30 C
Hubli
ಮಾರ್ಚ್ 21, 2023
eNews Land
ಸುದ್ದಿ

ಶಿಕ್ಷಕರ ಹಾಗೂ ಶಿಕ್ಷಕೇತರ ಸಮಸ್ಯೆಗಳನ್ನು ಬಗೆಹರಿಸದಿದ್ದಲ್ಲಿ ಉಗ್ರ ಹೋರಾಟ

Listen to this article

ಇಎನ್ಎಲ್ ಧಾರವಾಡ: ಜಿಲ್ಲಾ ಘಟಕದ ವತಿಯಿಂದ ಫೆ.11 ರಂದು ಶಿಕ್ಷಕರ ಹಾಗೂ ಶಿಕ್ಷಕೇತರ ಜಲ್ವಂತ ಸಮಸ್ಯೆಗಳನ್ನು ಬೇಗನೆ ಬಗೆಹರಿಸಬೇಕೆಂದು ಮುಖ್ಯಮಂತ್ರಿಗಳಿಗೆ ಧಾರವಾಡ ಜಿಲ್ಲಾಧಿಕಾರಿಗಳ ಮುಖಾಂತರ ಮನವಿ ಸಲ್ಲಿಸಿದರು. ಶಿಕ್ಷಕರ ನ್ಯಾಯ ಸಮ್ಮತವಾದ ಬೇಡಿಕೆಗಳನ್ನು ಬೇಗನೆ ಈಡೇರಿಸದಿದ್ದಲ್ಲಿ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ರಾಜ್ಯ ಘಟಕದ ಸಂಘಟನಾ ಕಾರ್ಯದರ್ಶಿಗ ಶ್ಯಾಮ ಮಲ್ಲನಗೌಡ್ರ, ಜಿಲ್ಲಾ ಘಟಕದ ಅಧ್ಯಕ್ಷ ವಿ.ಎಸ್.ಹುದ್ದಾರ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಎನ್.ಎನ್.ಸವಣೂರ, ಶಹರ ಘಟಕದ ಅಧ್ಯಕ್ಷ ಐ.ಎಂ.ಮುಲ್ಲಾ, ಕಾರ್ಯದರ್ಶಿ ಎಮ್.ಜಿ.ಕೊಡ್ಲಿ, ಸಂಘಟನಾ ಕಾರ್ಯದರ್ಶಿ ಐ. ಬಿ.ಮರ್ಜೆಡಿ ಹೂಗಾರ, ಪಾಟೀಲ ಗೌಡ್ರು, ವೆಂಕಣ್ಣ ಕೋರಡ್ಡಿ, ಪೀರಣ್ಣವರ, ಅಗಸಿಮನಿ, ಜಂಬಳ್ಳಿ, ಹೆಬಸೂರ, ರಮೇಶ ಮಾದರ,ಕುಲಕರ್ಣಿ ಸೇರಿದಂತೆ ಮುಂತಾದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Related posts

ಫೆ.4 ರಂದು ಹು-ಧಾ ಪಾಲಿಕೆ ಆಯವ್ಯಯ ಕುರಿತು ಸಾರ್ವಜನಿಕ ಸಭೆ

eNewsLand Team

ಖಾಸಗಿ, ಸರ್ಕಾರಿ,ಅರೆ ಸರ್ಕಾರಿ ಉದ್ಯೋಗ ಕನ್ನಡಿಗರಿಗೇ : ಸಿಎಂ ಬೊಮ್ಮಾಯಿ

eNEWS LAND Team

ಅಂತಾರಾಜ್ಯ ಜಲವಿವಾದ: ಏಪ್ರಿಲ್’ನಲ್ಲಿ ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿ ಮಾಡುತ್ತೇನೆ: ಬೊಮ್ಮಾಯಿ

eNewsLand Team