ಸುದ್ದಿಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಹಂಚಿಕೊಳ್ಳಿ ನಮಗೆ ಬೆಂಬಲಿಸಿದಂತಾಗುತ್ತದೆ. ಪ್ಲೀಸ್ ಲೈಕ್ & ಶೇರ್
ಸುದ್ದಿ, ಜಾಹೀರಾತು, ಬ್ಯುಸಿನೆಸ್ ಪ್ರಮೋಷನ್ ಹಾಗೂ ಮಾಧ್ಯಮ ಸಲಹೆಗಾಗಿ ಸಂಪರ್ಕಿಸಿರಿ.
(ವರದಿಗಾರರು ಬೇಕಾಗಿದ್ದಾರೆ)
ಮೊಬೈಲ್ :+91 9141651260
ಇಮೇಲ್ : enewsland@gmail.com
________________________________________________
ಇಎನ್ಎಲ್ ಕಲಘಟಗಿ: ಮಹಿಳೆಯರ ಶಿಕ್ಷಣದಿಂದ ಸಮಾಜ ಮತ್ತು ದೇಶದ ಅಭಿವೃದ್ಧಿ ಸಾಧ್ಯ, ನಿಮ್ಮೊಡನೆ ಮಹಿಳಾ ದಿನಾಚರಣೆಯನ್ನು ಆಚರಿಸಬೇಕೆಂದು ಆಸೆ ಇತ್ತು ಎಂದು ಧಾರವಾಡ ಜಿಲ್ಲಾ ಪಂಚಾಯತ ಸಿಇಓ ಸುರೇಶ ಇಟ್ನಾಳ ಹೇಳಿದರು.
ತಾಲೂಕಿನ ಸಂಗಮೇಶ್ವರ ಗ್ರಾಮದ ದೊಡ್ಡಕೆರೆ ಕಾಮಗಾರಿ ಸ್ಥಳದಲ್ಲಿ ಜಿಲ್ಲಾ ಪಂಚಾಯತ ಧಾರವಾಡ, ತಾಲೂಕು ಪಂಚಾಯತ ಕಲಘಟಗಿ ಸಹಯೋಗದಲ್ಲಿ ಅಂತರಾಷ್ಟ್ರಿಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಸಿಇಓ ತಾವೆಲ್ಲರೂ ನರೇಗಾ ಯೋಜನೆಯ ಪ್ರಯೋಜನ ಪಡೆದುಕೊಳ್ಳುತ್ತಿದ್ದೀರಿ, ಇದರಿಂದ ವಲಸೆ ಹೋಗುವುದು ತಪ್ಪಿದೆ, ಮಹಿಳೆಯರು ಇನ್ನೂ ಹೆಚ್ಚಾಗಿ ಪಾಲ್ಗೊಳ್ಳಿರಿ, ಈ ಯೋಜನೆಯಿಂದ ನರ್ಸರಿಗಳನ್ನೂ ಮಾಡಿ ಲಾಭ ಮಾಡಿಕೊಳ್ಳಬಹುದು, ಕಡ್ಡಾಯವಾಗಿ ಆರೋಗ್ಯ ಭಾರತ ಕಾರ್ಡ, ಇ-ಶ್ರಮ ಕಾರ್ಡ ಮಾಡಿಸಿಕೊಳ್ಳಿ ಎಂದರು. ಕೂಲಿಕಾರರು ದುಡಿಯುವ ಸಮಯದಲ್ಲಿ ಪ್ರಥಮ ಚಿಕಿತ್ಸಾ ಪೆಟ್ಟಿಗೆ, ಶುದ್ಧ ಕುಡಿಯುವ ನೀರು, ನೆರಳಿನ ವ್ಯವಸ್ಥೆಗಳನ್ನು ಮಾಡಿರಿ ಎಂದು ಸೂಚಿಸಿದರು. ಸಿಇಓ ಹಾಗೂ ಉಪಕಾರ್ಯದರ್ಶಿ ಆರ್.ಎಲ್.ಡೊಳ್ಳಿನ, ಬುಟ್ಟಿಯಲ್ಲಿ ಮಣ್ಣು ತುಂಬಿ ಹೂಳೆತ್ತುವ ಕೆಲಸದಲ್ಲಿ ಭಾಗಿಯಾಗಿ ಕೂಲಿಕಾರರಿಗೆ ನೆರವಾದರು.
ನರೇಗಾ ಸಹಾಯಕ ನಿರ್ದೇಶಕ ಚಂದ್ರು ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿ ಸರ್ಕಾರವು ಈ ಯೋಜನೆಯಲ್ಲಿ ನೂರು ದಿನಗಳ ಉದ್ಯೋಗ ಕೊಟ್ಟಿದೆ. ನಮೂನೆ 6ರಲ್ಲಿ ಸಲ್ಲಿಸಿದ 15 ದಿನಗಳ ಒಳಗಾಗಿ ತಮಗೆ ಕೂಲಿ ದೊರೆಯುತ್ತದೆ, ಇಲ್ಲವಾದಲ್ಲಿ ಶೇ 25% ನಿರುದ್ಯೋಗ ಭತ್ಯೆಯನ್ನು ಕೊಡಲಾಗುವುದು, ಸರಿಯಾಗಿ ಕಡತಗಳನ್ನು ಇಟ್ಟಲ್ಲಿ 15 ದಿನಗಳೊಳಗಾಗಿ ಕೂಲಿ ಪಾವತಿಯಾಗುತ್ತದೆ, ಬದು ನಿರ್ಮಾಣ, ಎರೆಹುಳು ತೊಟ್ಟಿ, ದನದ ಕೊಟ್ಟಿಗೆ, ಕುರಿ ಶೆಡ್, ಗುಲಾಬಿ ತೋಟ, ರೇಷ್ಮೇ ತೋಟ, ಮುಂತಾದ ಯೋಜನೆಗಳನ್ನು ಸದುಪಯೋಗ ಪಡಿಸಿಕೊಂಡು ಆರ್ಥಿಕವಾಗಿ ಸ್ವಾವಲಂಬಿಗಳಾಗಿರಿ ಎಂದರು. ಈ ಸಂದರ್ಭದಲ್ಲಿ ತಾ.ಪಂ.ಇಓ ಎಸ್.ಸಿ.ಮಠಪತಿ ಹಾಗೂ ಎಲ್ಲ ಅಧಿಕಾರಿಗಳೂ ಸೇರಿ ನೂರು ದಿನ ಮುಗಿಸಿದ ಮಹಿಳಾ ಕೂಲಿಕಾರರನ್ನು ಸನ್ಮಾನಿಸಲಾಯಿತು.
ಆಯ್.ಇ.ಸಿ. ಸಂಯೋಜಕ ಎಸ್.ದಿವಾಕರ, ವರುಣ ಕುಲಕರ್ಣಿ, ಗ್ರಾ.ಪಂ.ಅಧ್ಯಕ್ಷ ದರ್ಶನಾ ನೇಸರೇಕರ, ಉಪಾಧ್ಯಕ್ಷ ಕಿರಣ ಜಮದಟಕರ, ಸದಸ್ಯರಾದ ಮಂಜುನಾಥ ನೇಸರೇಕರ, ಭಾರತಾ ಜಮದಟಕರ, ರೇಖಾ ಕಟ್ಟಾವಳಿ, ಗ್ರಾ.ಪಂ. ಪಿಡಿಓ ಬಿ.ಎನ್.ಕೋಳೇರಿ, ಪಂಚಾಯತಿ ಸಿಬ್ಬಂದಿ ವರ್ಗ, ತಾಲೂಕಿನ ಎಲ್ಲ ಗ್ರಾಮ ಕಾಯಕ ಮಿತ್ರರು, ಬಿ.ಎಫ್.ಟಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿಗಳಾದ ಎಲ್.ಎಚ್.ವಿ. ಗಿರಿಜಾದೇವಿ, ರತ್ನಂ ಶೀಲಿ, ಮುಂತಾದವರು ಉಚಿತ ಆರೋಗ್ಯ ತಪಾಸಣೆ ಮಾಡಿದರು. ನೂರಕ್ಕೂ ಹೆಚ್ಚು ಕೂಲಿಕಾರರು ಭಾಗವಹಿಸಿದ್ದರು.