ಯೋಗಕ್ಕೆ ಜಾತಿ ಭೇದ ಇಲ್ಲ: ಭಾಗ್ಯಶ್ರಿ ಜಾಗೀರದಾರ
ಇಎನ್ಎಲ್ ಕಲಘಟಗಿ: ಯೋಗವು ಜೀವನದ ಆರೋಗ್ಯಕ್ಕೆ ಹಾಗೂ ಏಕಾಗ್ರತೆಗೆ ಅತೀ ಅವಶ್ಯವಾಗಿದೆ. ಇದಕ್ಕೆ ಜಾತಿ ಭೇದ ಇಲ್ಲ ಎಂದರು.
ಲಿಂಕ್ ನೋಡಿ
https://youtu.be/nL7yEmSZ3jY
ಸ್ಥಳೀಯ ಬಿಸರಳ್ಳಿ ಗ್ರಾಮದ ಹೀರೆಕೆರೆಯಿಂದ ಮಂಜುನಾಥ ಉಳ್ಳಾಗಡ್ಡಿ ಹೊಲದವರೆಗೆ ನೀರುಗಾಲುವೆ ಕಾಮಗಾರಿಯನ್ನು ವೀಕ್ಷಿಸುವುದರ ಜೊತೆಗೆ ಕೂಲಿಕಾರರೊಂದಿಗೆ ಯೋಗ ದಿನಾಚರಣೆಯನ್ನು ಆಚರಿಸಿದರು. ಇಂಗ್ಲೀಷ ಕ್ಯಾಲೆಂಡರ್ ಪ್ರಕಾರ ಜೂನ್ 21 , ಭಾರತೀಯ ಸಂಸ್ಕೃತಿಯ ಪ್ರಕಾರ ಸೂರ್ಯನು ಈ ದಿನ ದಕ್ಷಿಣ ದಿಕ್ಕಿಗೆ ಪ್ರಯಾಣಿಸುತ್ತಾನೆ.
ಈ ಸಂದರ್ಭದಲ್ಲಿ 7 ಋಷಿಗಳು ಶಿವನ ಹತ್ತಿರ ( ಗಾಡ್ ಆಫ್ ಯೋಗ) ಹೋಗಿ ಯೋಗದ ಮಹತ್ವವನ್ನು ಕೇಳುತ್ತಾರೆ. ಆಗ ಆ ಸಪ್ತ ಋಷಿಗಳಿಗೆ ಯೋಗದ ಮಹತ್ವವನ್ನು ತಿಳಿಸಿ ಪ್ರಪಂಚದ 7 ಭಾಗಗಳಿಗೆ ಕಳಿಸಿಕೊಡುತ್ತಾನೆ ಎಂದು ಶಿವ ಪುರಾಣದಲ್ಲಿ ಉಲ್ಲೇಖವಿದೆ. ಯೋಗವನ್ನು ಮಾಡಿ, ಇದರಿಂದ ಏಕಾಗ್ರತೆ ಬರುತ್ತದೆ, ಅನೇಕ ರೋಗಗಳು ಶರೀರಕ್ಕೆ ಭಾದಿಸುವುದಿಲ್ಲ ಎಂದರು. ಈ ಸಂದರ್ಭದಲ್ಲಿ ಮಳೆ ಬಂದರೂ ಲೆಕ್ಕಿಸದೇ ಕೂಲಿಕಾರರಿಗೆ ಪ್ರಾಣಾಯಾಮ, ಕಪಾಲಬಾತಿಯಂತಹ ವಿವಿಧ ಯೋಗಗಳನ್ನು ಮಾಡಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕಾ ನರೇಗಾ ಸಹಾಯಕ ನಿರ್ದೇಶಕ ಚಂದ್ರು ಪೂಜಾರ ಮಾತನಾಡಿ ತಾವೆಲ್ಲರೂ ನರೇಗಾ ಯೋಜನೆಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಯೋಗ ದಿನಾಚರಣೆಯಲ್ಲಿ ಚನ್ನಾಗಿ ಪಾಲ್ಗೊಂಡಿದ್ದೀರಿ, ಇಲ್ಲಿ ಗಂಡು ಹೆಣ್ಣು ಭೇದ ಇಲ್ಲದೇ 309 ರೂ.ಗಳ ಸಮಾನ ಕೂಲಿ ಇರುತ್ತದೆ, ತಮಗೆಲ್ಲರಿಗೂ ಸರ್ಕಾರವು ತಮ್ಮ ಜೀವನೋಪಾಯಕ್ಕೆ ಗುಳೆ ಹೋಗುವುದನ್ನು ತಪ್ಪಿಸಲು ವರ್ಷಕ್ಕೆ 100 ದಿನಗಳ ಉದ್ಯೋಗ ಖಾತರಿಯನ್ನು ಕೊಟ್ಟಿದೆ, ಸಮುದಾಯ ಕಾಮಗಾರಿಗಳ ಜೊತೆಗೆ ವೈಯಕ್ತಿಕ ಕಾಮಗಾರಿಗಳಾದ ಸ್ವಚ್ಛತೆಗಾಗಿ ಬಚ್ಚಲುಗುಂಡಿ, ದನದ ಕೊಟ್ಟಿಗೆ, ಕುರಿ ಶೆಡ್, ಮುಂತಾದ ಇನ್ನೂ ಅನೇಕ ಯೋಜನೆಗಳಿವೆ, ತಾವುಗಳು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸಿರಿ, ತಮಗೇನಾದರೂ ಯೋಜನೆಯ ಬಗ್ಗೆ ಸಂದೇಹಗಳಿದ್ದಲ್ಲಿ ನನ್ನನ್ನು ನೇರವಾಗಿ ಸಂಪರ್ಕಿಸಿರಿ ಎಂದರು.
ತಾಲೂಕ ಆಯ್.ಇ.ಸಿ. ಸಂಯೋಜಕ ಎಸ್.ದಿವಾಕರ, ಸಮಾಜ ಸೇವಕ ಬಸವರಾಜ ನಂದಿ, ಕಾಯಕ ಬಂಧು ಬಸಯ್ಯ ಕಂದ್ಲಿ, ಹಾಗೂ 60ಕ್ಕೂ ಹೆಚ್ಚು ಮಹಿಳಾ ಹಾಗೂ ಪುರುಷ ಕೂಲಿಕಾರ್ಮಿಕರು ಪಾಲ್ಗೊಂಡಿದ್ದರು.