ಅಣ್ಣಿಗೇರಿ : ಅತಿವೃಷ್ಟಿಯಿಂದ ಉಂಟಾದ ಮಳೆಯಿಂದ ಪ್ರಾಕೃತಿಕ ವಿಕೋಪಕ್ಕೆ ತುತ್ತಾದ ನಿರಾಶ್ರಿತರಿಗೆ ಪರಿಹಾರ ಚೆಕ್ ವಿತರಣೆ ಅಣ್ಣಿಗೇರಿ ತಾಲೂಕಾಡಳಿತದಿಂದ ಉಸ್ತುವಾರಿ ಸಚಿವ ಶಂಕರ್ ಪಾಟೀಲ್ ಮುನೇನಕೊಪ್ಪ ಪಟ್ಟಣದ ಅಮೃತೇಶ್ವರ ನಗರದಲ್ಲಿ ಮಳೆಯಿಂದ ಹಾನಿಗೊಳಗಾದ ನಿರಾಶ್ರಿತರಿಗೆ ₹10,000/- ಚೆಕ್ 30 ಜನ ಫಲಾನುಭವಿಗಳಿಗೆ ಹಾಗೂ ಅಂಬಿಕಾ ನಗರದ ಇಬ್ಬರೂ ಫಲಾನುಭವಿಗಳಿಗೆ ಪರಿಹಾರದ ಚೆಕ್ ವಿತರಿಸಿದರು. ತಾಲೂಕಿನ ಮಣಕವಾಡ ಮತ್ತು ಕಿತ್ತೂರು ಗ್ರಾಮಗಳಿಗೆ ರುದ್ರಭೂಮಿ ಖರೀದಿಸಿದ ಭೂ ಮಾಲೀಕರಿಗೂ ಚೆಕ್ ವಿತರಿಸಿದರು.ಈ ಸಂದರ್ಭದಲ್ಲಿ ತಹಶೀಲ್ದಾರ್ ಮಂಜುನಾಥ ಅಮಾಸಿ, ಪುರಸಭೆ ಮುಖ್ಯಧಿಕಾರಿ ಕೆ ಎಫ್ ಕಟಗಿ, ಮಾಜಿ ಕ್ರೆಡಿಲ್ ಅಧ್ಯಕ್ಷ ಷಣ್ಮುಕ ಗುರಿಕಾರ, ಶಿವಯೋಗಿ ಸುರಕೋಡ ಮತ್ತು ಉಪಸ್ಥಿತರಿದ್ದರು
next post