34 C
Hubli
ಫೆಬ್ರವರಿ 28, 2024
eNews Land
ಸುದ್ದಿ

ಅಣ್ಣಿಗೇರಿ ಪುರಸಭೆ 72% ಮತದಾನ: ಎಲ್ಲರ ಚಿತ್ತ ಫಲಿತಾಂಶದತ್ತ…!

ಇಎನ್ಎಲ್ ಅಣ್ಣಿಗೇರಿ

ವಚನ ಹೂಗಾರ

ಅಣ್ಣಿಗೇರಿ ಪುರಸಭೆ ಚುನಾವಣೆ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, ಒಟ್ಟಾರೆ 72 ಶೇ. ಮತದಾನ ಆಗಿದೆ.

ಚುನಾವಣೆ ಕಣಕ್ಕಿಳಿದಿದ್ದ ಅಭ್ಯರ್ಥಿಗಳ ಹಣೆಬರಹ ಮತ ಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ಸೋಲು ಗೆಲವಿನ ಕುರಿತು ಚರ್ಚೆ ನಡೆಯುತ್ತಿದೆ. ಎಂಟು ವರ್ಷಗಳ ನಂತರ ನಡೆದ ಪುರಸಭೆ ಚುನಾವಣೆಯಲ್ಲಿ ಯಾರಿಗೆ ಮತದಾರರು ವಿಜಯಮಾಲೆ ತೊಡಿಸಲಿದ್ದಾರೆ ಎಂಬುದು ಡಿ.30ರಂದು ತಿಳಿಯಲಿದೆ. ಮತದಾನದ ಬಳಿಕ ಎಲ್ಲಾ ಪೆಟ್ಟಿಗೆಗಳನ್ನು ಇಲ್ಲಿನ ಶ್ರೀ ಅಮೃತೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ ಪೊಲೀಸ್ ಬಿಗಿ ಭದ್ರತೆಯಲ್ಲಿ ಇಡಲಾಗಿದೆ.

ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಜಿದ್ದಾಜಿದ್ದಿನ ಫೈಟ್ ನಲ್ಲಿ ಯಾರು ಪುರಸಭೆ ಗಾದಿ ಏರಲಿದ್ದಾರೆ ಎಂಬ ಕುತೂಹಲ ಜನತೆಯಲ್ಲಿ ಮನೆಮಾಡಿದ್ದು, ಲೆಕ್ಕಾಚಾರ ಜೋರಾಗಿ ನಡೆದಿದೆ.

ಪುರಸಭೆ ಚುನಾವಣೆ 23 ವಾರ್ಡುಗಳಲ್ಲಿ ಪುರುಷರು-10677, ಮಹಿಳೆಯರು-10882 ಇತರೆ-2 ಸೇರಿದಂತೆ ಒಟ್ಟು-21561 ಮತದಾರರಿದ್ದಾರೆ. ಅದರಲ್ಲಿ ಪುರುಷರು- 7896 ಮಹಿಳೆಯರು-7531 ಸೇರಿ ಒಟ್ಟು-15427 ಮತದಾರರು ಹಕ್ಕು ಚಲಾಯಿಸಿದ್ದು, ಶೇ. 72 ಮತದಾನವಾಗಿದೆ.

ಬೆಳಗ್ಗೆಯಿಂದ ಮತದಾರರು ಉತ್ಸಾಹದಿಂದ ಮತದಾನದಲ್ಲಿ ತೊಡಗಿದ್ದರು. ಅಧಿಕಾರಿಗಳು ಕೋವಿಡ್ ನಿಯಮಾವಳಿ ಪಾಲಿಸಿ ಮತದಾರರು ಮತದಾನವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.

Related posts

ಹುಬ್ಬಳ್ಳಿಲಿ ಡಿ.ಕೆ.ಶಿ, ಸಿದ್ದರಾಮಯ್ಯ ಸುಟ್ಟಿದ್ದು ಯಾಕೆ ಗೊತ್ತಾ?

eNEWS LAND Team

ಶಿಕ್ಷಕರ ಮತಕ್ಷೇತ್ರ : ಮತದಾರರ ಹೆಸರು ಸೇರಿಸಲು ಅವಕಾಶ

eNewsLand Team

ಹುಬ್ಬಳ್ಳಿ: ಖತರ್ನಾಕ ಕಿಲ್ಲರ್: ಭಿಕ್ಷುಕರೇ ಟಾರ್ಗೆಟ್!!

eNEWS LAND Team