36 C
Hubli
ಮೇ 2, 2024
eNews Land
ವೈರಲ್ ಸುದ್ದಿ ಸುದ್ದಿ

ಶಕ್ತಿ ಯೋಜನೆಯಿಂದ ನಿಶಕ್ತಿಯಾಗಿ ಕ್ಷೀಣಿಸುತ್ತಿದೆ ವಿದ್ಯಾಭ್ಯಾಸ!!!

♦ವಿಶೇಷ ವರದಿ: ಸಿ.ಎ.ಹೂಗಾರ

ಇಎನ್‌ಎಲ್‌ ಅಣ್ಣಿಗೇರಿ: ರಾಜ್ಯ ಸರ್ಕಾರದ ಶಕ್ತಿ ಯೋಜನೆಯ ಉಚಿತ ಸಾರಿಗೆ ಸೌಲಭ್ಯದಿಂದ ಮಹಿಳಾ ಪ್ರಯಾಣಿಕರ ಸಂಖ್ಯೆ ಪ್ರಮಾಣ ಬಸ್ ನಿಲ್ದಾಣ, ಸಾರಿಗೆ ಬಸ್‌ಗಳಲ್ಲಿ ಹೆಚ್ಚಿದೆ. ಶಾಲಾ ಕಾಲೇಜ ವಿದ್ಯಾರ್ಥಿಗಳು ಸಕಾಲಕ್ಕೆ ನಿಗದಿತ ಸಮಯಕ್ಕೆ ಶಾಲಾ-ಕಾಲೇಜ ವರ್ಗಗಳಿಗೆ ತಲುಪಲು ಆಗುತ್ತಿಲ್ಲ.

ಇದನ್ನು ಓದಿ: ವಿದ್ಯಾರ್ಥಿಗಳ ಯಶಸ್ವಿಗೆ ಪ್ರೋತ್ಸಾಹ ಅವಶ್ಯಕ: ಡಾ.ಮೋಹನ ಅಣ್ಣಿಗೇರಿ

ನಿಲ್ದಾಣಕ್ಕೆ ಬರುವ  ಎಲ್ಲಾ ಬಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ತಂಗಿರುವುದರಿoದ  ನೂಕಾಟ-ತಳ್ಳಾಟ, ಮಾತಿನ ಚಕಮಕಿ, ಕಿಡಿಕಿ ಬಾಗಿಲುಗಳಿಂದ ಹತ್ತುವುದು, ಜೋತು ಬಿದ್ದು ಬಾಗಿಲ ಹತ್ತಿರ ನಿಂತುಕೊಳ್ಳುವುದು. ಬಸ್‌ನಲ್ಲಿ ಕುಳಿತುಕೊಳ್ಳುವ ಸೀಮಿತ ಸೀಟು ಪ್ರಮಾಣ ಲೆಕ್ಕಿಸದೇ, ಎರಡು ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರು ಒಂದೇ ಬಸ್‌ನಲ್ಲಿ ಸಂಚರಿಸುತ್ತಿರೋದು ಕಂಡುಬರುತಿದೆ. ಚಾಲಕರು, ನಿರ್ವಾಹಕರು, ಅದೆಷ್ಟೋ ಸಲುಹೆ ಸೂಚನೆ ಕೊಟ್ಟು ಹೇಳಿದರೂ ಕಿವಿ ಕೇಳದಂತೆ ವಕ್ಕರಿಸಿ ಬಸ್‌ನಲ್ಲಿ ನುಗ್ಗುತ್ತಿರೋದು ಮೆಲ್ನೋಟಕ್ಕೆ ಕಾಣುತಿದೆ.

ಇದನ್ನು ಓದಿ: ಜನಪದ ಕಲೆ ಆಧುನಿಕ ಕಲೆಗಳಿಗೆ ತಾಯಿಬೇರು: ವಿಜಯಶ್ರೀ ಹಿರೇಮಠ

ವಿದ್ಯಾರ್ಥಿಗಳ ಸಂಕಷ್ಟ ಕೇಳುವರ‍್ಯಾರು?

ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ಶಾಲಾ ಕಾಲೇಜಗಳಿಗೆ ಒಂದು ತಾಸು ತಡವಾಗಿ ಬರುತ್ತಿದ್ದು, ಶಾಲಾ ಅವಧಿ ಮುಗಿದ ನಂತರವು ಒಂದೇರಡು ತಾಸು ಲೇಟಾಗಿ ಊರು ಸೇರುವ ಪರಿಸ್ಥಿತಿ ತಲುಪಿದೆ. ಬಸ್ ನಿಲ್ದಾಣಕ್ಕೆ ಬರುವ ಬಸ್‌ಗಳು ಹೆಚ್ಚಾಗಿ ಪ್ರಯಾಣಿಕರಿಂದ ತುಂಬಿಕೊoಡು ಬರುತ್ತಿದ್ದರಿಂದ ವಿದ್ಯಾರ್ಥಿಗಳು ಬಸ್ ಹತ್ತುವುದಕ್ಕೆ ಆಗದೇ, ಬಾಗಿಲು ಬಳಿ ಜೋತು ಬಿದ್ದು, ಜೀವದ ಹಂಗು ತೊರೆದು ಪ್ರಯಾಣಿಸುವ ಸ್ಥಿತಿ ತಲೆದೋರಿದೆ.
ಕಾಲೇಜ ವಿದ್ಯಾರ್ಥಿಗಳು ಮುಂಜಾನೆ 10 ಗಂಟೆಗೆ ಪರೀಕ್ಷೆಗೆ ಹಾಜರಾಗಬೇಕಾದರೇ, ಬೆಳಿಗ್ಗೆ 7 ಗಂಟೆಗೆ ಬಸ್ ನಿಲ್ದಾಣಕ್ಕೆ ಬಂದು ನಿಲ್ಲಬೇಕು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ, ಜೀವಕ್ಕೆ ಕುತ್ತು ತರುವ ರೀತಿಯಲ್ಲಿ ಉಚಿತ ಪ್ರಯಾಣ ಯೋಜನೆ ಕಂಟಕವಾಗಿದ್ದು ಸತ್ಯ. ನಿತ್ಯ ಸಂಚರಿಸುವ ಉದ್ಯೋಗಸ್ಥರು, ಪರುಷರು, ಹಣಕೊಟ್ಟು ನಿಂತುಕೊoಡೆ ಪ್ರಯಾಣಿಸುವ ಅನಿವರ‍್ಯತೆ ಶಕ್ತಿಯೋಜನೆಯಿಂದ ಬಂದಿದೆ.

ಇದನ್ನು ಓದಿ: ಸಾಹಿತಿ ಅಮೃತೇಶ್ವರ ತಂಡರಗೆ ಮಕ್ಕಳ ಮಾಣಿಕ್ಯ ಪ್ರಶಸ್ತಿ

ತಾಲೂಕಿನ ಬಹುತೇಕ ಗಾಮೀಣ ರಸ್ತೆಗಳು ಹದೆಗೆಟ್ಟಿವೆ. ಕೇವಲ ಬೆಳಿಗ್ಗೆ ಸಂಜೆ ನಿಗದಿತವೇಳೆ ಬಸ್ ಸಂಚಾರವಿದ್ದರೂ ಕೆಲವು ಸಂದರ್ಭದಲ್ಲಿ ಬಸ್ ಬಾರದೇ, ವಿದ್ಯಾರ್ಥಿಗಳು, ಪ್ರಯಾಣಿಕರು, ಹಿಡಿಶಾಪ ಹಾಕುವಂತಿದೆ.  ನಿತ್ಯ 15-20 ನಿಮಿಷದಲ್ಲಿ ಗ್ರಾಮಗಳಿಗೆ ತೆರಳುವ ಸಾರಿಗೆ ಬಸ್‌ಗಳು ನಿಧಾನವಾಗಿ ತಗ್ಗಿದಿನ್ನುಗಳಿರುವ ರಸ್ತೆಗಳಿಂದ ಸಂಚರಿಸಲು ಒಂದು ಗಂಟೆ ತಡವಾಗಿ ಬರುತಿವೆ.  ಗ್ರಾಮೀಣ ಪ್ರದೇಶಗಳಿಗೆ ಹೆಚ್ಚಿನ ಬಸ್ ಸೌಲಭ್ಯ ಒದಗಿಸಲು ಸಾರಿಗೆ ಇಲಾಖೆ ಗಮನಹರಿಸುತ್ತಿಲ್ಲ. ಅದೆಷ್ಟೋ ಬಾರಿ ಮನವಿ ಸಲ್ಲಿಸಿ, ಬಸ್ ನಿಲ್ದಾಣದಲ್ಲಿ ಬಸ್ ತಡೆದು ವಿದ್ಯಾರ್ಥಿಗಳು ಪ್ರತಿಭಟಸಿದರೂ ಪ್ರಯೋಜನಕ್ಕೆ ಬಾರದಂತಾಗಿದೆ.

ಇದನ್ನು ಓದಿ: ಪೌರಸೇವಾ ನೌಕರರ ಸೇವಾ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ
ಸರ್ಕಾರದ ಶಕ್ತಿಯೋಜನೆಯಿಂದ ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದಿಂದ ವಂಚಿತರಾಗೋದರಲ್ಲಿ ಸಂದೇಹವಿಲ್ಲ. ಸಾರಿಗೆ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಆಗುತ್ತಿರುವ ತೊಂದರೆ ವಸ್ತುಸ್ಥಿತಿ, ಸಂಕಷ್ಟ ಪರಿಸ್ಥಿತಿ ಅವಲೋಕಿಸದೇ ಕುರುಡು ಜಾಣ್ಮೆ ತೋರುತ್ತಿರೋದು ಕಂಡುಬರುತಿದೆ. ಸರ್ಕಾರದ ಉಚಿತ ಶಕ್ತಿ ಯೋಜನೆಯಿಂದ ವಿದ್ಯಾರ್ಥಿಗಳು ಭವಿಷ್ಯದ ಜೊತೆ ಚೆಲ್ಲಾಟವಾಡುತಿದೆ. ಸರ್ಕಾರ ಸಾರಿಗೆಇಲಾಖೆ, ಜಿಲ್ಲಾಡಳಿತ,ಜನಪ್ರತಿನಿಧಿಗಳು, ವಿದ್ಯಾರ್ಥಿಗಳ ಗೋಳು ಪರೀಶಿಲಿಸಿ ಸೂಕ್ತ ಕ್ರಮ ಕೈಗೊಳ್ಳುವುರೋ ಎಂಬುದನ್ನು ತಾಳಿ ನೋಡಬೇಕಿದೆ. 

ಇದನ್ನು ಓದಿ: ಶಕ್ತಿ ಯೋಜನೆ ಖಂಡಿಸಿ ಅಟೋ ಚಾಲಕರ ಪ್ರತಿಭಟನೆ

ಬಸ್ ನಿಲ್ದಾಣದ ಸ್ಥಿತಿಗತಿ
ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಸಿದೆ. ಬುಕ್ ಸ್ಟಾಲ್, ಸ್ವೀಟ್ ಮಾರ್ಟ್, ಹೊಟೆಲ್ ಕೂಡಾ ಲಭ್ಯವಿದೆ. ಹಾಗೂ ಪುರಷ ಮತ್ತು ಮಹಿಳೆಯರಿಗೆ ಶೌಚಾಲಯ ಸೌಲಭ್ಯ ಒದಗಿಸಿದೆ. ಮಹಿಳೆಯರಿಗೆ ಪ್ರತ್ಯೇಕ ವಿಶ್ರಾಂತಿ ಕೊಠಡಿಯಿದ್ದು ವಿದ್ಯಾರ್ಥಿನಿಯರು ಹೆಚ್ಚಾಗಿ ತಂಗಿರುತ್ತಾರೆ. ನಿತ್ಯ ಬೆಳಿಗ್ಗೆ ಹಾಗೂ ಸಂಜೆ ಎರಡು ಹೊತ್ತು ಬಸ್ ನಿಲ್ದಾಣ ಸ್ವಚ್ಛತೆಗೆ ಕಸಗೂಡಿಸಿದರೂ ಪ್ರಯಾಣಿಕರು ಎಲ್ಲೆಂದರಲ್ಲಿ ಕಸ ಚೆಲ್ಲಿರುತ್ತಾರೆ. ಹಳ್ಳಿ ಜನತೆ ಎಲ್ಲೆಂದರಲ್ಲಿ ನಿಲ್ದಾಣದ ಹೊರಾಂಗಣ ಮತ್ತು ಒಳಾಂಗಣದಲ್ಲಿ  ಅಡಿಕೆ ಎಲೆ  ಗುಟುಕಾ ಹಾಕಿಕೊಂಡು ಉಗುಳಿರುತ್ತಾರೆ. ಶೌಚಾಲಯಲ್ಲಿ ಮೂತ್ರವಿಸರ್ಜನೆ ಉಚಿತವಿದ್ದರೂ, ಇನ್ನುಳಿದಂತೆ ಶೌಚಾಲಯಕ್ಕೆ ತೆರಳುವ ಪ್ರಯಾಣಿಕರು  ಹಣಕೊಟ್ಟು ಹೋಗಬೇಕಿದೆ. ಖಾಸಗಿ ಗುತ್ತಿಗೆದಾರರು ಸ್ವಚ್ಛತೆ ಕಾಪಾಡಿಕೊಂಡು ಸರ್ವಿಸ್ ನೀಡುತ್ತಿದ್ದಾರೆ. ಪುರುಷ, ಮಹಿಳೆಯರ ಶೌಚಾಲಯ ಶುಚಿತ್ವ ತಕ್ಕಮಟ್ಟಕ್ಕಿದ್ದು ಇನ್ನು ಹೆಚ್ಚು ಶುಚಿತ್ವಕ್ಕೆ ಗಮನಹರಿಸಬೇಕಿದೆ.
ಅಣ್ಣಿಗೇರಿ ಬಸ್ ನಿಲ್ದಾಣ ಒಳಾಂಗಣದಲ್ಲಿ ಬೈಕ್ ನಿಲ್ಧಾಣ, ಅಟೋ ನಿಲ್ದಾಣ, ಕಾರು ಪಾರ್ಕಿಂಗ್ ಇದ್ದರೂ ಬೈಕ್ ಸವಾರರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿರುತ್ತಾರೆ. ಶಕ್ತಿ ಯೋಜನೆಯಿಂದ ಬಸ್ ನಿಲ್ದಾಣದ ಜನಸಂದಣಿ ಹೆಚ್ಚಿದ್ದು, ಸುಸಜ್ಜಿತ ಬಸ್‌ಗಳು ಸಂಚಾರ ಕಡಿಮೆಯಿದ್ದರೂ ಪ್ರಯಾಣಿಕರ ಒತ್ತಾಸೆಗೆ ಅಸ್ತಿತ್ವದ ಅಂಚಿನಲ್ಲಿರುವ ಸಾರಿಗೆ ಬಸ್‌ಗಳ ಒಡಾಟವೇ ಹೆಚ್ಚು ಕಂಡುಬರುತಿದೆ.

ಇದನ್ನು ಓದಿ: ಇಬ್ರಾಹಿಂಪೂರ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ಬೆಳಿಗ್ಗೆ ಮತ್ತು ಸಂಜೆ ಗ್ರಾಮಕ್ಕೆ ನಿಗದಿತ ಸಮಯಕ್ಕೆ ಬರುವ ಗ್ರಾಮೀಣ ಬಸ್‌ಗಳು ಹದೆಗೆಟ್ಟ ರಸ್ತೆಗಳ ಮೂಲಕ  ಮಹಿಳಾ ಪ್ರಯಾಣಿಕರಿಂದ ತುಂಬಿಕೊoಡು ತಡವಾಗಿ ಬರುತ್ತಿದ್ದು, ಕಾಲೇಜ ನಿಗದಿತ ಸಮಯಕ್ಕೆ ಹಾಜರಾಗಲು ಆಗುತ್ತಿಲ್ಲ. ನಿತ್ಯ ಪ್ರಯಾಣದಿಂದ ಒಂದೇರಡು ಕ್ಲಾಸ್, ಟೆಸ್ಟ್, ಗೈರು ಆಗುತ್ತಿದ್ದು ವಿದ್ಯಾರ್ಥಿಗಳ ಶಿಕ್ಷಣ ಕಲಿಕೆಗೆ ಸರಕಾರದ ಶಕ್ತಿಯೋಜನೆ ಕೊಡ್ಲಿ ಪೆಟ್ಟು ಕೊಟ್ಟಂತಾಗಿದೆ.
ಭುವನೇಶ್ವರಿ ಹೈಗರ (ಬೆನ್ನೂರ ಗ್ರಾಮ) ಬಿ.ಎ. ವಿದ್ಯಾರ್ಥಿನಿ
ಎಂ.ಬಿ.ಹಳ್ಳಿ ಸರಕಾರಿ ಪ್ರಥಮ ದರ್ಜೆ ಕಾಲೇಜ್ ಅಣ್ಣಿಗೇರಿ.  

ಇದನ್ನು ಓದಿ: ಶಿಶ್ವಿನಹಳ್ಳಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆ ಸ್ಥಾನಕ್ಕೆ ಆಯ್ಕೆ

ದಿನ ನಿತ್ಯ ಸಂಚರಿಸುವ ಗ್ರಾಮೀಣ ಬಸ್‌ಗಳು ಸಕಾಲಕ್ಕೆ ಬರದೇ ಶಾಲಾ ತರಗತಿಗಳಿಗೆ ಒಂದೇರಡು ತಾಸು ತಡವಾಗಿ ಹೋಗಬೇಕಿದೆ.ಕೆಲವು ಸಂದರ್ಭದಲ್ಲಿ 4-5 ಕಿಮೀ ಗ್ರಾಮದಿಂದ ನಡೆದುಕೊಂಡು ಶಾಲೆಗೆ ಬರುವಂತಹ ಪರಿಸ್ಥಿತಿ ಒದಗಿದೆ. ಶಕ್ತಿ ಯೋಜನೆ ಪರಿಣಾಮ ಮನೆಯಲ್ಲಿ  ಶಾಲಾ ಹೋಮವರ್ಕ ಮಾಡಲು ಆಗುತ್ತಿಲ್ಲ. ಪಟ್ಟಣದ ಶಾಲೆಗೆ ಹೋಗಲು ಮತ್ತು ಮರಳಿ ಗ್ರಾಮಕ್ಕೆ ಬರಲು ನಿಗಧಿತ ಸಮಯಕ್ಕೆ ಸಾರಿಗೆ ಬಸ್ ಸೌಲಭ್ಯವಿಲ್ಲದೇ ಲೇಟಾಗಿ ಬರಬೇಕಿದೆ.
ವೀರಭದ್ರಪ್ಪ ಚಂದರಗಿ (ಹಳ್ಳಿಕೇರಿ ಗ್ರಾಮ) 9ನೇ ತರಗತಿ ವಿದ್ಯಾರ್ಥಿ ಎನ್.ಎಸ್.ಹೂಗಾರ ಇಂಗ್ಲಿಷ ಮೀಡಿಯಂ ಹೈಸ್ಕೂಲ್ ಅಣ್ಣಿಗೇರಿ.

ಇದನ್ನು ಓದಿ: ಅಣ್ಣಿಗೇರಿ ತಾಲೂಕಿನಾದ್ಯಾಂತ ಗೃಹಲಕ್ಷ್ಮೀ ನೊಂದಣಿಗೆ ತುಂಬಿರುವ ಸೇವಾಕೇಂದ್ರಗಳು!!

Related posts

ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ ಯೋಜನೆ:

eNEWS LAND Team

ಅಣ್ಣಿಗೇರಿ: ಅನ್ನದ ಗಿರಿಯಲ್ಲಿ ಅಮೃತೇಶ್ವರ ಜಾತ್ರಾ ಮಹೋತ್ಸವ!

eNEWS LAND Team

ಜಲಜೀವನ್ ಮಿಷನ್ ಯೋಜನೆ- ದೂರದೃಷ್ಟಿಯಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿ:ಸಂಸದ ಶಿವಕುಮಾರ ಉದಾಸಿ

eNEWS LAND Team