27 C
Hubli
ಡಿಸೆಂಬರ್ 7, 2023
eNews Land
ಕ್ರೀಡೆ ಜನಪದ ಸುದ್ದಿ

ಇಂದು ಮಡಕಿಹೊನ್ನಿಹಳ್ಳಿಯಲ್ಲಿ ಕಲ್ಲು ಸಿಡಿ ಹೊಡೆಯುವ ಶಕ್ತಿ ಪ್ರದರ್ಶನ

ಯುವಕರು ಹೆಚ್ಚಾಗಿ ಪಾಲ್ಗೊಳ್ಳಿ: ಸಿ.ಬಿ.ಹೊನ್ನಿಹಳ್ಳಿ

ಇಎನ್ಎಲ್ ಕಲಘಟಗಿ: ತಾಲೂಕಿನ ಮಡಕಿಹೊನ್ನಿಹಳ್ಳಿ ಗ್ರಾಮದಲ್ಲಿ  ಯುಗಾದಿ ಹಬ್ಬದ ನಿಮಿತ್ತ ಶಕ್ತಿ ಪ್ರದರ್ಶನ ಏರ್ಪಡಿಸಲಾಗಿದೆ.ಇದೇ ಗ್ರಾಮದ ಉಮಾ ಮತ್ತು ಶಿವಪುತ್ರಪ್ಪ ಆಲದಕಟ್ಟಿ ಇವರ ಮಗನಾದ 21 ವಯಸ್ಸಿನ ಕುಮಾರ ಸಂತೋಷ ಇವರಿಂದ ಕಲ್ಲು ಸಿಡಿ ಹೊಡೆಯುವುದು ಸೇರಿದಂತೆ ವಿವಿಧ ಶಕ್ತಿ ಪ್ರದರ್ಶನ ಏರ್ಪಡಿಸಲಾಗಿದೆ. ಯುವ ಸಮುದಾಯವು ಇತ್ತೀಚಿನ ದಿನಗಳಲ್ಲಿ ಇಂತಹ ಚಟುವಟಿಕೆಗಳಲ್ಲಿ ಕ್ರಿಯಾ ಶೀಲರಾಗುವುದು ತುಂಬಾ ಕಡಿಮೆಯಾಗುತ್ತಿದೆ. ಆದ್ದರಿಂದ ಯುವ ಜನಾಂಗವು ಹೆಚ್ಚಾಗಿ ಪಾಲ್ಗೊಂಡು ಇಂತಹ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಸಿ.ಬಿ.ಹೊನ್ನಿಹಳ್ಳಿ ಸುದ್ದಿಗೋಷ್ಠಿಯಲ್ಲಿ  ಹೇಳಿದ್ದಾರೆ.

ಇದನ್ನೂ ಓದಿ: ಡೇಂಜರಸ್ ಅಪ್ಸರಾ!! ಇದು ಆರ್’ಜಿವಿಯ ಲೆಸ್ಬಿನ್ ಕ್ರೈಂ ಸಿನಿಮಾ! ಏ.8ಕ್ಕೆ ತೆರೆಗೆ..
               ಜಿ.ಎನ್.ಘಾಳಿ, ಆರ್.ಬಿ.ಜಮಖಂಡಿ, ತರಬೇತಿಗಾರ ಶಾಂತಯ್ಯ ಹಿರೇಮಠ ಹಾಗೂ ಇನ್ನಿತರೇ ಹಿರಿಯರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಸಾನಿಧ್ಯವನ್ನು ರೇವಣಸಿದ್ದಶಿವಚಾರ್ಯ ಸ್ವಾಮಿಗಳು ಹಾಗೂ  ಚನ್ನವೀರಶಿವಯೋಗಿಗಳು ವಹಿಸಲಿದ್ದು ಶಾಸಕ ಸಿ.ಎಮ್.ನಿಂಬಣ್ಣವರ ಹಾಗೂ ತಾಲೂಕಿನ ಗಣ್ಯರು ಭಾಗವಿಸುವರು ಎಂದು ಪ್ರಕಟಣೆಗೆ ತಿಳಿಸಿದ್ದಾರೆ. 

Related posts

ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಮಾಹಿತಿ ಕೊಡುತ್ತೇನೆ: ಎಸ್.ವಿಜಯಕುಮಾರ

eNEWS LAND Team

ಅಣ್ಣಿಗೇರಿ ಹಾಗೂ ನವಲಗುಂದ ಅಭಿವೃದ್ಧಿಗೆ ಕೋಟಿ ಗಟ್ಟಲೆ ಹರಿದು ಬಂದ ಅನುದಾನ

eNEWS LAND Team

ಜಮಾಲಿಗುಡ್ಡದಲ್ಲಿ ಡಾಲಿ ಧನಂಜಯ್, ಶ್ಯಾನೆ ಟಾಪ್ ಹುಡ್ಗಿ ಅದಿತಿ..!

eNewsLand Team