23 C
Hubli
ಸೆಪ್ಟೆಂಬರ್ 25, 2023
eNews Land
ಸುದ್ದಿ

ಪಶ್ಚಿಮ ಶಿಕ್ಷಕರ ಕ್ಷೇತ್ರ: ಮತದಾರರ ಕರಡು ಪಟ್ಟಿ ಪ್ರಕಟ ಡಿ.27 ರವರೆಗೆ ಆಕ್ಷೇಪಣೆಗಳ ಸಲ್ಲಿಕೆಗೆ ಅವಕಾಶ

ಇಎನ್ಎಲ್ ಧಾರವಾಡ ಡಿ.06: ಕರ್ನಾಟಕ ಪಶ್ಚಿಮ ಶಿಕ್ಷಕರ ಮತ ಕ್ಷೇತ್ರದ ಕರಡು ಮತದಾರರ ಪಟ್ಟಿಯನ್ನು ಇಂದು ಡಿಸೆಂಬರ್ 06 ರಂದು ಪ್ರಕಟಿಸಲಾಗಿರುತ್ತದೆ.

ಕರಡು ಮತದಾರರ ಪಟ್ಟಿಯು ಮತದಾರರ ನೋಂದಣಿ ಅಧಿಕಾರಿಗಳಾದ ಬೆಳಗಾವಿಯ ಪ್ರಾದೇಶಿಕ ಆಯುಕ್ತರು, ಸಹಾಯಕ ನೋಂದಣಾಧಿಕಾರಿಗಳಾದ ಧಾರವಾಡ, ಗದಗ, ಹಾವೇರಿ ಮತ್ತು ಉತ್ತರಕನ್ನಡದ ಜಿಲ್ಲಾಧಿಕಾರಿಗಳ ಕಚೇರಿಗಳು ಹಾಗೂ ಅವರ ವ್ಯಾಪ್ತಿಯ ಎಲ್ಲ ನಿಯೋಜಿತ ಅಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರುತ್ತದೆ. ಬೆಂಗಳೂರಿನ ಮುಖ್ಯ ಚುನಾವಣಾಧಿಕಾರಿಗಳ www.ceokarnataka.kar.nic.in ವೆಬ್‍ಸೈಟ್‍ನಲ್ಲಿಯೂ ಕೂಡಾ ಲಭ್ಯವಿರುತ್ತದೆ.

ಅರ್ಹ ಶಿಕ್ಷಕ ಮತದಾರರು ಪಟ್ಟಿಯನ್ನು ಪರಿಶೀಲಿಸಿ, ಹಕ್ಕು ಮತ್ತು ಆಕ್ಷೇಪಣೆಗಳನ್ನು ಡಿಸೆಂಬರ್ 27 ರೊಳಗೆ ನಮೂನೆ 19 ರಲ್ಲಿ ಅರ್ಜಿ ಭರ್ತಿ ಮಾಡಿ ಸಂಬಧಿಸಿದ ಜಿಲ್ಲಾಧಿಕಾರಿಗಳು,ತಹಸೀಲ್ದಾರ ಕಚೇರಿಗಳಲ್ಲಿ ಸಲ್ಲಿಸಬಹುದು ಎಂದು ಬೆಳಗಾವಿ ಪ್ರಾದೇಶಿಕ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಅಮೂಲ್ ಜೊತೆ ನಂದಿನಿ ವಿಲೀನ ಪ್ರಸ್ತಾಪವೇ ಇಲ್ಲ: ಸಚಿವ ಎಸ್.ಟಿ.ಸೋಮಶೇಖರ್

eNEWS LAND Team

ಭಜರಂಗದಳ ಮತ್ತು ಪಿಎಫ್ಆಯ್ ಒಂದೇ ತಕ್ಕಡಿಯಲ್ಲಿ ತೂಗಿದ ಕಾಂಗ್ರೆಸ್ ಮುಖಂಡ ಯಾರು?

eNEWS LAND Team

ಭಿಕ್ಷಕರಲ್ಲೂ ಸಂಘಟನೆ ಶಕ್ತಿ ಇದೆ, ಸಂಘಟನೆ ಅನಿವಾರ್ಯ: ಬಸವರಾಜ ಹೊರಟ್ಟಿ

eNEWS LAND Team