23 C
Hubli
ಸೆಪ್ಟೆಂಬರ್ 25, 2023
eNews Land
ರಾಜಕೀಯ

ಕಾಂಗ್ರೆಸ್ ಪಕ್ಷ ಮುಳುಗುವ ಹಡುಗು: ಮಾಜಿ ಸಿಎಂ ಯಡಿಯೂರಪ್ಪ

ಇಎನ್ಎಲ್ ಹುಬ್ಬಳ್ಳಿ

ಕಾಂಗ್ರೆಸ್ ಪಕ್ಷ ಮುಳುಗುವ ಹಡುಗು. ಅದನ್ನು ಹತ್ತುವುದಕ್ಕೆ ಯಾರು ಇಷ್ಟ ಪಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಲೇವಡಿ ಮಾಡಿದರು‌.

ಅವರು ನಗರದಲ್ಲಿ ಶುಕ್ರವಾರ ನಡೆದ ಜನಸ್ವರಾಜ ಸಮಾವೇಶದಲ್ಲಿ ಮಾತನಾಡಿದರು.

25 ಸೀಟ್ ಗಳಲ್ಲಿ ನಾವು 20 ಕಡೆಗಳಲ್ಲಿ ಸ್ಪರ್ಧೆ ಮಾಡಿದ್ದೇವೆ. ಇಡೀ ದೇಶದ ರೈತರ ಸಮುದಾಯ ಪ್ರಧಾನಿಗೆ ಅಭಿನಂದನೆ ಸಲ್ಲಿಸುವ ದಿನ. ಒಂದು ವರ್ಷದಿಂದ ಹೋರಾಟ ಮಾಡಿದ್ದ ರೈತರಿಗೆ ನೆರವು ಮಾಡೋದನ್ನು ಪ್ರಧಾನಿ ಮಾಡಿದ್ದಾರೆ.

ನಿಮ್ಮೆಲ್ಲರ ಪರವಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈಗಿನ ಪ್ರಧಾನಿಯವರೆ ಮುಂದೆಯೂ ಪ್ರಧಾನಿ ಆಗ್ತಾರೆ.

ಬಿಜೆಪಿಗೆ ಮತ ಹಾಕಲು ಯಾರು ಹಿಂದೇಟು ಹಾಕುತ್ತಿದ್ದವರ ಮನವೊಲಿಸಿ. ಎಲ್ಲ ಕಾರ್ಯಕರ್ತರು ಅವರನ್ನು ಬಿಜೆಪಿಗೆ ಮತ ಹಾಕುವಂತೆ ಮಾಡಿ ಎಂದು ಕರೆ ನೀಡಿದರು.

ಜಗತ್ತು ಪ್ರಧಾನಿ ಮೋದಿ ಕಡೆ ನೋಡುತ್ತಿದೆ
ಎಲ್ಲ ದೇಶದ ಜನರು ಪ್ರಧಾನಿಗೆ ಗೌರವ ನೀಡುತ್ತಿದ್ದಾರೆ
ಅವರಿಗೆ ಸಿಗುವ ಗೌರವ ನಮ್ಮೆಗೆಲ್ಲ ಸಿಕ್ಕ ಹಾಗೆ.

ನಾನು ಇವತ್ತು ಅಧಿಕಾರದಲ್ಲಿಲ್ಲ, ಗ್ರಾಮ ಪಂ ಸದಸ್ಯರು ಸಹ ರಾಜೀನಾಮೆ ಕೊಡಲ್ಲ. ಆದರೆ ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದೇವೆ ಎಂದರು.

ರಾಜ್ಯದ ಯಾವುದೇ ಹಳ್ಳಿಗಳಿಗೆ ಹೋದರು ಜನರ ಪ್ರೀತಿ ಕಡಿಮೆ ಆಗಿಲ್ಲ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿ ಪಕ್ಷವನ್ನು ಸಂಘಟನೆ ಮಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

Related posts

ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಡಾ. ಶಿವಕುಮಾರ ಶ್ರೀ ಹೆಸರು: ಸಿಎಂ

eNewsLand Team

ಕಾಂಗ್ರೆಸ್ ಅಧಿಕಾರದ ಕನಸು ಭಗ್ನ : ಸಿಎಂ ಬೊಮ್ಮಾಯಿ

eNEWS LAND Team

ಧಾರವಾಡ: ವಿಧಾನಸಭಾ ಕ್ಷೇತ್ರಗಳ ಯಾರಿಗೆ ಎಷ್ಟು ಮತ ಹಿನ್ನಡೆ ಮುನ್ನಡೆ ನೀವೇ ನೋಡಿ.

eNEWS LAND Team