27 C
Hubli
ಫೆಬ್ರವರಿ 27, 2024
eNews Land
ರಾಜಕೀಯ

ವಾಯವ್ಯ ಪದವಿಧರ, ಶಿಕ್ಷಕರ ಮತಕ್ಷೇತ್ರ : ಮತದಾರರ ಪಟ್ಟಿ ತಯಾರಿಕೆ ಪದವಿಧರ 22332, ಶಿಕ್ಷಕರ ಮತಕ್ಷೇತ್ರಕ್ಕೆ 3697 ಅರ್ಜಿ ಸ್ವೀಕೃತಿ

ಇಎನ್ಎಲ್ ಬಾಗಲಕೋಟೆ:

ವಿಧಾನ ಪರಿಷತ್ತಿನ ವಾಯವ್ಯ ಪದವಿಧರ ಹಾಗೂ ಶಿಕ್ಷಕರ ಮತಕ್ಷೇತ್ರಗಳ ಮತದಾರರ ಪಟ್ಟಿ ತಯಾರಿಕೆ ಕುರಿತಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೆ ನವೆಂಬರ 6 ಕೊನೆಯ ದಿನವಾಗಿದ್ದು, ಜಿಲ್ಲೆಯಲ್ಲಿ ಪದವಿಧರ ಮತಕ್ಷೇತ್ರಕ್ಕೆ 22332 ಹಾಗೂ ಶಿಕ್ಷಕರ ಮತಕ್ಷೇತ್ರಕ್ಕೆ 3697 ಅರ್ಜಿ ಸ್ವೀಕೃತವಾಗಿವೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ನವೆಂಬರ 1ನ್ನು ಅರ್ಹತಾ ದಿನಾಂಕವನ್ನಾದರಿಸಿ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ನಮೂನೆ 18 ಮತ್ತು 19ರಲ್ಲಿ ಅಕ್ಟೋಬರ 2 ರಿಂದ ನವೆಂಬರ 6 ವರೆಗೆ ಮತಕ್ಷೇತ್ರಕ್ಕೆ 22332 ಹಾಗೂ ಶಿಕ್ಷಕರ ಮತಕ್ಷೇತ್ರಕ್ಕೆ 3697 ಅರ್ಜಿ ಸ್ವೀಕೃತವಾಗಿರುತ್ತವೆ.
ಬಾಗಲಕೋಟೆ ತಾಲೂಕಿಗೆ ಪದವಿಧರಕ್ಕೆ 3883, ಶಿಕ್ಷಕರ ಮತಕ್ಷೇತ್ರಕ್ಕೆ 1197, ಹುನಗುಂದ ಪದವಿಧರಕ್ಕೆ 2165, ಶಿಕ್ಷಕರ ಮತಕ್ಷೇತ್ರಕ್ಕೆ 201, ಬಾದಾಮಿ ಪದವಿಧರಕ್ಕೆ 2334, ಶಿಕ್ಷಕರ ಮತಕ್ಷೇತ್ರಕ್ಕೆ 381, ಇಲಕಲ್ಲ ಪದವಿಧರಕ್ಕೆ 49, ಶಿಕ್ಷಕರ ಮತಕ್ಷೇತ್ರಕ್ಕೆ 327, ಗುಳೇದಗುಡ್ಡ ಪದವಿಧರಕ್ಕೆ 678, ಶಿಕ್ಷಕರ ಮತಕ್ಷೇತ್ರಕ್ಕೆ 120, ಜಮಖಂಡಿ ಪದವಿಧರಕ್ಕೆ 3897, ಶಿಕ್ಷಕರ ಮತಕ್ಷೇತ್ರಕ್ಕೆ 306, ಮುಧೋಳ ಪದವಿಧರಕ್ಕೆ 3137, ಶಿಕ್ಷಕರ ಮತಕ್ಷೇತ್ರಕ್ಕೆ 415, ಬೀಳಗಿ ಪದವಿಧರಕ್ಕೆ 2878, ಶಿಕ್ಷಕರ ಮತಕ್ಷೇತ್ರಕ್ಕೆ 369 ಹಾಗೂ ರಬಕವಿ-ಬನಹಟ್ಟಿ ತಾಲೂಕಿಗೆ ಪದವಿಧರಕ್ಕೆ 3311, ಶಿಕ್ಷಕರ ಮತಕ್ಷೇತ್ರಕ್ಕೆ 381 ಅರ್ಜಿಗಳು ಸ್ವೀಕೃತಗೊಂಡಿರುತ್ತವೆ.
ಸ್ವೀಕೃತಗೊಂಡ ಅರ್ಜಿಗಳ ಪರಿಶೀಲನೆ ಕಾರ್ಯ ನಡೆದಿದ್ದು, ನವೆಂಬರ 23 ರಂದು ಕರಡು ಮತದಾರರ ಪಟ್ಟಿಯನ್ನು ಸಂಬಂಧಪಟ್ಟ ಸ್ಥಳಗಳಲ್ಲಿ ಪ್ರಕಟಿಸಲಾಗುತ್ತದೆ. ನಂತರ ನವೆಂಬರ 23 ರಿಂದ ಡಿಸೆಂಬರ 9 ವರೆಗೆ ಹಕ್ಕು ಮತ್ತು ಆಕ್ಷೇಪಣೆ ಕೋರಿ ಅರ್ಜಿಗಳನ್ನು ಆಯಾ ತಾಲೂಕು ಕಚೇರಿಗಳಲ್ಲಿ ಸ್ವೀಕರಿಸಲಾಗುತ್ತದೆ. ಡಿಸೆಂಬರ 30 ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Related posts

ಸಿದ್ದರಾಮಯ್ಯರ ಸರಕಾರ ದಲಿತ ವಿರೋಧಿ: ಗೋವಿಂದ ಕಾರಜೋಳ

eNewsLand Team

ಚುನಾವಣೆಯಲ್ಲಿ ಬಿಜೆಪಿಗೇ ಮತ್ತೆ ಅಧಿಕಾರ: ಶೋಭಾ ಕರಂದ್ಲಾಜೆ

eNEWS LAND Team

ನಾಲ್ಕು ವರ್ಷ ಅಧಿಕಾರ ಮಾಡಿದ್ರೂ ಗುಂಡಿ ಮುಚ್ಚದ ಬಿಜೆಪಿ: ಸಿಎಂ ಸಿದ್ದು

eNewsLand Team