38.6 C
Hubli
ಏಪ್ರಿಲ್ 16, 2024
eNews Land
ಸುದ್ದಿ

ಹುಬ್ಬಳ್ಳಿಲೂ ಮಕ್ಕಳಿಗೆ ಕೋವಿಡ್ ಲಸಿಕಾಕರಣ

ಇಎನ್ಎಲ್ ಧಾರವಾಡ

ಜಿಲ್ಲೆಯ 15 ರಿಂದ 18 ವರ್ಷ ವಯೋಮಾನದ ಸುಮಾರು 95774 ಮಕ್ಕಳಿಗೆ ಜನೆವರಿ 3 ರಿಂದ ಕೋವಿಡ್-19 ಲಸಿಕಾಕರಣ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು ಜಿಲ್ಲೆಯ ಸುಮಾರು 95774 ಮಕ್ಕಳಿಗೆ ಲಸಿಕೆ ನೀಡಲು ಅಗತ್ಯ ಸಿದ್ದತೆ ಹಾಗೂ ತರಬೇತಿಯನ್ನು ನೀಡಲಾಗಿದೆ. ಅರ್ಹತೆ ಇರುವ ಮಕ್ಕಳಿಗೆ ಅವರು ಕಲಿಯುತ್ತಿರುವ ಶಾಲಾ ಕಾಲೇಜುಗಳಲ್ಲಿಯೇ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗಿದೆ.
ಜ. 3 ರಂದು ಲಸಿಕಾಕರಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲಾ ಮಟ್ಟದ ಕಾರ್ಯಕ್ರಮದಲ್ಲಿ ಚಾಲನೆ ನೀಡುವರು ಮತ್ತು ಜಿಲ್ಲೆಯ ಶಾಸಕರು ತಮ್ಮ ಮತಕ್ಷೇತ್ರಗಳಲ್ಲಿ ಚಾಲನೆ ನೀಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಲಸಿಕಾಕರಣಕ್ಕೆ ಅರ್ಹರು: 2007 ಮತ್ತು ಅದಕ್ಕಿಂತ ಪೂರ್ವದಲ್ಲಿ ಜನಿಸಿರುವ 15 ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲಾಗುತ್ತದೆ. ಮೊದಲ ಡೋಸ್ ಲಸಿಕೆ ಪಡೆದ ಮಕ್ಕಳಿಗೆ 28 ದಿನಗಳ ಅಂತರದಲ್ಲಿ ಎರಡನೇ ಡೋಸ್ ಲಸಿಕೆ ನೀಡಲಾಗುತ್ತದೆ.
ಲಸಿಕೆ ಪಡೆಯುವ ಅರ್ಹ ಮಕ್ಕಳು ಸ್ವಂತ ಮೋಬೈಲ್ ಸಂಖ್ಯೆ ಬಳಸಿ ಅಥವಾ ಕೋವಿನ್ ಪೋರ್ಟಲ್‍ನಲ್ಲಿ ಈಗಾಗಲೇ ನೋಂದಾಯಿತರಾಗಿರುವ ತಂದೆ, ತಾಯಿ, ಪೋಷಕರ ಖಾತೆಯಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಶಾಲೆಯ ಮುಖ್ಯೋಪಾದ್ಯಾಯರ ಮೋಬೈಲ್ ಸಂಖ್ಯೆಯ ಮೂಲಕ ನೊಂದಣಿ ಮಾಡಿಕೊಳ್ಳಬಹುದು ಹಾಗೂ ಶಾಲೆಯ ಗುರುತಿನ ಚೀಟಿ ಅಥವಾ ಆಧಾರ ಬಳಸಿ ಫೋಟೋ ಐಡಿಯನ್ನು ಕೋವಿನ್ ಪೋರ್ಟಲ್‍ದಲ್ಲಿ ಸೇರಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಪ್ರೌಢಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಡಿಪ್ಲೋಮಾ, ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕೋರ್ಸ್‍ಗಳಲ್ಲಿ ಓದುತ್ತಿರುವ 15 ರಿಂದ 18 ವರ್ಷ ವಯಸ್ಸಿನ ಅರ್ಹ ಫಲಾನುಭವಿಗಳ ಪಟ್ಟಿಯನ್ನು ಪಡೆಯಲಾಗಿದೆ.
ಲಸಿಕಾಕರಣಕ್ಕೆ ಮುನ್ನ ಮಕ್ಕಳ ಪೋಷಕರ ವಿಶೇಷ ಜಾಗೃತಿ ಸಭೆಗಳನ್ನು ಏರ್ಪಡಿಸಿ, ಲಸಿಕಾಕರಣದ ಮಾಹಿತಿಯನ್ನು ಈಗಾಗಲೇ ನೀಡಲಾಗಿದೆ.
ಆಫ್‍ಲೈನ್ ತರಗತಿಗಳನ್ನು ನಡೆಸುವ ಶಾಲೆಗಳಲ್ಲಿ ಲಸಿಕಾಕರಣಕ್ಕೆ ದಿನಾಂಕ ನಿಗದಿಪಡಿಸಿ ಮಕ್ಕಳನ್ನು ಶಾಲೆಗೆ ಕರೆಯಿಸಿ ಲಸಿಕಾಕರಣ ಮಾಡಲಾಗುವುದು. ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Related posts

ಕಾಂಗ್ರೆಸ್’ನವರು ಸುಳ್ಳು ಸುದ್ದಿ ಹರಡಿ ಸಮಾಜದಲ್ಲಿ ದ್ವೇಷ ಹುಟ್ಟಿಸುತ್ತಿದ್ದಾರೆ: ಸಿಎಂ ಬೊಮ್ಮಾಯಿ

eNEWS LAND Team

ಅಲ್ಪಸಂಖ್ಯಾತರ ಕಾಲೇಜಿನ ಡಾರ್ಮೆಟರಿ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ಚರಂತಿಮಠ ಚಾಲನೆ

eNEWS LAND Team

ರೈತರು ರಸ್ತೆ ಬಂದ್‌ಗೊಳಿಸಿ ಪ್ರತಿಭಟನೆ, ಬೆಳೆಹಾನಿ ಪರಿಹಾರಕ್ಕೆ ಆಗ್ರಹ!

eNEWS LAND Team