34 C
Hubli
ಮಾರ್ಚ್ 23, 2023
eNews Land
ಸುದ್ದಿ

ಹುಮನಬಾದ್ ತಹಶೀಲ್ದಾರ ಮೇಲಿನ ಹಲ್ಲೆಗೆ ಹುಬ್ಬಳ್ಳಿಯಲ್ಲಿ ಖಂಡನೆ

Listen to this article

ನೌಕರರ ರಕ್ಷಣೆಗೆ ವಿಶೇಷ ಕಾಯ್ದೆ ರಚನೆಗೆ ಮನವಿ

ಇಎನ್ಎಲ್ ಹುಬ್ಬಳ್ಳಿ: ಹುಮನಾಬಾದ್ ತಹಶೀಲ್ದಾರ್ ಡಾ.ಪ್ರದೀಪ್ ಕುಮಾರ್ ಹಿರೇಮಠ ಅವರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ರಾಜ್ಯ ನೌಕರರ ಸಂಘ ಹಾಗೂ ಧಾರವಾಡ ಗ್ರಾಮಲೆಕ್ಕಾಧಿಕಾರಿಗಳ ಸಂಘದ ಜಿಲ್ಲಾ ಘಟಕದಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಹುಬ್ಬಳ್ಳಿ ಮಿನಿವಿಧಾನ ಸೌಧದಲ್ಲಿಂದು ಸಂಘದ ಪದಾಧಿಕಾರಿಗಳು ಘಟನೆ ಖಂಡಿಸಿ, ಹಲ್ಲೆ ಮಾಡಿದವರ ವಿರುದ್ದ ಘೋಷಣೆ ಕೂಗಿ ಮನವಿಯನ್ನು ತಹಶೀಲ್ದಾರರ ಮೂಲಕ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಿದರು.

ಕೋವಿಡ್ -19 ಸಂದರ್ಭದಲ್ಲಿ ಸರ್ಕಾರಿ ನೌಕರರು ಪ್ರಾಣದ ಹಂಗು‌ ತೊರೆದು ಕೆಲಸ ನಿರ್ವಹಿಸುತ್ತಿದ್ದಾರೆ. ಹಲ್ಲೆ ಮಾಡಿದವರನ್ನು ಬಂಧಿಸಬೇಕು. ಅವರಿಗೆ ಕಠಿಣ ಶಿಕ್ಷೆಯಾಗಬೇಕು. ನೌಕರರಿಗೆ ಭದ್ರತೆಯನ್ನು ಒದಗಿಸಬೇಕು. ಈ ಹಿಂದೆ ಕೋಲಾರ ಜಿಲ್ಲೆಯಲ್ಲಿ ಅಕ್ರಮವಾಗಿ ಸರ್ಕಾರಿ ಜಮೀನಿನ ಒತ್ತುವರಿ ಮಾಡಿದವರನ್ನು ತೆರವು ಮಾಡಿದ, ಬಂಗಾರಪೇಟೆ ತಹಶೀಲ್ದಾರರ ಹತ್ಯೆ ಮಾಡಲಾಗಿತ್ತು. ರಾಯಚೂರು ಜಿಲ್ಲೆಯ ಮಾನ್ವಿಯಲ್ಲಿ ಗ್ರಾಮಲೆಕ್ಕಾಧಿಕಾರಿಯನ್ನು ಅಕ್ರಮ ಮರಳು ದಂದೆಕೋರರು‌ ಹತ್ಯೆ ಮಾಡಿದ್ದರು. ಬಳ್ಳಾರಿ ಜಿಲ್ಲೆಯಲ್ಲಿ ಗ್ರಾಮ ಲೆಕ್ಕಾಧಿಕಾರಿ ಮನೆಗೆ ನುಗ್ಗಿ ಮಾರಕಾಶಸ್ತ್ರಗಳಿಂದ ಹಲ್ಲೆ ಮಾಡಲಾಗಿತ್ತು. ಈಗ ಹುಮನಬಾದ್ ತಹಶೀಲ್ದಾರರ ಮೇಲೆ ಹಲ್ಲೆ ಮಾಡಲಾಗಿದೆ. ಸರ್ಕಾರಿ ಜಮೀನು ಒತ್ತುವರಿ ತೆರವು, ಅಕ್ರಮ ಮರಳು ಹಾಗೂ ಗ್ರಾವಲ್ ಸಾಗಾಣಿಕೆ ತಡೆಗಟ್ಟುವುದು, ಅನಧಿಕೃತ ಬಡವಾಣೆಗಳ ತೆರವು ಹೀಗೆ ನಾನಾ ಕೆಲಸಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ನೌಕರರು ನೆರವೇರಿಸುತ್ತಾರೆ. ಕಂದಾಯ ಇಲಾಖೆ ಸೇರಿದಂತೆ ಸರ್ಕಾರಿ ನೌಕರರ ರಕ್ಷಣೆಗಾಗಿ ವಿಶೇಷ ಕಾಯ್ದೆ ಹಾಗೂ ಕಠಿಣ ಕಾನೂನು ರೂಪಿಸುವಂತೆ ನೌಕರರು ಮನವಿ ಮಾಡಿದರು.

ಹುಬ್ಬಳ್ಳಿ ನಗರ ತಹಶೀಲ್ದಾರರ ಶಶಿಧರ ಮಾಡ್ಯಾಳ ಹಾಗೂ ಗ್ರಾಮೀಣ ತಹಶೀಲ್ದಾರ್ ಪ್ರಕಾಶ್ ನಾಶಿ ಮನವಿ ಸ್ವೀಕರಿಸಿದರು.

ಇದೇ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದಿಂದ ಮಿನಿ ವಿಧಾನ ಸೌಧದಲ್ಲಿ ಸಂಘದ ಕಾರ್ಯ ಚಟುವಟಿಕೆಗಳಿಗೆ ಅನುಕೂಲವಾಗುವಂತೆ ಕಚೇರಿ ನಿರ್ಮಾಣಕ್ಕೆ ಜಾಗ ಒದಗಿಸುವಂತೆ ಮನವಿ ಸಲ್ಲಿಸಲಾಯಿತು. ರಾಜ್ಯ ಸರ್ಕಾರಿ ನೌಕಕರ ಸಂಘದ ತಾಲೂಕ‌ ಘಟಕದ ಅಧ್ಯಕ್ಷರಾದ ಡಾ. ಪ್ರಹ್ಲಾದ ಕ. ಗೆಜ್ಜಿ, ವಿ.ಎಫ್.ಚುಳಕಿ ಸದಸ್ಯರಾದ ಮಂಜುನಾಥ್ ಜಂಗಳಿ, ನಾರಾಯಣ ಬದ್ದಿ, ರಾಮಚಂದ್ರ ಬಿರಾದಾರ ನಾಗರಾಜ ಕಡಕೋಳ, ಗ್ರಾಮಲೆಕ್ಕಾಧಿಕಾರಿ ಸಂಘದ ಮಂಜುನಾಥ ಪಮ್ಮಾರ್, ಪಿ.ಎನ್.ಶಿವಳ್ಳಿ ಮಠ, ವಿಜಯ ಕುಮಾರ್ ಕಡಕೋಳ, ಸಂಜೀವ ನಾಯಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Related posts

ಐಪಿಎಲ್; ಚೆನ್ನೈ ಮಣಿಸಿ ಸೇಡು ತೀರಿಸಿಕೊಂಡ ಕೊಲ್ಕತ್ತಾ

eNewsLand Team

ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ: ಮುಖ್ಯಮಂತ್ರಿ ಬೊಮ್ಮಾಯಿ

eNewsLand Team

ಕೆ ಎಸ್ ಎಲ್ ಯು: ಕುಲಪತಿ ಈಶ್ವರ ಭಟ್ಟಗೆ ಶಾಯಿ ಬಳಿದು ವಿದ್ಯಾರ್ಥಿಗಳ ಆಕ್ರೋಶ

eNewsLand Team