ಇಎನ್ಎಲ್ ಧಾರವಾಡ: ಈಗಾಗಲೇ ರಾಜ್ಯಾದ್ಯಂತ ಶಿಕ್ಷಕರ ವರ್ಗಾವಣೆ ಕೌನ್ಸೆಲಿಂಗ್ ಮೂಲಕ ನಡೆಯುತ್ತಿದ್ದು, ಅಪ್ರಸ್ತುತ ನೀತಿಗಳಿಂದ ಹಲವಾರು ಶಿಕ್ಷಕ ಶಿಕ್ಷಕಿಯರು ವರ್ಗಾವಣೆಯಿಂದ ವಂಚಿತರಾಗಿ ಪರಿತಪಿಸುವಂತಾಗಿದೆ ಎಂದು ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಡಾ. ಲತಾ. ಎಸ್.ಮುಳ್ಳೂರ ಅಸಮಾಧಾನ ವ್ಯಕ್ತಪಡಿಸಿದ್ದದಾರೆ.
ತಮ್ಮ ಒಟ್ಟು ಸೇವಾವಧಿಯಲ್ಲಿ ಈಗಾಗಲೇ ಎರಡು ಮೂರು ಬಾರಿ ವರ್ಗಾವಣೆ ಹೊಂದಿ ಅನುಕೂಲ ಪಡೆದು ಕೊಂಡಿದ್ದವರೇ ಪ್ರಸಕ್ತ ಸಾಲಿನ ವರ್ಗಾವಣೆಯ ಜೇಷ್ಟತೆ ಪಟ್ಟಿಯಲ್ಲಿ ಮೊದಲಿಗರಾಗಿ ,ಕೌನ್ಸೆಲಿಂಗ್ ಸಾಲಿನಲ್ಲಿಯೂ ಅವರೇ ಮೊದಲಿಗರಾಗುತ್ತಿದ್ದಾರೆ,
ಇದೇ ರೀತಿ ಪ್ರತೀ ಮೂರು ಮೂರು ವರ್ಷಗಳಿಗೊಮ್ಮೆ ವರ್ಗಾವಣೆಯನ್ನು ಅವರೇ ಪಡೆದುಕೊಳ್ಳುತ್ತಾ ಶಾಲೆ ಬದಲಾಯಿಸುತ್ತಿದ್ದಾರೆ.
ಆದರೆ ಇಡೀ ತಮ್ಮ ಒಟ್ಟು ಸೇವಾವಧಿಯಲ್ಲಿ ಕೇವಲ ಒಂದು ಬಾರಿಯೂ ಸಹಾ ವರ್ಗಾವಣೆ ಆಗದೇ ಹತ್ತು ಹದಿನೈದು ವರ್ಷಗಳು ಒಂದೇ ಶಾಲೆಯಲ್ಲಿ ಕರ್ತವ್ಯ ಮಾಡುತ್ತಿರುವ ಶಿಕ್ಷಕ ಶಿಕ್ಷಕಿಯರು ಜೇಷ್ಠ ಪಟ್ಟಿಯಲ್ಲಿ ಮೊದಲಿಗರಾಗಲು ನಿಯಮಗಳಲ್ಲಿ ಅವಕಾಶ ಇಲ್ಲ.ಕೌನ್ಸೆಲಿಂಗ್ ಸಮಯದಲ್ಲಿ ಅಂತಿಮ ಸರದಿಗಳಲ್ಲಿ ನಿಲ್ಲುತ್ತಾರೆ.ಹೀಗಾಗಿ ಪ್ರತಿ ವರ್ಗಾವಣಾ ಪ್ರಕ್ರಿಯೆಯಲ್ಲೂ ವರ್ಗವಣಾ ಮಿತಿ ದಾಟುವ ಕಾರಣಕ್ಕೆ ಕೌನ್ಸೆಲಿಂಗ್ ಸ್ಥಗಿತಗೊಂಡು ವರ್ಗಾವಣೆ ಭಾಗ್ಯ ಸಿಗದೇ ಅವಕಾಶ ಕಳೆದುಕೊಳ್ಳುತಿದ್ದಾರೆ.ಪ್ರತೀ ವರ್ಗಾವಣಾ ಪ್ರಕ್ರಿಯೆಯಲ್ಲೂ ಹಲವಾರು ಶಿಕ್ಷಕರು ಇದೇ ಸಮಸ್ಯೆ ಎದುರಿಸುತ್ತಾ ಇದ್ದಾರೆ.
ಹಾಗಾದರೆ ವರ್ಗಾವಣೆ ನೀತಿಯಲ್ಲಿ ಎಲ್ಲಿದೆ ನ್ಯಾಯ? ಯಾರಿಗೂ ಇದು ಅರ್ಥವಾಗುತಿಲ್ಲವೇ.?
ಎಲ್ಲಾ ಸಮಸ್ಯೆಗಳಿಗೂ
ಒಂದು ಸೂಕ್ತ ಪರಿಹಾರ ಇದ್ದೆ ಇದೆ ಅದನ್ನು ಹುಡುಕುವ ಹಾಗೂ ಅಳವಡಿಸುವ ಕೆಲಸ ಆಗಬೇಕಾಗಿದೆ.
ಸರ್ವರೋಗಕ್ಕೂ ಒಂದೇ ಔಷಧಿ ಎಂಬಂತೆ…
1) ಜೇಷ್ಠತಾ ಪಟ್ಟಿ ಸಿದ್ಧಪಡಿಸುವಾಗ ಇಡೀ ಒಟ್ಟು ಸೇವಾವಧಿಯ ವರ್ಷಗಳನ್ನು ಲೆಕ್ಕಿಸದೇ ಪ್ರಸ್ತುತ ಶಾಲೆಯ ಸೇವಾವಧಿ ಮಾತ್ರ ಪರಿಗಣಿಸಬೇಕು, ಈ ನಿಯಮ ಮೊದಲಾಗಬೇಕಿದೆ.ಇದು ವರ್ಗವಣೆ ಉದ್ದೇಶಕ್ಕಾಗಿ ಮಾತ್ರ ಅಳವಡಿಸಬೇಕು.
2) ಪ್ರತೀ ವಿಶೇಷ ಪ್ರಕರಣಗಳಿಗೂ ಪ್ರಸ್ತುತ ಶಾಲೆಯ ಸೇವಾವದಿಯನ್ನೇ ಅನ್ವಯಿಸಿ ಕೌನ್ಸೆಲಿಂಗ್ ನಡೆಸಬೇಕು.
೩) ತಾಲ್ಲೂಕಿನ ಒಳಗಿನ 25% ಮಿತಿಯನ್ನು ರದ್ದುಮಾಡಬೇಕು.ಇದರಿಂದ ಇಲಾಖೆಗೆ ಯಾವುದೇ ನಷ್ಟ ಆಗಬಾರದು.
೪) ಆಯ್ಕೆ ವಿಷಯ, ಸೇವಾವಧಿ, ಸೂಕ್ತ ಎಂದಾದಾಗ ಮ್ಯೂಚುಯಲ್ ವರ್ಗಾವಣೆ ಗೆ ಯಾವುದೇ ಮಿತಿ ಇರಬಾರದು,ಮ್ಯೂಚುಯಲ್ ವರ್ಗಾವಣೆ ಕೇವಲ ಸೇವಾವಧಿಯಲ್ಲಿ ಒಂದು ಅಥವಾ ಎರಡು ಬಾರಿಗೆ ಮಾತ್ರ ಅವಕಾಶ ಇರಬೇಕು.
೫)ಕಲ್ಯಾಣ ಕರ್ನಾಟಕ ಸೇವೆ ಪೂರೈಸಿದವರಿಗೆ ಇತರೆ ಜಿಲ್ಲೆಗಳಿಗೆ ತೆರಳಲು ಮುಕ್ತ ಅವಕಾಶ ನೀಡುವುದು.
೬) ಹೊಸ ನೇಮಕಾತಿ ಪ್ರಾರಂಭಿಸುವ ಮುನ್ನ ಒಂದು ಬಾರಿ ತಮ್ಮ ಸ್ವಂತ ಜಿಲ್ಲೆಗಳಿಗೆ ವಿಶೇಷ ವರ್ಗಾವಣೆಗೆ ಅವಕಾಶ ಕಲ್ಪಿಸಬೇಕು.
ಪ್ರಮುಖವಾಗಿ ಈ ಆರು ನಿಯಮಗಳನ್ನು ಅಳವಡಿಸಿದಾಗ ಮಾತ್ರ ಶಿಕ್ಷಕರ ಸ್ನೇಹಿ ವರ್ಗಾವಣೆ ಆಗಬಹುದು..
ಇದನ್ನು ನಮ್ಮ ಕರ್ನಾಟಕ ರಾಜ್ಯ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘವು ಪ್ರತೀ ಶಾಸಕರು, ಸಂಸದರುಗಳಿಗೆ ಮನವಿ ಸಲ್ಲಿಸುವ ಮೂಲಕ ತುರ್ತಾಗಿ ಪತ್ರ ಚಳುವಳಿ ಹಮ್ಮಿಕೊಂಡು ಸರ್ಕಾರದ ಗಮನ ಸೆಳೆದು ಅಧಿವೇಶನದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳಲು ಒತ್ತಾಯ ಮಾಡಲಾಗುವುದು.