ಇಎನ್ಎಲ್ ಧಾರವಾಡ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕ್ರಿಯಾಶೀಲವಾಗಿ ಆಡಳಿತ ನಡೆಸುತ್ತಿದ್ದಾರೆ. ಅವರೊಬ್ಬ ಪ್ರಬುದ್ಧ ಉತ್ತಮ ಆಡಳಿತಗಾರ ಎಂದು ಹಿಂದೆ ಸಿಎಂ ರೇಸಿನಲ್ಲಿದ್ದ ಅರವಿಂದ್ ಬೆಲ್ಲದ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ನಿರಾಣಿ ಸಿಎಂ ಆಗ್ತಾರೆ ಎಂಬ ಹೇಳಿಕೆ ಬಗ್ಗೆ ಸಚಿವ ಕೆ.ಎಸ್. ಈಶ್ವರಪ್ಪ ಅವರು ತಮ್ಮ ಹೇಳಿಕೆ ಕುರಿತು ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ. ಉನ್ನತ ಶೈಕ್ಷಣಿಕ ಹಿನ್ನೆಲೆ ಇದ್ದವರೇ ಆಡಳಿತದ ಚುಕ್ಕಾಣಿ ಹಿಡಿಯಬೇಕು ಎನ್ನುವುದಕ್ಕಿಂತ, ಅದಕ್ಕೆ ರಾಜಕೀಯ ಅನುಭವ ಸಾಕಷ್ಟು ಇರಬೇಕು ಎಂದರು.
ಸಂಪುಟ ವಿಸ್ತರಣೆ ವೇಳೆ ನಾನು ಸಚಿವ ಸ್ಥಾನ ನೀಡಿ ಅಂತಾ ಕೇಳಲ್ಲ. ವರಿಷ್ಠರ ನಿರ್ಧಾರಕ್ಕೆ ನಾನು ಬದ್ಧನಾಗಿರುವೆ.
ಎಲ್ಲ ಶಾಸಕರಿಗೂ ಸಚಿವರಾಗಬೇಕು. ಸಚಿವರಿಗೆ ಸಿಎಂ ಆಗಬೇಕು ಅಂತಾ ಆಸೆ ಇರುತ್ತೆ. ಸಂಪುಟ ವಿಸ್ತರಣೆ ಇದೇಯೋ ಇಲ್ವೋ ಗೊತ್ತಿಲ್ಲ. ಸಂಪುಟ ವಿಸ್ತರಣೆ ಇದೆ ಎಂದು ಮಾಧ್ಯಮಗಳೆ ಹೇಳುತ್ತಿವೆ.
ನಮ್ಮ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ನಾನು ಬದ್ಧನಾಗಿರುವೆ. ನಾನು ಸಚಿವ ಸ್ಥಾನ ಕೇಳುವ ಅವಶ್ಯಕತೆ ಇಲ್ಲ. ಪಕ್ಷದ ನಾಯಕರು ಯಾರಿಗೆ ಯಾವಾಗ ಎನೂ ಜವಾಬ್ದಾರಿ ಕೊಡಬೇಕು ಅಂತಾ ಗೊತ್ತಿದೆ.
ನಾನು ಮೌನವಾಗಿ ಇರುವೆ.
ಹಿರಿಯರನ್ನು ಕೈಬಿಟ್ಟು ಕಿರಿಯರಿಗೆ ಸ್ಥಾನ ನೀಡಬೇಕು ಅನ್ನುವ ರೇಣುಕಾಚಾರ್ಯ ಹೇಳಿಕೆ. ಅವರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದರು.