18 C
Hubli
ನವೆಂಬರ್ 30, 2022
eNews Land
ಸುದ್ದಿ

ಮಹಿಳೆಯರು ಆರ್ಥಿಕವಾಗಿ ಸಬಲರಾಗಿ: ಲಿಂಗರೆಡ್ಡಿ

Listen to this article

ಇಎನ್ಎಲ್ ಕಲಘಟಗಿ: ಕೃಷಿಯಲ್ಲಿ ಗ್ರಾಮೀಣ ಮಹಿಳೆಯರ ಪಾತ್ರ ಬಹುಮುಖ್ಯವಾಗಿದೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಆರ್ಥಿಕ ಸಾಕ್ಷರತೆಯೂ ಪ್ರಮುಖವಾಗಿದೆ. ಆದ್ದರಿಂದ ತಾವೆಲ್ಲರೂ ಈ ಕೇಂದ್ರವನ್ನು ಸದುಪಯೋಗ ಪಡಿಸಿಕೊಳ್ಳಿ. ಮುಕ್ಕಲ ಗ್ರಾಮದಲ್ಲಿ ಜರುಗಿದ ಮಹಿಳಾ ಸ್ವ-ಸಹಾಯ ಗುಂಪುಗಳಿಗೆ ಆರ್ಥಿಕ ಸಾಕ್ಷರತಾ ಕಾರ್ಯಕ್ರಮದಲ್ಲಿ ಮಾತನಾಡಿದ ಗ್ರಾ.ಪಂ.ಅಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ ತಾವೆಲ್ಲರೂ ಆರ್ಥಿಕ ಸಾಕ್ಷರತೆಯಲ್ಲಿ ನಿಪುಣರಾಗಿ, ಆಗ ದೇಶದ ಆರ್ಥಿಕ ಪ್ರಗತಿ ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ನಬಾರ್ಡನ ಜಿಲ್ಲಾ ಅಭಿವೃಧ್ಧಿ ಅಧಿಕಾರಿಗಳಾದ ಮಯೂರ ಕಾಂಬಳೆ ,ಜಿಲ್ಲಾ ಅಗ್ರಣಿಯ ಬ್ಯಾಂಕಿನ ಮುಖ್ಯ ಪ್ರಬಂಧಕ ಅಣ್ಣಯ್ಯ ಆರ್. ಕೆವಿಜಿ ಬ್ಯಾಂಕ್ ವ್ಯವಸ್ಥಾಕ ಎಸ್ ಬಾಲರತ್ನಂ, ಆರ್ಥಿಕ ಸಾಕ್ಷರತಾ ಕೇಂದ್ರದ ಸಮಾಲೋಚಕ ವಿನಾಯಕ ಚಲವಾದಿ ಹಾಗೂ ಬಸವರಾಜ ಇಂದೂರ ಇವರಿಗೆ ಮುಕ್ಕಲ ಗ್ರಾಮ ಪಂಚಾಯತಿ ವತಿಯಿಂದ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ ಅಧ್ಯಕ್ಷ ಲಿಂಗರೆಡ್ಡಿ ನಡುವಿನಮನಿ ಪಿಡಿಓ ನಾಗರಾಜಕುಮಾರ ಬಿದರಳ್ಳಿ ಗ್ರಾ.ಪಂ.ಉಪಾಧ್ಯಕ್ಷ ಶ್ರೀಕಾಂತಗೌಡ ಪಾಟೀಲ. ಸದಸ್ಯರಾದ ನಿಂಗಪ್ಪ ಶಿಗ್ಗಾಂವಿ, ಮಂಜುಳಾ ಹರಿಜನ, ನಾಗವೇಣಿ ಹಸರಂಬಿ, ಸಹಾದೇವಪ್ಪ ಹೊರಕೇರಿ, ಯಲ್ಲವ್ವ ಓಲೇಕಾರ, ಕಾಂತಗೌಡ ಪಾಟೀಲ, ರತ್ನವ್ವ ಗಾಡಗೋಳಿ, ಸರೋಜಾ ಬಡಿಗೇರ, ಹಾಗೂ ಉಪಸ್ಥಿತರಿದ್ದರು.

Related posts

ಕನಕದಾಸರ ತತ್ವಪದ ಪ್ರಸ್ತುತ ಸಮಾಜಕ್ಕೆ ಮಾದರಿ:ಬಸವರಾಜ ಕುಬಸದ

eNEWS LAND Team

ಒಮಿಕ್ರೋನ್ + ಡೆಲ್ಟಾ: ಗಡಿ ಪ್ರದೇಶದಲ್ಲಿ ಕಟ್ಟೆಚ್ಚರ; ಸಿಎಂ

eNewsLand Team

ಡಿ.6ಕ್ಕೆ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮನ

eNEWS LAND Team