18 C
Hubli
ನವೆಂಬರ್ 30, 2022
eNews Land
ಸುದ್ದಿ

ಹಾನಿ ಪರಿಹಾರ ಹಣ ನೀಡಲು ಇನ್ಸೂರನ್ಸ್ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ಆದೇಶ

Listen to this article

ಇಎನ್ಎಲ್ ಹಾವೇರಿ

ವಾಹನದ ಹಾನಿ ಪರಿಹಾರ ಮೊತ್ತ ನೀಡಲು ಇನ್ಸೂರೆನ್ಸ್ ಕಂಪನಿಗೆ ಹಾವೇರಿ ಜಿಲ್ಲಾ ಗ್ರಾಹಕರ ಆಯೋಗ ಆದೇಶಿಸಿದೆ.
ಹಾವೇರಿ ನಗರದ ರಮೇಶ ಶಿವಪುತ್ರಪ್ಪ ಶಿವಣ್ಣನವರ ಅವರು ತಮ್ಮ Volkwagan Vento ಕಾರಗೆ ಯುನೈಟೆಡ್ ಇಂಡಿಯನ್ ಇನ್ಸೂರನ್ಸ್ ಕಂಪನಿ ಹಾವೇರಿ ಶಾಖೆಯಲ್ಲಿ Addon Covers ಪಾಲಸಿ ಮಾಡಿದ್ದರು.
ಪಾಲಸಿಯ ಕರಾರಿನ ಪ್ರಕಾರ ವಾಹನಕ್ಕೆ ಯಾವುದೇ ರೀತಿಯ ಡ್ಯಾಮೇಜ ಅಥವಾ ಯಾವುದೇ ಭಾಗಕ್ಕೆ ಹಾನಿಯಾದರೆ ಅದನ್ನು ಭರಿಸಿಕೊಡುವ ಕರಾರು ಹೊಂದಿದ್ದರು. ದಿನಾಂಕ 04-11-2020 ರಂದು ಹಾವೇರಿಯಿಂದ ಹನುಮಾಪುರಕ್ಕೆ ಹೋಗುವ ಸಂದರ್ಭದಲ್ಲಿ ಹನುಮಾಪುರ ಹತ್ತಿರ ರಸ್ತೆಯ ಹಂಪ್ಸ್‍ಗೆ ಮತ್ತು ತಗ್ಗು ಗುಂಡಿಗಳಿಗೆ ವಾಹನ ಅಪ್ಪಳಿಸಿದ್ದರಿಂದ ವಾಹನದ ಎಂಜಿನ್‍ಗೆ ಭಾರಿ ಪ್ರಮಾಣದ ಹಾನಿಯಾಗಿ ಹಾಗೂ ಬಿಡಿ ಭಾಗಗಳು ಜಖಂಗೊಂಡಿದ್ದರಿಂದ ಅವಶ್ಯಕ ದಾಖಲೆಗಳೊಂದಿಗೆ ಇನ್ಸೂರನ್ಸ್ ಕಂಪನಿಗೆ ಹಾನಿ ಪರಿಹಾರ ನೀಡಲು ಬಿಲ್‍ಗಳನ್ನು ಸಲ್ಲಿಸಿದ್ದರು. ಇನ್ಸೂರನ್ಸ್ ಕಂಪನಿಯು ಯಾವುದೇ ಹಣ ನೀಡದೆ ಹಾರಿಕೆ ಉತ್ತರ ನೀಡಿದ್ದರಿಂದ ರಮೇಶ ಶಿವಪುತ್ರಪ್ಪ ಶಿವಣ್ಣನವರ ಅವರು ಹಾನಿ ಪರಿಹಾರ ಹಣಕ್ಕಾಗಿ ದಿನಾಂಕ 24-01-2021 ರಂದು ಜಿಲ್ಲಾ ಗ್ರಾಹಕರ ಆಯೋಗದಲ್ಲಿ ದೂರು ದಾಖಲಿಸಿದ್ದರು.
ಪ್ರಕರಣದ ವಿಚಾರಣೆಯನ್ನು ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಅಧ್ಯಕ್ಷರಾದ ಸುನಂದಾ ಹಾಗೂ ಸದಸ್ಯರಾದ ಶ್ರೀಮತಿ ಮಹೇಶ್ವರಿ ಬಿ.ಎಸ್. ಅವರು ರಮೇಶ ಶಿವಪುತ್ರಪ್ಪ ಶಿವಣ್ಣನವರ ಅವರಿಗೆ ₹ 65,475/- ಪರಿಹಾರ ಹಣವನ್ನು 30 ದಿನದೊಳಗಾಗಿ ನೀಡಲು ದಿನಾಂಕ 30-11-2021 ರಂದು ಯುನೈಟೆಡ್ ಇಂಡಿಯನ್ ಇನ್ಸೂರನ್ಸ್ ಕಂಪನಿಗೆ ಆದೇಶಿಸಿದ್ದಾರೆ. ವಿಳಂಬಮಾಡಿದರೆ ವಾರ್ಷಿಕ ಶೇ.6ರ ಬಡ್ಡಿ ಸಮೇತ ಪಾವತಿಸಬೇಕು ಎಂದು ಆಯೋಗ ಸೂಚನೆ ನೀಡಿದೆ.

Related posts

ಅಣ್ಣಿಗೇರಿ ಪುರಸಭೆ 72% ಮತದಾನ: ಎಲ್ಲರ ಚಿತ್ತ ಫಲಿತಾಂಶದತ್ತ…!

eNEWS LAND Team

ರೈತರ ‘ಬಾಳು’ ಹಸನು ಮಾಡಿ: ಕೃಷಿ ವಿಜ್ಞಾನಿಗಳಿಗೆ ಸಚಿವ ಮುನೇನಕೊಪ್ಪ ಕರೆ

eNewsLand Team

ಕನ್ನಡ ನಾಡು ಉಳಿಸಿ ಬೆಳಸಿ ಕನ್ನಡ ಮನಸ್ಸುಗಳನ್ನು ಕಟ್ಟಿ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ

eNEWS LAND Team