34 C
Hubli
ಮಾರ್ಚ್ 23, 2023
eNews Land
ರಾಜಕೀಯ ಸುದ್ದಿ

2023ರ ಚುನಾವಣೆಲಿ ಬಿಜೆಪಿ ಗೆಲುವು ನಿಶ್ಚಿತ: ಸಿಎಂ ಬೊಮ್ಮಾಯಿ

Listen to this article

ಇಎನ್ಎಲ್ ಹಾವೇರಿ: 2023ರ ಕರ್ನಾಟಕ ವಿಧಾನಸಭಾ ಚುನವಣೆಯಲ್ಲಿ ಭಾರತೀಯ ಜನತಾ ಪಕ್ಷ ಸ್ವಂತ ಶಕ್ತಿಯಿಂದ ಸಂಪೂರ್ಣ ಬಹುಮತದಿಂದ ಜನರ ಆರ್ಶೀವಾದದೊಂದಿಗೆ ಆಡಳಿತ ಚುಕ್ಕಾಣಿಯನ್ನು ಹಿಡಿಯಲು ಯಶಸ್ವಿಯಾಗುತ್ತೇವೆಂಬ ಸಂಪೂರ್ಣ ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಸವಣೂರಿನ ಹೆಸ್ಕಾಂ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಈ ವಿಷಯ ತಿಳಿಸಿದರು.

ಇದನ್ನೂ ಓದಿ:ಬೇಕಾಬಿಟ್ಟಿ ನ್ಯೂಸ್ ಪ್ರಿಂಟ್ ಬಳಸೊ ಪತ್ರಿಕಾ ಸಂಸ್ಥೆಗಳ ಕಥೆ… ಮಾಧ್ಯಮದಲ್ಲಿ ಕೆಲಸ ಮಾಡ್ತಾ ಇದೀರಾ ಇದನ್ನು ತಪ್ಪದೆ ಓದಿ

ಉತ್ತರಪ್ರದೇಶದ ಚುನಾವಣೆಯ ನಂತರ ಯೋಗಿ ಆದಿತ್ಯನಾಥ 2ನೇ ಬಾರಿ ಮುಖ್ಯಮಂತ್ರಿಯಾಗಿ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡಿದ್ದೇನೆ. ಚುನಾವಣೆಯ ನಂತರ ನಾಲ್ಕು ರಾಜ್ಯಗಳಲ್ಲಿ ಭಾರತೀಯ ಜನತಾ ಪಕ್ಷದ ಗೆಲುವು ಇಡೀ ದೇಶದಲ್ಲಿ ಹೊಸ ರಾಜಕೀಯ ಸಂಚಲನ ಪ್ರಾರಂಭವಾಗಿದೆ. ಉತ್ತರಖಂಡ್, ಮಣಿಪುರ, ಗೋವಾ ಮತ್ತು ಉತ್ತರ ಪ್ರದೇಶ ಗೆಲುವು 2024ರ ಲೋಕಸಭಾ ಚುನಾವಣೆಯ ದಿಕ್ಸೂಚಿಯನ್ನು ಸ್ಪಷ್ಟವಾಗಿದೆ. ಕರ್ನಾಟಕದಲ್ಲಿಯೂ ದೊಡ್ಡ ಪ್ರಮಾಣ ಬೆಂಬಲ ವ್ಯಕ್ತವಾಗುತ್ತಿದೆ. 2023 ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.

ಇದನ್ನೂ ಓದಿ:ನೈಋತ್ಯ ರೈಲ್ವೆಯ ತಂಡಕ್ಕೆ ಅಖಿಲ ಭಾರತ ರೈಲ್ವೆ ರೋಡ್ ಸೈಕ್ಲಿಂಗ್ ಚಾಂಪಿಯನ್’ಶಿಪ್ ಪ್ರಶಸ್ತಿ

ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧೆ :
2023ರ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಯವರು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿ, ಮೂರು ಬಾರಿ ಶಿಗ್ಗಾಂವಿ ಕ್ಷೇತ್ರದ ಜನ ಗೆಲುವು ನೀಡಿದ್ದಾರೆ. ಈ ಬಾರಿಯೂ ಶಿಗ್ಗಾಂವಿ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ತಿಳಿಸಿದರು.

ಇದನ್ನೂ ಓದಿ:ಕಾನೂನು ವಿವಿ ಘಟಿಕೋತ್ಸವ; 5188 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಉಚ್ಛನ್ಯಾಯಾಲಯದ ತೀರ್ಪಿನ ಪಾಲನೆ ಆಗಬೇಕು :
ಹಿಜಾಬ್ ಬೆಳವಣಿಗೆಗಳ ಬಗ್ಗೆ ಪ್ರತಿಕ್ರಯಿಸಿ, ಬಹಳ ವರ್ಷಗಳಿಂದ ಶಾಲೆಗಳಲ್ಲಿ ಶಾಲಾ ಸಮವಸ್ತ್ರ ನಿಯಮವನ್ನು ಪಾಲಿಸಲಾಗುತ್ತಿದೆ. ಕೆಲವು ಶಕ್ತಿಗಳ ಪ್ರಚೋದನೆಯಿಂದ ಉಚ್ಛ ನ್ಯಾಯಾಲಯದ ತೀರ್ಪಿನ ನಂತರವೂ ಗೊಂದಲವೆದ್ದಿದೆ. ಆದಾಗ್ಯೂ ರಾಜ್ಯದಲ್ಲಿ ಶಾಂತಿ,ಕಾನೂನು ಸುವ್ಯವಸ್ಥೆ ಕಾಪಾಡಲಾಗಿದೆ. ಉಚ್ಛ ನ್ಯಾಯಾಲಯದ ತೀರ್ಪಿನ ಪಾಲನೆ ಆಗಬೇಕು, ಪ್ರಚೋದನೆ ಮಾಡಬಾರದು ಎಂಬುದು ಜನಾಭಿಪ್ರಾಯವಾಗಿದೆ. ಈ ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು ಎಂದರು.

ಇದನ್ನೂ ಓದಿ:ಕಡಿಮೆ ವೆಚ್ಚ, ತ್ವರಿತ ಗತಿಯಲ್ಲಿ ನ್ಯಾಯದಾನವಾಗಬೇಕು: ರಾಜ್ಯಪಾಲ ಗೆಹ್ಲೋತ್

Related posts

ಮಹದಾಯಿ: ಡಬಲ್‌ ಎಂಜಿನ್‌ ಸರ್ಕಾರದಿಂದ ವಂಚನೆ: ಬ್ರಿಜೇಶ್‌ ಕಾಳಪ್ಪ

eNewsLand Team

ಇದು ಅನು ಇಮ್ಯಾನುಯೆಲ್ ಕಮಾಲ್!!

eNewsLand Team

ಹುಬ್ಬಳ್ಳಿ: ಖತರ್ನಾಕ ಕಿಲ್ಲರ್: ಭಿಕ್ಷುಕರೇ ಟಾರ್ಗೆಟ್!!

eNEWS LAND Team