23.4 C
Hubli
ಮಾರ್ಚ್ 24, 2023
eNews Land
ರಾಜಕೀಯ

ಮನೆಗೆ ಹೋಗ್ತಿರಾ‌ ಎಂಬ ಪ್ರಶ್ನೆಗೆ ಯಡಿಯೂರಪ್ಪ ಉತ್ತರ ಹೀಗಿತ್ತು!

Listen to this article

ಇಎನ್ಎಲ್ ಬಾಗಲಕೋಟೆ

ನಾನು ಮನೆಗೆ ಹೋಗುವ ಪ್ರಶ್ನೆಯೇ ಇಲ್ಲ. ನಾನೆಲ್ಲಿ ಹೋಗಿದ್ದೇನೆ. ವಿಧಾನ ಪರಿಷತ್ ಚುನಾವಣೆ ಬಳಿಕ ರಾಜ್ಯ ಸುತ್ತಿ ಪಕ್ಷವನ್ನು ಪುನಃ ಅಧಿಕಾರಕ್ಕೆ ತರುತ್ತೇನೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬಿಜೆಪಿಗೆ ಯಡಿಯೂರಪ್ಪ ಅನಿವಾರ್ಯವಾಗಿದ್ದಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾನೆಲ್ಲಿ ಹೋಗಿದ್ದೇನೆ? ಪಕ್ಷವನ್ನು ಕಟ್ಟುವ ಸಲುವಾಗಿ ರಾಜ್ಯಾದ್ಯಂತ ಓಡಾಡಿ ಕೆಲಸ ಮಾಡುತ್ತಿದ್ದೇನೆ. ಆ ಬಗ್ಗೆ ಎರಡು ಮಾತಿಲ್ಲ, ಅನಿವಾರ್ಯ ಅನ್ನುವ ಮಾತಿಲ್ಲ.

ಸಾಮೂಹಿಕ ನೇತೃತ್ವದಲ್ಲಿ ನಾನು ಕೂಡಾ ಓಡಾಡಿ ಕೆಲಸ ಮಾಡುತ್ತೇನೆ.‌ ನಮ್ಮದು ಸ್ಪಷ್ಟವಾದ ಸಂಕಲ್ಪ. ಮುಂದಿನ ಎಲೆಕ್ಷನ್ ನಲ್ಲಿ ೧೪೦ಕ್ಕೂ ಹೆಚ್ಚಿನ ಸ್ಥಾನ ಗೆದ್ದು ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದರು.

ವಿಧಾನ ಪರಿಷತ್ ಚುನಾವಣೆ ಮುಗಿದ ಬಳಿಕ ಮತ್ತೆ ಪ್ರವಾಸ ಕೈಗೊಳ್ಳುತ್ತೇನೆ ಎಂದು ಯಡಿಯೂರಪ್ಪ ಹೇಳಿದರು.

Related posts

ವಿಪ: ತಿರಸ್ಕೃಗೊಂಡಿದ್ದು ಯಾರ ನಾಮಪತ್ರ?

eNEWS LAND Team

ಸಿದ್ದರಾಮಯ್ಯ ನೀಡಿದ್ದು ದೌರ್ಭಾಗ್ಯ : ಸಿಎಂ ಬೊಮ್ಮಾಯಿ

eNewsLand Team

ಬೊಮ್ಮಾಯಿ ನೂರು ದಿನಗಳ ಆಡಳಿತಕ್ಕೆ ಪ್ರಧಾನಿ ಮೋದಿ ಹೇಳಿದ್ದೇನು?

eNewsLand Team