಕ್ಕೆ ಚಾಲನೆ

ಸಿದ್ದರಾಮಯ್ಯ, ಸುರ್ಜೇವಾಲಾ ವಿರುದ್ಧ ಬಿಜೆಪಿ ದೂರು

ಇಎನ್ಎಲ್ ಬೆಂಗಳೂರು:
ಬಸವನಗುಡಿ ವಿಧಾನಸಭೆ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಬಂಡಿ ಮಹಾಕಾಳಿ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ `ಮನೆ ಮನೆಗೆ ಭೇಟಿ’ ಚುನಾವಣಾ ಪ್ರಚಾರಕ್ಕೆ ಶುಕ್ರವಾರ ಚಾಲನೆ ನೀಡಿದರು.
ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅರಮನೆ ಶಂಕರ್ ಅವರು ಎಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ಬಿರುಸಿನ ಮತಭೇಟಿ ಆರಂಭಿಸಿದ್ದು, ಇದೇ ವೇಳೆ ಮಹಿಳೆಯರ ರಕ್ಷಣೆ, ವಿದ್ಯಾರ್ಥಿಗಳ ಹಿತ, ಹಿರಿಯ ನಾಗರಿಕರ ಆರೋಗ್ಯದ ಕಾಳಜಿ ಇತ್ಯಾದಿ ಅಂಶಗಳನ್ನು ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ದೇವಾಲಯದ ಸನ್ನಿಧಾನದಲ್ಲಿ ಬಿಡುಗಡೆ ಮಾಡಲಾಯಿತು.

ಹುಬ್ಬಳ್ಳಿ-ಬೆಂಗಳೂರು ನಡುವೆ ಸೂಪರ್ ಫಾಸ್ಟ್ ರೈಲು
ನಂತರ ಪ್ರಚಾರಕ್ಕೆ ತೆರಳಿದ ಕುಮಾರಸ್ವಾಮಿ, ಎಂಎಲ್‍ಸಿ ಟಿ.ಎ. ಶರವಣ ಹಾಗೂ ಪಕ್ಷದ ಮುಖಂಡರು, ಕಾರ್ಯಕರ್ತರು ಬಂಡಿಮಹಾಕಾಳಿ ದೇವಸ್ಥಾನದಲ್ಲಿ ಶಿವಣ್ಣ ಎಂಬುವವರನ್ನು ಭೇಟಿ ಮಾಡಿ ಕರಪತ್ರ ನೀಡಿ ಮತ ಯಾಚನೆ ಮಾಡಿದರು. ನಂತರ ಉದಯಭಾನು ಕಲಾಸಂಘದ ರಾಮೇಗೌಡ, ಮಡಿವಾಳ ಜನಾಂಗದ ನಾರಾಯಣಪ್ಪ, ಮಾಜಿ ಮೇಯರ್ ಜಿ. ನಾರಾಯಣ ಅವರ ಮನೆ, ಎನ್‍ಆರ್ ಕಾಲೊನಿಯ ರಾಘವೇಂದ್ರ ಸ್ವಾಮಿ ದೇವಸ್ಥಾನ, ಆಂಜನೇಯಸ್ವಾಮಿ ದೇವಸ್ಥಾನ, ವಿದ್ಯಾಪೀಠ, ಶ್ರೀನಿವಾಸನಗರ, ಕತ್ರಿಗುಪ್ಪೆ, ಗಿರಿನಗರದ ಗಣಪತಿ ಸಚ್ಚಿದಾನಂದ ಆಶ್ರಮ, ಶ್ರೀನಗರ ಮತ್ತಿತರ ಭಾಗಗಳಿಗೆ ಭೇಟಿ ನೀಡಿ, ಸ್ಥಳೀಯ ನಾಯಕರು, ದೇವಸ್ಥಾನ, ಆಶ್ರಮ ಮತ್ತಿತರ ಸ್ಥಳಗಳಿಗೆ ತಡ ರಾತ್ರಿಯವರೆಗೂ ಭೇಟಿ ನೀಡಿ ಮತ ಪ್ರಚಾರ ನಡೆಸಿದರು.
ಚುನಾವಣಾ ಪ್ರಣಾಳಿಕೆಯ ಅಂಶಗಳು
ಬಸವನಗುಡಿ ಕ್ಷೇತ್ರದ ಮಹಿಳೆಯರ ಆರ್ಥಿಕ ಸಬಲೀಕರಣಕ್ಕಾಗಿ ಪ್ರತ್ಯೇಕ ಸಹಕಾರಿ ಬ್ಯಾಂಕ್ ಸ್ಥಾಪಿಸುವುದು, ಮಹಿಳೆಯರ ಆರೋಗ್ಯ, ರಕ್ಷಣೆಗಾಗಿ ಕಾರ್ಯಕ್ರಮಗಳನ್ನು ರೂಪಿಸುವುದು, ಬಡ ವರ್ಗದವರಿಗೆ ಅನುಕೂಲವಾಗುವಂತೆ ಉಚಿತ ಸಮುದಾಯ ಭವನ ನಿರ್ಮಾಣ,  ಎಸ್‍ಎಸ್‍ಎಲ್‍ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ ಬೋಧನಾ ತರಗತಿಗಳು, ಶಾಸಕರ ಕಚೇರಿ ಮತ್ತು ಸರಕಾರಿ ಕಚೇರಿಗಳನ್ನು ಭ್ರಷ್ಟಾಚಾರ ಮುಕ್ತಗೊಳಿಸುವುದು ಸೇರಿದಂತೆ ಹಲವು ಮಹತ್ತರ ಅಂಶಗಳನ್ನು ಪ್ರಣಾಳಿಕೆ ಒಳಗೊಂಡಿದೆ.

ಕಟ್ಟುನಿಟ್ಟಾಗಿ ಪಾರದರ್ಶಕ ನಿಷ್ಪಕ್ಷಪಾತ ಚುನಾವಣೆಗೆ ಕ್ರಮವಹಿಸಿ: ಅಪರ ಜಿಲ್ಲಾಧಿಕಾರಿ ಶಿವಾನಂದ ಭಜಂತ್ರಿ
ಮಹಿಳೆಯರಿಗಾಗಿ ಸಮುದಾಯ ಅಡುಗೆ ಮನೆಗಳನ್ನು ಅಪಾರ್ಟ್‍ಮೆಂಟ್, ಏರಿಯಾ ಮಟ್ಟಗಳಲ್ಲಿ ಸ್ಥಾಪಿಸಲಾಗುವುದು. ಹೈಟೆಕ್ ಡಯಾಗ್ನೊಸ್ಟಿಕ್ ಸೆಂಟರ್ ಸ್ಥಾಪನೆ, ಕ್ಷೇತ್ರದ ಜನೆಗೆ ಉಚಿತ/ರಿಯಾಯಿತಿ ದರದಲ್ಲಿ ತಪಾಸಣೆ, 60 ವರ್ಷ ಮೇಲ್ಪಟ್ಟ ನಾಗರಿಕರಿಗೆ ವಾರಕ್ಕೊಮ್ಮೆ ಉಚಿತ ಫಲಹಾರ ವಿತರಣೆ ಯೋಜನೆ ಆರಂಭಿಸುವುದು ಇತ್ಯಾದಿ ಅಂಶಗಳನ್ನು ಪ್ರಣಾಳಿಕೆ ಒಳಗೊಂಡಿದೆ.
ಈ ವೇಳೆ ಮಾತನಾಡಿದ ಜೆಡಿಎಸ್ ಅಭ್ಯರ್ಥಿ ಅರಮನೆ ಶಂಕರ್, `ಪಾರಂಪರಿಕ ಮತ್ತು ಐತಿಹಾಸಿಕ ಕ್ಷೇತ್ರವಾಗಿರುವ ಬಸವನಗುಡಿಯಲ್ಲಿ ಅಭಿವೃದ್ಧಿ ಕಾರ್ಯಗಳ ಜತೆಗೆ ಯಾವುದೇ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಬರದಂತೆ ನೋಡಿಕೊಳ್ಳಲಾಗುವುದು’ ಎಂದರು.

ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿರುವ ಅಫ್ರೋಜ್ ಮಂಚನಕೊಪ್ಪ ಹಾಗೂ ಬೆಂಬಲಿಗರು!!

Related posts

ವಕೀಲರ ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿರುವ ಸಂಘದ ಕಾರ್ಯ ಶ್ಲಾಘನೀಯ -ನ್ಯಾಯಮೂರ್ತಿ ರವಿ ವಿ. ಹೊಸಮನಿ

eNewsLand Team

ಹುಬ್ಬಳ್ಳಿ ಎಫ್.ಎಂ.ಜಿ.ಸಿ. ಕ್ಲಸ್ಟರ್ ಸ್ಥಾಪನೆ ವಿಶೇಷ ಪ್ರೋತ್ಸಾಹ; ಬೊಮ್ಮಾಯಿ

eNEWS LAND Team

 ಕೊರೋನಾ ವಾರಿಯರ್ಸ್’ಗಳಿಗೆ ಸನ್ಮಾನ: ಮಾಜಿ ಸಚಿವ ಸಂತೋಷ್ ಲಾಡ್

eNEWS LAND Team