27 C
Hubli
ಏಪ್ರಿಲ್ 20, 2024
eNews Land
ರಾಜಕೀಯ

ಯಾವ ವಾರ್ಡು? ಯಾರು? ನೋಡಿ. ಅಣ್ಣಿಗೇರಿ ಪುರಸಭೆ ಚುನಾವಣೆಗೆ ನಾಮಪತ್ರ ಸಲ್ಲಿಕೆ

ಇಎನ್ಎಲ್ ಅಣ್ಣಿಗೇರಿ: ಸ್ಥಳೀಯ ಪುರಸಭೆ ೨೩ ವಾರ್ಡ್ ಚುನಾವಣೆಗೆ ಕಾಂಗ್ರೆಸ್ ಪಕ್ಷದ-೪೩ ಅಭ್ಯರ್ಥಿಗಳು, ಬಿಜೆಪಿ ಪಕ್ಷದ– ೨೬ ಅಭ್ಯರ್ಥಿಗಳು, ಜೆಡಿಎಸ್ ಪಕ್ಷದ ೧೦ ಅಭ್ಯರ್ಥಿಗಳು, ಅಮ್ ಆದ್ಮಿ ಪಕ್ಷದ- ಒಬ್ಬರು, ಪಕ್ಷೇತರರು-೩೩ ಅಭ್ಯರ್ಥಿಗಳು, ಒಟ್ಟು ಡಿ.೧೩ ರಿಂದ ಡಿ.೧೫ ರವರೆಗೆ ಒಟ್ಟು -೧೧೩ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.
ಪಟ್ಟಣದ ಆರಾಧ್ಯದೇವ ಅಮೃತೇಶ್ವರನಿಗೆ ಪೂಜೆ ಸಲ್ಲಿಸಿ, ಪಕ್ಷಗಳ ಬಾವುಟ ಹಿಡಿದು, ಪಟಾಕಿ ಸಿಡಿಸಿ, ಮೆರವಣಿಗೆ ಮೂಲಕ ಅಭ್ಯರ್ಥಿಗಳ ನೇತ್ರತ್ವದಲ್ಲಿ ಬಂದು ನಾಮಪತ್ರ ಸಲ್ಲಿಸಿದರು.
೧೪ ಜನ ಅಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು, ಸಭೆ, ನಡೆಸಿ, ಪಕ್ಷದ ಸಿದ್ದಾಂತಕ್ಕೆ ಬದ್ದರಾಗಿ ಪಕ್ಷ ಸೇರಿ, ಮೆರವಣಿಗೆ ಮೂಲಕ ಪಕ್ಷದ ೧೪ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ತಯಾರಿ ನಡೆಸಿ, ಕೊನೆಯ ದಿನ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ,ಕೈ-ಕಮಲ-ಜೆಡಿಎಸ್ ಪಕ್ಷ, ಪಕ್ಷೇತರ ಅಭ್ಯರ್ಥಿಗಳಾಗಿ ಚುನಾವಣೆ ಸ್ಪರ್ಧಿಸುವಲ್ಲಿ ಕೈಗೊಂಡ ತಿರ್ಮಾನಕ್ಕೆ,  ಒಬ್ಬರೇ ಅಮ್ ಆದ್ಮಿ ಪಕ್ಷದಿಂದ ೧೪ ವಾರ್ಡ್ಗೆ ಚುನಾವಣೆ ಆಖಾಡಕ್ಕೆ ನಾಮಪತ್ರ ಸಲ್ಲಿಸುವಂತಾಗಿದೆ.
ಜೆಡಿಎಸ್ ಪಕ್ಷ ತೊರೆದು ಕೈಪಕ್ಷ ಸೇರಿದ ಮಾಜಿ ಶಾಸಕ ಎನ್.ಎಚ್ ಕೋನರಡ್ಡಿ,  ಜೆಡಿಎಸ್ ಪಕ್ಷಗಳ ಮುಖಂಡರು, ಕಾರ್ಯಕರ್ತರು,ಚುನಾವಣೆ ಆಕಾಂಕ್ಷಿ ಅಭ್ಯರ್ಥಿಗಳು, ಪುರಸಭೆ ಚುನಾವಣೆ ಮುಗಿಯುತನಕ ಪಕ್ಷದಲ್ಲಿದ್ದು ಪಕ್ಷದ ಗೆಲುವಿಗೆ ಕಾರಣವಾಗಬಹುದಿತ್ತು, ಆದರೆ  ಅನ್ಕೊಂಡoತೆ ಎನು ಆಗದೆ, ನೋವು ಬೇಸರದಿಂದ ನಾಯಕನೊಂದಿಗೆ ಪಕ್ಷದಿಂದ ದೂರ ಸರಿದರು. ಈ ಸಂದರ್ಭದಲ್ಲಿ ತೊರೆದಿದ್ದು ಅಭ್ಯರ್ಥಿಗಳಿಗೆ ಶಾಕ್ ಕೊಟ್ಟಂತೆ  ಆಗಿದೆ.  ನಡು ನೀರಿನಲ್ಲಿ ಕೈ ಬಿಟ್ಟು ಪಕ್ಷ ತೊರೆದ ಪರಿಣಾಮ ಅಭ್ಯರ್ಥಿಗಳು ದಿಕ್ಕುತೋಚದೆ ತಿರ್ಮಾನ ಕೈಗೊಳ್ಳುವಲ್ಲಿ ಪರದಾಡಬೇಕಾಯಿತು.
ಕಾಂಗ್ರೆಸ್ ಪಕ್ಷ ತೊರೆದು ಜೆಡಿಎಸ್ ಪಕ್ಷ ಸೇರಿದ ಪ್ರಕಾಶ ಅಂಗಡಿ ಅಭ್ಯರ್ಥಿಗಳಿಗೆ ಮಾನಸಿಕ ಧೈರ್ಯ ತುಂಬಿ ಪಕ್ಷದ ಭಿ-ಫಾರ‍್ಮ ನೀಡಿ, ೧೧ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಸಿ, ಕಿಂಗ್ ಮೇಕರ್ ಆಗಿ ಜೆಡಿಎಸ್ ಪಕ್ಷ ಮತ್ತೆ ತನ್ನ ಪ್ರಾಬಲ್ಯ ಮೇರುವಲ್ಲಿ ಸಂದೇಹವಿಲ್ಲದoತೆ ಗೆಲುವಿನ ಅಭ್ಯರ್ಥಿಯನ್ನೇ ಆಯ್ಕೆ ಮಾಡಿ  ಪುರಸಭೆ ಚುನಾವಣೆ ಅಖಾಡಕ್ಕೆ  ನಿಲ್ಲಿಸಲು ಹರಸಾಹಸ ಪಡುವಂತಾಗಿರೋದು ಕಂಡುಬoತು.    
ಕೈ-ಕಮಲ ಟಿಕೇಟ್ ಕೈತಪ್ಪಿದ ಪ್ರಬಲ ಆಕಾಂಕ್ಷಿಗಳು ೨೩ ವಾರ್ಡ್ಗಳಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ನಾಮಪತ್ರ ಸಲ್ಲಿಸಿ, ಚುನಾವಣೆ ಆಖಾಡದ ತುರುಸಿನ ತಿಕ್ಕಾಟದಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಬಿರುಸಿನ ಸ್ಪರ್ಧೆ ನೀಡುವಲ್ಲಿ ಸಜ್ಜಾಗಿರೋದು ಹೆಚ್ಚು ಕಂಡುಬoತು. ಹೆಚ್ಚಾಗಿ ೨೩ ವಾರ್ಡ್ಗಳಲ್ಲಿ ಕಾಂಗ್ರೆಸ್, ಬಿಜೆಪಿ ಪಕ್ಷದ ಅಭ್ಯರ್ಥಿಗಳಿಗೆ ನೇರ ಹಣಾಹಣಿಗೆ ರಾಜಕೀಯ ರಣತಂತ್ರಗಾರಿಕೆಯಿoದ ಕಿಚ್ಚು ಹಚ್ಚಿ ಗೆಲವು ಸೋಲಿನ ಅಂಚಿನಲ್ಲಿ ಪ್ರಭಲ ಆಕಾಂಕ್ಷಿಗಳು ತಲೆನೋವು ತರೋದು ನಿಶ್ಚಿತ.
ಪುರಸಭೆ ೨೩ ವಾರ್ಡ್ಗಳ ಚುನಾವಣೆಗೆ ಪಕ್ಷದ ಬಿ- ಫಾರ್ಮ್ ಪಡೆದ ನಾಮಪತ್ರ ಸಲ್ಲಿಸಿದವರ ಪಟ್ಟಿ
ಬಿಜೆಪಿ ಪಕ್ಷದ ಅಭ್ಯರ್ಥಿಗಳು-
ವಾರ್ಡ್ ೧-ಪ್ರಕಾಶ ಹಾಲಪ್ಪ ಮೇಟಿ, ೨-ಶೋಭಾ ಮಂಜುನಾಥ ಗೊಲ್ಲರ ೩-ಸೋಮವ್ವ ಮ.ಕುರ್ತಕೋಟಿ, ೪-ರಾಘವೇಂದ್ರ ಮಸ್ತಾನೆಪ್ಪ ರಾಮಗಿರಿ, ೫-ಹಾಲಪ್ಪ ಕುಮಾರಪ್ಪ ಮುಸುಂಡಿ, ೬-ಶಶಿಕಲಾ ಬಸವರಾಜ ಯಮನೂರು, ೭-ಚಂದ್ರನಾಥ ಗೋವಿಂದಪ್ಪ ನಾವಳ್ಳಿ, ೮-ಯಶೋದಾ ಮಂಜುನಾಥ ವೆಂಕಟಾಪೂರ, ೯-ಗಂಗಾ ಪ್ರಶಾಂತ ಹಂದಿಗೋಳ ೧೦-ಕಮಲವ್ವ ಸುರೇಶ ಕರಬಸಣ್ಣವರ ೧೧-ಜಗದೀಶ ಚನ್ನಪ್ಪ ಸೋಮಣ್ಣವರ, ೧೨- ನೀಲವ್ವ ಲಿಂಗನಗೌಡ ಕುರಹಟ್ಟಿ, ೧೩-ಹಮೀದಾಬಾನು ರೊಕ್ಕದಕಟ್ಟಿ, ೧೪-ವಿರೇಶ ಶಿವಯೋಗಿ ಸುರಕೋಡ, ೧೫- ಅಮೃತಪ್ಪ ಪುರದಪ್ಪ ಗುರಿಕಾರ, ೧೬-ಮಾರುತಿ ಯಲ್ಲಪ್ಪ ಮರಡ್ಡಿ, ೧೭-ಜಗದೀಶ ಬಸಪ್ಪ ಗಾಣಗೇರ, ೧೮-ದೇವಪ್ಪ ಗಾಣಗೇರ, ೧೯-ಕೃಷ್ಣಪ್ಪ ನರಸಪ್ಪ ಭಜಂತ್ರಿ, ೨೦-ವೀಣಾ ಸಾತಪ್ಪ ಭೋವಿ, ೨೧-ರೇಣುಕಾ ಬಸವರಾಜ ಕ್ಷತ್ರಿ, ೨೨-ಸುಮಾ ಗಡ್ಡೆಪ್ಪ ತೋಟದ, ೨೩-ಪಾರ್ವತಿ ಚ.ಹಿರೇಮಠ
ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು-
ವಾರ್ಡ್ ೧-ಬುಡ್ಡೆಶರೀಪ್ ನದಿಮುಲ್ಲಾ, ೨-ಮಂಜುಳಾ ಆಡಕಾವು, ೩- ಜಯಲಕ್ಷ್ಮಿ ಜಕರಡ್ಡಿ, ೪- ಶಿವಶಂಕರ ಕಲ್ಲೂರ, ೫- ಹಸನಸಾಬ ಗೂಢನಾಯ್ಕರ, ೬-ಬಸವಣ್ಣೆವ್ವ ದಿಡ್ಡಿ, ೭-ಭಗವಂತಪ್ಪ ಪುಟ್ಟಣ್ಣವರ, ೮-ಅಮೀನಾಬೇಗಮ್ ಟಿಪ್ಪುಸುಲ್ತಾನ ಬಾರಿಗಿಡದ, ೯-ರಫೀಕ್ ಅಹ್ಮದ ಸೊಪ್ಪಿ, ೧೦-ಸುಜಾತಾ ಶಾನಭೋಗರ, ೧೧-ಚಾಂದುಸಾಬ ಭದ್ರಾಪೂರ, ೧೨-ಮಹಾದೇವಿ ಹುಯಿಲಗೋಳ, ೧೩-ಪರವೀನ ಬಸಾಪೂರ, ೧೪- ಇಮಾಮಸಾಬ ದರವಾನ, ೧೫- ಮಹೇಶ ಪಲ್ಲೇದ, ೧೬- ಮುತ್ತಪ್ಪ ಬಿಷ್ಟಕ್ಕನವರ, ೧೭-ಅಮೃತೇಶ ಮಿಸಿ, ೧೮-ಹಸನಸಾಬ ಸುಂಕದ, ೧೯-ತಿಮ್ಮಕ್ಕ ಕೊರವರ, ೨೦-ನೀಲವ್ವ ಸೈದಾಪೂರ, ೨೧-ರಾಜೀಯಬೇಗಂ ಹಸನಸಾಬ ರೊಕ್ಕದಕಟ್ಟಿ, ೨೨-ಮೆಹಬೂಬಿ ಹಸನಸಾಬ ನವಲಗುಂದ, ೨೩- ಗಂಗಾ ರಮೇಶ ಕರೆಟ್ಟನವರ.
ಜೆಡಿಎಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ- 
ವಾರ್ಡ್ ೧- ನೂರಅಹ್ಮದ ಹ.ಸದರಬಾಯಿ, ೩-ಕವಿತಾ ಮಂಜುನಾಥ ತೋಟದ, ೫- ರವಿ ಹೂವಪ್ಪ ಬಡಿಗೇರ, ೭-ಸೋಮಶೇಖರ ಚನ್ನಪ್ಪ ಕಲ್ಲೂರ, ೧೦-ಪುಷ್ಪಾ ವಿರೇಶ ಕುಬಸದ, ೧೧- ದಸ್ತಿಗೀರಸಾಬ ದಾವಲಸಾಬ ಸಂಗಟಿ, ೧೫-ವೀರಭದ್ರಪ್ಪ ಬಸವರಾಜ ಕುಬಸದ, ೧೭- ಫೀರೋಜಶಾ ದಾದಾಮೆಹಬೂಬಸಾಬ ನವಲಗುಂದ, ೧೯- ಮಂಜುನಾಥ ಹೊನ್ನಣ್ಣವರ, ೨೧-ಶಿಲ್ಪಾ ಹನಮಂತಪ್ಪ ಭಜಂತ್ರಿ, ೨೩- ಲಕ್ಷ್ಮವ್ವ ನಿಂಗಪ್ಪ ಬಡೆಪ್ಪನವರ.
ಅಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪಟ್ಟಿ- 
ವಾರ್ಡ್-೧೪ ಬಾಬಾಜಾನ ಮುಳಗುಂದ.

Related posts

ಕಿಚ್ಚ ಸುದೀಪ್‍ಗೆ ಅವಮಾನ ಮಾಡಿದ ಕಾಂಗ್ರೆಸ್, ಜೆಡಿಎಸ್‍ಗೆ ಪ್ರಜ್ಞಾವಂತ ಜನರಿಂದ ತಕ್ಕ ಉತ್ತರ: ಗೌರವ್ ಭಾಟಿಯಾ

eNEWS LAND Team

ನಾಲ್ಕು ವರ್ಷ ಅಧಿಕಾರ ಮಾಡಿದ್ರೂ ಗುಂಡಿ ಮುಚ್ಚದ ಬಿಜೆಪಿ: ಸಿಎಂ ಸಿದ್ದು

eNewsLand Team

ಶಾಸಕರಿಗೆ ಲೋಕಸಭೆ ಚುನಾವಣೆಯ ಗುರಿ ನೀಡುವ‌ ಕುರಿತು ಚರ್ಚೆ:  ಮಾಜಿ ಸಿಎಂ ಬೊಮ್ಮಾಯಿ

eNEWS LAND Team