ನವೆಂಬರ್ 28, 2022
eNews Land
ರಾಜಕೀಯ

ಕಾಂಗ್ರೆಸ್ಸಿನದ್ದು ಬೀಳುವ ಬಾವುಟ; ಆರ್. ಅಶೋಕ ವ್ಯಂಗ್ಯ

Listen to this article

ಇಎನ್ಎಲ್ ಧಾರವಾಡ:

ಕಾಂಗ್ರೆಸ್ಸಿನದ್ದು ಬೀಳುವ ಬಾವುಟ, ಅದರಡಿ ಕೆಲಸ ಮಾಡುತ್ತಿರುವ ಕಂದಾಯ‌ ಸಚಿವ ಆರ್.ಅಶೋಕ ಹಗಲುಗನಸು ಕಾಣುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ ಹೇಳಿದರು.

ಹುಬ್ಬಳ್ಳಿಯಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ 137ನೇ ಸಂಸ್ಥಾಪನಾ ದಿನವೇ ಅವರ ಬಾವುಟ ಹಾರಲಿಲ್ಲ, ಬಿದ್ದು ಹೋಗಿದೆ. ಅವರದ್ದು ದೇಶದಲ್ಲಿ ಹಾರದ ಬಾವುಟ, ಅವರದ್ದು ಬೀಳುವಂತ ಬಾವುಟ ಎಂದು ವ್ಯಂಗ್ಯವಾಡಿದರು.

ಬೀಳುವಂತ ಬಾವುಟದ ಅಡಿ ಕೆಲಸ ಮಾಡುವ ಡಿಕೆಶಿ ಹಗಲುಗನಸು ಕಾಣುತ್ತಿದ್ದಾರೆ. ಕರ್ನಾಟಕದಲ್ಲಿ ಕಾಂಗ್ರೆಸ್ ಬರುವುದು ತಿರುಕನ ಕನಸು. ರಾಜ್ಯದಲ್ಲಿ ಧೂಳಿಪಟ ಆಗಿದೆ‌ ಎಂದರು.

ಅವರ ಪ್ರಕಾರ ಮತಾಂತರ ಒಳ್ಳೆಯದು. ಹಿಂದೂಗಳ ದಲಿತರು ಮತಾಂತರ ಆಗಬೇಕು ಎಂಬುದು ಅವರ ಭಾವನೆ. ಮುಂದಿನ ದಿನಗಳಲ್ಲಿ ಬಹುಸಂಖ್ಯಾತರು ಕಾಂಗ್ರೆಸ್ಸನ್ನು ದೂರ ಇಡಲಿದ್ದಾರೆ ಎಂದರು.

ಹಿಂದೆ ಸಿದ್ದರಾಮಯ್ಯ ಅವರು ವೀರಶೈವ, ಲಿಂಗಾಯತ ಎಂದು ಒಡೆಯಲು ಮುಂದಾಗಿ ಕಾಂಗ್ರೆಸ್ ನುಚ್ಚು ನೂರಾಯಿತು.140ರಿಂದ 70 ಸೀಟಿಗೆ ಬಂತು ಎಂದು ಹೇಳಿದರು.

ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಹಿಂದೂ ವಿರೋಧಿ ಕಾಂಗ್ರೆಸ್. ಹುಚ್ಚು ಕಲ್ಪನೆ ಇಟ್ಟುಕೊಂಡ ಕಾಂಗ್ರೆಸ್ಸನ್ನು ಜನ ತಿರಸ್ಕಾರ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.

Related posts

ಜನ ಸ್ವರಾಜ್ ಯಾತ್ರೆಗೆ ಕಹಳೆ ಊದಿ ಚಾಲನೆ

eNewsLand Team

ಧಾರವಾಡ ಎಂಎಲ್ಸಿ ಚುನಾವಣೆ: ಪ್ರದೀಪ್ ಶೆಟ್ಟರ್ ನಾಮಪತ್ರ ಸಲ್ಲಿಕೆ

eNewsLand Team

ಕಾಂಗ್ರೆಸ್ಸನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಸಿಎಂ ಬೊಮ್ಮಾಯಿ ಹೇಳಿದ್ದೇನು ಗೊತ್ತಾ?

eNewsLand Team