23.4 C
Hubli
ಮಾರ್ಚ್ 24, 2023
eNews Land
ಸುದ್ದಿ

ಅಣ್ಣಿಗೇರಿ ಜನತೆಗೆ 24/7 ಕುಡಿಯುವ ನೀರು ಯಾವಾಗ? ದಾಹ ಇಂಗಿಸುವುದ್ಯಾವಾಗ?

Listen to this article

ವಚನ ಹೂಗಾರ

ಇಎನ್ಎಲ್ ಅಣ್ಣಿಗೇರಿ: ಪಟ್ಟಣದ ಜನತೆಗೆ 24/7 ಕುಡಿಯುವ ನೀರು ಪೂರೈಸುವುದು ಯಾವಾಗ? ನೀರಿನ ದಾಹ ಇಂಗಿಸುವುದ್ಯಾವಾಗ? ಕಳೆದ ದಶಕಗಳಿಂದಲೂ 23 ವಾರ್ಡಗಳಿಗೆ ಸರದಿ ಪ್ರಕಾರ 2 ತಾಸು 10-15 ದಿನಕ್ಕೊಮ್ಮೆ ಪೂರೈಸುವ ಕುಡಿಯುವ ನೀರು ಸಂಗ್ರಹಿಸಿ, ಬಳಿಕೆ ಮಾಡುತ್ತಿರುವ ಜನತೆಯ ಗೋಳು ಕೇಳುರ‍್ಯಾರು? ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಮನೆಮಾತಾಗಿದೆ.

ಬಿಜೆಪಿ ಸರ್ಕಾರದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಆಡಳಿತದಲ್ಲಿ ಯೋಜನೆ ಅನುಷ್ಠಾನಕ್ಕೆ 44.75 ಕೋಟಿರೂಗಳ ವೆಚ್ಚದಲ್ಲಿ ಬಜೆಟ್ ಅನುಮೋದನೆ ಮಂಜೂರಾತಿ ದೊರಕಿತ್ತು. ಬಸಾಪೂರ ಗ್ರಾಮದ ಬಳಿ ಇರುವ ಮಲಪ್ರಭಾ ಬಲದಂಡೆ ಕಾಲುವೆ ಪಕ್ಕದಲ್ಲಿ 76 ಎಕರೆ ಜಮೀನಿನಲ್ಲಿ ಜಲಸಂಗ್ರಹಗಾರ ಕೆರೆಗೆ ಕಾಮಗಾರಿ ಆರಂಭಿಸಲು ಮೊದಲ ಕಂತಿನ ೩೪ ಕೋಟಿ ರೂಗಳು ಅನುದಾನ ನೀಡಿತ್ತು.

ಯೋಜನೆ ಜಮೀನು ಸ್ಥಾನಪಲ್ಲಟದಿಂದ ವಿಳಂಭವಾಗಿ ಮತ್ತೆ ಮೊದಲು ಗುರ್ತಿಸಿದ್ದ 76 ಎಕರೆ ಜಮೀನಿನಲ್ಲಿ ಮಾಜಿ ಶಾಸಕ ಎನ್.ಎಚ್.ಕೋನರಡ್ಡಿ 20 ಕೋಟಿ ರೂಗಳ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ಕೊಟ್ಟರು. ಗುತ್ತಿಗೆದಾರರು ವೆರಿಯೆಷನ್ ಬಿಲ್ ಪಾವತಿಸದ ಕಾರಣ ಕಾಮಗಾರಿ ಸ್ಥಗಿತಗೊಳಿಸಿದರು.

ಶಾಸಕ ಶಂಕರ ಪಾಟೀಲ ಯೋಜನೆ ಅನುಷ್ಠಾನಕ್ಕೆ ಮತ್ತೆ ಟೆಂಡರ್ ಕರೆದು ಸಪ್ಟಂಬರ್ 2018 ರಲ್ಲಿ ಚಾಲನೆ ನೀಡಿದರು. ಕಳೆದ ನಾಲ್ಕು ವರ್ಷಗಳಿಂದ ಕಾಮಗಾರಿ ಮುಗಿಯದೇ, ನಿಧಾನಗತಿಯಲ್ಲಿ ಸಾಗಿದೆ. 2020 ಎಪ್ರೀಲ್ ನಲ್ಲಿಯೇ ಕಾಮಗಾರಿ ಮುಕ್ತಾಯಗೊಳಿಸುತ್ತೇವೆಂದು ನೀಡಿದ ಶಾಸಕರ, ಅಭಿಯಂತರ, ಭರವಸೆ ಟುಸ್ಸ್ ಆಗಿದೆ. 

ಇದನ್ನೂ ಓದಿ: ಅಗ್ನಿಶಾಮಕ ದಳದ ಸಿದ್ದಪ್ಪ ಉಪ್ಪಾರ ಮನೆಗೆ ಭೇಟಿ: ಸಚಿವ ಶಂಕರ ಪಾಟೀಲ – https://enewsland.com/news/munenkoppa-visit-to-siddappa-home/8394/

ದಶಕವರ್ಷ ಕಳೆದರೂ ಪೂರ್ಣಗೊಳ್ಳದ ಜಲಸಂಗ್ರಹ ಜಲಾಶಯ ಕೆರೆ ನಿರ್ಮಾಣ ಪೂರ್ಣಗೊಳಿಸಿ,10 ದಿನಕ್ಕೊಮ್ಮೆ ಸಂಗ್ರಹಿಸಿದ ಅಶುದ್ಧ ನೀರಿನಿಂದ ರೋಗುರುಜಿನುಗಳು ವ್ಯಾಪಿಸಿ,ಅನಾರೋಗ್ಯದಿಂದ ಬಳಲುವ ಜನರ ಆರೋಗ್ಯ ರಕ್ಷಿಸುವಲ್ಲಿ ಗಮನಹರಿಸಬೇಕಿದೆ. ಅಂದಿನ ಮಾಜಿ ಇಂದಿನ ಹಾಲಿ ಶಾಸಕರು,ಜಿಲ್ಲಾಡಳಿತ, ಜನಪ್ರತಿನಿಧಿಗಳು, ಅಧಿಕಾರಿಗಳು, ಅಭಿಯಂತರರು,ತಾoತ್ರಿಕ ನೆಪವೊಡ್ಡಿ ನಿರ್ಲಕ್ಷಧೋರಣೆ ತಾಳದೇ, ನಿತ್ಯ 24ಗಂಟೆ ಜೀವಜಲ ಕುಡಿಯುವ ನೀರು ಕಲ್ಪಿಸಲು ಕ್ರಮಕೈಗೊಳ್ಳುವರೇ ಎಂಬುದನ್ನು ಕಾಯ್ದನೋಡಬೇಕಿದೆ.

ಶಾಶ್ವತ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಜಲಸಂಗ್ರಹಗಾರ ಕರೆ ನಿರ್ಮಾಣ ತೀವ್ರಗತಿಯಲ್ಲಿ ಭರದಿಂದ ಕಾಮಗಾರಿ ಪೂರ್ಣಗೊಳಿಸಲು ಕ್ರಮಕೈಗೊಂಡಿದೆ. ಒಟ್ಟು 54 ಕೋಟಿ ರೂಗಳ ವೆಚ್ಚದಲ್ಲಿ ಪಟ್ಟಣದ ಪ್ರತಿ ಮನೆಗೂ ಪೈಪ್ ಲೈನಜೋಡಿಸಿ ನಿತ್ಯ 24 ಗಂಟೆ ನೀರು ಪೂರೈಸುವಲ್ಲಿ ಕ್ರಮಕೈಗೊಳ್ಳಲಾಗುವುದು.ಸದ್ಯದಲ್ಲಿಯೇ 24/7 ಕಾಮಗಾರಿಗೆ ಚಾಲನೆ ನೀಡಲಾಗುವುದೆಂದ ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಂಕರ ಪಾಟೀಲ ಮುನೇನಕೊಪ್ಪ.

 

ಪಟ್ಟಣದ ಜನತೆಯ ಬಹುವರ್ಷಗಳ ಬೇಡಿಕೆಗೆ ಸ್ಪಂದಿಸಿದ್ದರೇ, ಶಾಶ್ವತ ಕುಡಿಯುವ ನೀರಿನ ಜಲಸಂಗ್ರಹಗಾರ ಕೆರೆ ಎಂದೋ ನಿರ್ಮಾಣವಾಗಬೇಕಿತ್ತು. ಶಾಸಕರು, ಜನಪ್ರತಿನಿಧಿಗಳು, ಅಧಿಕಾರಿಗಳು,ಅಭಿಯಂತರು, ಇಚ್ಛಾಶಕ್ತಿ ಕೊರತೆಯಿಂದ ಕಾಮಗಾರಿ ವಿಳಂಭಗೊoಡಿತು. ರಾಜಕೀಯ ಪಕ್ಷಗಳ ಮುಖಂಡರು ರಾಜಕೀಯ ಅಸ್ತoಬಳಿಕೆ ಮಾಡುವುದನ್ನು ಬಿಟ್ಟು,ಜನತೆಯ ನೀರಿನ ದಾಹ ತೀರಿಸುವಲ್ಲಿ ಗಮನಕೊಟ್ಟಿದ್ದರೇ, ಕಾಮಗಾರಿಗಳು ಕುಂಠಿತಗೊಳ್ಳುತ್ತಿರಲಿಲ್ಲ.ಉಲ್ಭಣಗೊoಡ ಜನತೆ ಕುಡಿಯುವ ನೀರಿನ ಸಮಸ್ಯೆ ಆಲಿಸಿ, ಬಹುದಿನದ ಕನಸು ನನಸಾಗುವಲ್ಲಿ ಕ್ರಮಕೈಗೊಳ್ಳಬೇಕೆಂದ ಸಮಾಜಸೇವಕ ಕೆ.ಆರ್.ಹಿರೇಮಠ.

Related posts

ಸಾಕ್ಷರತಾ ಕಾರ್ಯಕ್ರಮಗಳ ಅನುಷ್ಠಾನ: ಸಾಮೂಹಿಕ ಜವಾಬ್ದಾರಿ

eNEWS LAND Team

ಹುಬ್ಬಳ್ಳಿಲಿ ಬೈಕು ಟಚ್ ಆಗಿದ್ದಕ್ಕೆ ಚಾಕೂ ಚುಚ್ಚಿದ್ನಾ ಉಸ್ಮಾನ್ ಭಾಯ್!!

eNewsLand Team

ಪ್ಲೈ ಓವರ್ ನಿರ್ಮಾಣದ ಅಗತ್ಯತೆ ಒಪ್ಪಿದ ತಜ್ಞರ ಸಮಿತಿ

eNEWS LAND Team