ಇಎನ್ಎಲ್ ಕಲಘಟಗಿ: ತಾಲೂಕಿನ ಬೇಗೂರು ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷೆ ತುಮರಿಕೊಪ್ಪ ಗ್ರಾಮದ ನಾಗವ್ವ ಅಂಗಡಿ ಹಾಗೂ ಉಪಾಧ್ಯಕ್ಷ ಬಿಸರಳ್ಳಿ ಗ್ರಾಮದ ಬಸವರಾಜ ಮಿಕ್ಕಿತ ಆಯ್ಕೆ. ಈ ವೇಳೆ ಮಾತನಾಡಿದ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಸಿ.ಮಠಪತಿ ಮಾತನಾಡಿ, ಗ್ರಾಪಂ. ಪಿಡಿಓ ಶಂಕರ ಗೌಳೇರ ಸ್ವಾಗತಿಸಿದರು. ಅಧ್ಯಕ್ಷರು ಅವಿರೋಧವಾಗಿ ಆಯ್ಕೆ. ಎಲ್ಲರೂ ಒಕ್ಕಟ್ಟಾಗಿ ಪಂಚಾಯತಿಯನ್ನು ಅಭಿವೃದ್ಧಿಯತ್ತ ಸಾಗಿಸೋಣ ಎಂದರು. ಈ ಸಂದರ್ಭದಲ್ಲಿ ರವೀಂದ್ರ ಅಲ್ಲಾಪುರ, ಚನ್ನಪ್ಪ ನವಣಿ, ಪ್ರಭು ಅಂಗಡಿ, ವಕೀಲ ಮಂಜುನಾಥ ಧನಿಗೊಂಡ, ಶಿವಪ್ಪ ಕುಡುಭಾವಿ, ಪರಶುರಾಮ ರಜಪೂತ, ಮಾದೇವಪ್ಪ ನಾಸರಕಿ, ಸಿದ್ದಪ್ಪ ಕೆಲಗೇರಿ, ಬೂದಪ್ಪ ಹಂಚಿನಮನಿ, ಕಲ್ಲಪ್ಪ ಕಟ್ಟಿಮನಿ, ಚಾರ್ಲ್ಸ್ ಕಲಘಟಗಿ, ಶಂಕರ ಚವಾಣ್, ಫ್ರಾನ್ಸಿಸ್ ಹಂಡಿ, ಗಣಪತಿ ಚವಾಣ್, ಪೌಲು ಪನ್ನಾಕರ್.ಪೋಲಿಸ್ ಸಿಬ್ಬಂದಿ ವರ್ಗ, ಪಂಚಾಯತ ಸಿಬ್ಬಂದಿ ವರ್ಗ, ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.