24.3 C
Hubli
ಮೇ 26, 2024
eNews Land
ಸುದ್ದಿ

ರೈಲುಗಳ ಸೇವೆಯಲ್ಲಿ ಬದಲಾವಣೆ

ಇಎನ್ಎಲ್ ಹುಬ್ಬಳ್ಳಿ : 

ಬೆಂಗಳೂರು ವಿಭಾಗದ ಬಂಗಾರಪೇಟೆ – ಕುಪ್ಪಂ ಲೈನ್ ನ ಬಾಣಸವಾಡಿ – ಹೆಬ್ಬಾಳ – ಲೊಟ್ಟೆಗಲ್ಲಹಳ್ಳಿ ಭಾಗದಲ್ಲಿ ಇಂಜಿನಿಯರಿಂಗ್ ಕಾಮಗಾರಿಯ ಸಲುವಾಗಿ ಲೈನ್ ಬ್ಲಾಕ್ ಹಾಗೂ ಪವರ್ ಬ್ಲಾಕ್ ಇರುವ ನಿಮಿತ್ತ ರೈಲುಗಳ ಸೇವೆಯಲ್ಲಿ ಈ ಕೆಳಗಿನಂತೆ ಬದಲಾವಣೆಗಳನ್ನು ಮಾಡಲಾಗಿದೆ.

ರೈಲಿನ ನಿಯಂತ್ರಣ

1. ದಿನಾಂಕ 17.12.2021, 24.12.2021, 31.12.2021 ಹಾಗೂ 07.01.2022 ರ ರೈಲು ಸಂಖ್ಯೆ 22678 ಕೊಚ್ಚುವೇಲಿ – ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲನ್ನು ಮಾರ್ಗಮಧ್ಯದ ನಿಲ್ದಾಣಗಳಲ್ಲಿ 45 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

2. ದಿನಾಂಕ 17.12.2021, 24.12.2021, 31.12.2021 ಹಾಗೂ 07.01.2022 ರ ರೈಲು ಸಂಖ್ಯೆ 11022
ತಿರುನೆಲ್ವೇಲಿ – ದಾದರ್ ಎಕ್ಸ್ ಪ್ರೆಸ್ ರೈಲನ್ನು ಮಾರ್ಗಮಧ್ಯದ ನಿಲ್ದಾಣಗಳಲ್ಲಿ 60 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

3. ದಿನಾಂಕ 19.12.2021, 22.12.2021, 26.12.2021, 29.12.2021, 02.01.2022, 05.01.2022 ಹಾಗೂ 09.01.2022 ರ ರೈಲು ಸಂಖ್ಯೆ 11006 ಪುದುಚೆರಿ – ದಾದರ್ ಚಾಲುಕ್ಯ ಎಕ್ಸ್ ಪ್ರೆಸ್ ರೈಲನ್ನು ಬೈಯಪ್ಪನಹಳ್ಳಿ ನಿಲ್ದಾಣದಲ್ಲಿ 20 ನಿಮಿಷಗಳವರೆಗೆ ನಿಯಂತ್ರಿಸಲಾಗುವುದು.

ರೈಲಿನ ಮಾರ್ಗ ಬದಲಾವಣೆ

1. ದಿನಾಂಕ 21.12.2021, 28.12.2021 ಹಾಗೂ 04.01.2022 ರ ರೈಲು ಸಂಖ್ಯೆ. 12835 ಹಟಿಯಾ – ಯಶವಂತಪುರ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ರೈಲು ಕೃಷ್ಣರಾಜಪುರಂ, ಚನ್ನಸಂದ್ರ, ಯಲಹಂಕ ಹಾಗೂ ಯಶವಂತಪುರ ನಿಲ್ದಾಣಗಳ ಮಾರ್ಗವಾಗಿ ಬದಲಾದ ಮಾರ್ಗದಲ್ಲಿ ಸಂಚರಿಸುವುದು ಎಂದು ಹುಬ್ಬಳ್ಳಿ ನೈಋತ್ಯ ರೈಲ್ವೆ, ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ತಿಳಸಿದ್ದಾರೆ.

Related posts

ಅಂತಾರಾಜ್ಯ ಜಲವಿವಾದ: ಏಪ್ರಿಲ್’ನಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತೇನೆ: ಬೊಮ್ಮಾಯಿ

eNewsLand Team

ಹಣಬಲದಿಂದ ಚುನಾವಣೆ ಗೆಲ್ಲಲು ಕಾಂಗ್ರೆಸ್ ಹುನ್ನಾರ: ಮುಖ್ಯಮಂತ್ರಿ ಬೊಮ್ಮಾಯಿ

eNewsLand Team

ಟಾರ್ಗೇಟ್ ಹುಬ್ಬಳ್ಳಿ ಬಿಡ್ನಾಳ: ಮನೆ ಸರಣಿಗಳವು!!

eNewsLand Team