eNews Land
ಸುದ್ದಿ

ಅಣ್ಣಿಗೇರಿ ಹಾಗೂ ನವಲಗುಂದ ಅಭಿವೃದ್ಧಿಗೆ ಕೋಟಿ ಗಟ್ಟಲೆ ಹರಿದು ಬಂದ ಅನುದಾನ

Listen to this article

ಇಎನ್ಎಲ್ ಅಣ್ಣಿಗೇರಿ: ಅಣ್ಣಿಗೇರಿ-ನವಲಗುಂದ ಪುರಸಭೆಗೆ ನಗರೋತ್ಥಾನ ಯೋಜನೆ, ಹಾಗೂ ಎಸ್.ಎಫ್.ಸಿ.ಯೋಜನೆಯಡಿ ಹತ್ತತ್ತು, ಕೋಟಿ ರೂಗಳನ್ನು ಪ್ರತಿ ಪುರಸಭೆಗೆ ಮಂಜೂರಾತಿ ನೀಡಿ ಆದೇಶವನ್ನು ಹೊರಡಿಸಿದೆ. 75ನೇ ಅಮೃತಮಹೋತ್ಸವ ನಿಮಿತ್ಯ ನವಲಗುಂದ,ಅಣ್ಣಿಗೇರಿ ಪುರಸಭೆಗೆ ವಿಶೇಷ ಯೋಜನೆಯಡಿ ಪ್ರತ್ಯೇಕ ಒಂದೊoದು  ಕೋಟಿ ರೂಗಳು ಬಿಡುಗಡೆಗೊಳಿಸಿದ್ದು ಒಟ್ಟು 22 ಕೋಟಿ ರೂಗಳನ್ನು ನಮ್ಮ ನವಲಗುಂದ ವಿಧಾನಸಭಾ ಕ್ಷೇತ್ರ ಅಭಿವೃದ್ಧಿಗೆ ಒದಗಿಸಲಾಗಿದೆ ಎಂದು ಜಿಲ್ಲಾ ಉಸ್ತವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಹೇಳಿದರು. ಪಟ್ಟಣದ ಪರೀವಿಕ್ಷಣಾ ಮಂದಿರದಲ್ಲಿ ಆಯೋಜಿಸಿದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನಂತರ ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸಂಯೋಜಕತ್ವದಲ್ಲಿ 3885 ಕೋಟಿ ರೂಗಳನ್ನು ನಗರೋತ್ಥಾನ ಅಭಿವೃದ್ಧಿಗೆ ಬಿಡುಗಡೆ ಮಾಡಿದೆ.  ಧಾರವಾಡ ಜಿಲ್ಲೆಯ ವ್ಯಾಪ್ತಿಯ ತಾಲೂಕುಗಳಲ್ಲಿ  ಪುರಸಭೆ ನಗರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪoಚಾಯತಿಗಳಿಗೆ ಅನುದಾನ ಮಂಜೂರ ಮಾಡಿ, ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಲು ಆದೇಶಿಸಿದೆ.
ರೈತರ ಬಹುದಿನದ ಬೇಡಿಕೆ ಅನುಗುಣವಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರಾಮಾಣಿಕ ಪ್ರಯತ್ನದ ಸಹಕಾರದಿಂದ ಕೇಂದ್ರ ಸರ್ಕಾರದ  ಗ್ರಾಮ ಸಡಕ ಯೋಜನೆಯಲ್ಲಿ ಹೊಲಗದ್ದೆಗಳಿಗೆ 50 ಕೋಟಿ ರೂಗಳನ್ನು ಬಿಡುಗಡೆ ಮಾಡಿ ಕಾಮಗಾರಿಗೆ ಚಾಲನೆ ನೀಡಿದೆ. ಗ್ರಾಮೀಣ ಅಭಿವೃದ್ದಿ ರಸ್ತೆಗಳಿಗೆ 10 ಕೋಟಿ ರೂಗಳನ್ನು ಬಿಡುಗಡೆ ಮಾಡಿ ಟೆಂಡರ್ ಪ್ರಕ್ರೀಯೆ ಮುಗಿಸಿ ಕಾಮಗಾರಿಗೆ ಚಾಲನೆ ನೀಡಿದೆ.
ಪಟ್ಟಣದ ಶಾಶ್ವತ ಕುಡಿಯುವ ನೀರಿನ ಯೋಜನೆಗೆ ಅನುಷ್ಠಾನಗೊಳಿಸಿ, 24 ಗಂಟೆ ಕುಡಿಯುವ ನೀರು ಪೊರೈಸುವುದಕ್ಕೆ 54 ಕೋಟಿ ರೂಗಳು ಅನುದಾನ ನೀಡಿ ಟೆಂಡರ ಪ್ರಕ್ರಿಯೆ ಮುಗಿಸಿ, ಕಾಮಗಾರಿಗೆ ಚಾಲನೆ ನೀಡಿದೆ. ನೀರಾವರಿ ಇಲಾಖೆಯ ಅಭಿವೃದ್ಧಿಗೆ 20 ಕೋಟಿ ರೂಗಳನ್ನು ನೀಡಿದೆ. ಅಣ್ಣಿಗೇರಿಯಲ್ಲಿ  ಸ್ಪೋರ್ಟ್ಸ ಕಾಂಪ್ಲೆಕ್ಸ್ ನಿರ್ಮಾಣಕ್ಕೆ 5 ಕೋಟಿ ರೂಗಳು ಬಿಡುಗಡೆ ಮಾಡಿದೆ ಅಂದರು.
ಈ ಸಂದರ್ಭದಲ್ಲಿ ಮಾಜಿ ಕ್ರೇಡಿಲ್ ಅಧ್ಯಕ್ಷ ಷಣ್ಮುಖ ಗುರಿಕಾರ , ಶಿವಾನಂದ ಹೊಸಳ್ಳಿ, ಶಿವಯೋಗಿ ಸುರಕೋಡ, ಶಿವಾನಂದ ಹಾಳದೋಟರ, ಬಸವರಾಜ ಯಳವತ್ತಿ, ರಾಘವೇಂದ್ರ ರಾಮಗಿರಿ ಹಾಗೂ ಉಪಸ್ಥಿತರಿದ್ದರು.

Related posts

ಚನ್ನಪಟ್ಟಣದ ಜೀಪು ಖರೀದಿಸಿದ ಸಿಎಂ ಬೊಮ್ಮಾಯಿ

eNewsLand Team

ಸೂಫಿ ಸಂತರು ಶಿರಸಂಗಿ ಲಿಂಗರಾಜರ ಅಭಿನವ ಸಂಬಂಧಕ್ಕೆ ಸಾಕ್ಷಿಯಾಗಿದೆ:ಬಸವಲಿಂಗ ಶ್ರೀಗಳು.

eNEWS LAND Team

ಅಂಬಿರ ಚೌಡಯ್ಯ ಪೀಠಕ್ಕೆ ರೂ.80ಸಾವಿರ ಸಾಮಾಗ್ರಿಗಳ ಕೊಡುಗೆ

eNEWS LAND Team