27 C
Hubli
ಮಾರ್ಚ್ 28, 2023
eNews Land
ಸುದ್ದಿ

ನೈಋತ್ಯ ರೈಲ್ವೆಯಲ್ಲಿ ಭಾರತ್ ಗೌರವ್ ರೈಲುಗಳ ಸೇವಾ ಸೌಲಭ್ಯ

Listen to this article

ಇಎನ್ಎಲ್ ಡೆಸ್ಕ್ :

ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆ ಹಾಗೂ ಭವ್ಯವಾದ ಐತಿಹಾಸಿಕ ಸ್ಥಳಗಳನ್ನು ಭಾರತೀಯರೆಲ್ಲರಿಗೆ ಹಾಗೂ ವಿಶ್ವದ ಜನತೆಗೆ ನಿದರ್ಶಿಸಲು ಘೋಷಿಸಿರುವ ಭಾರತೀಯ ರೈಲ್ವೆಯ ನೂತನ ಉಪಕ್ರಮವಾದ ವಿಷಯವಸ್ತುವಾಧಾರಿತ ಭಾರತ್ ಗೌರವ್ ರೈಲುಗಳು ಎಂಬ ಪ್ರವಾಸಿ ಸರ್ಕ್ಯೂಟ್ ರೈಲುಗಳ ಸೇವಾ ಸೌಲಭ್ಯದ ಭಾಗಿಯಾಗುವಲ್ಲಿ ನೈಋತ್ಯ ರೈಲ್ವೆ ಹರ್ಷಿಸುತ್ತದೆ.

ಭಾರತದ ವ್ಯಾಪಕವಾದ ಪ್ರವಾಸಿ ತಾಣಗಳ ಲಭ್ಯತೆಯನ್ನು ಬಳಸಿಕೊಂಡು ವಿಷಯ ವಸ್ತು ಆಧಾರಿತ ರೈಲುಗಳನ್ನು ಸಂಚರಿಸುವಲ್ಲಿ ವೃತ್ತಿಪರ ಪ್ರವಾಸೋದ್ಯಮ ಕ್ಷೇತ್ರದ ಮುಖ್ಯ ಸಾಮರ್ಥ್ಯವನ್ನು ಬಳಸಿಕೊಳ್ಳುವ ಗುರಿಯನ್ನು ಭಾರತಿಯ ರೈಲ್ವೆ ಹೊಂದಿದೆ. ಈ ಭಾರತ್ ಗೌರವ್ ರೈಲುಗಳನ್ನು ಸಂಚರಿಸಲು ನೋಂದಾಯಿತ ಸೇವಾ ಪೂರೈಕೆದಾರರಿಗೆ ‘ಬಳಸುವ ಹಕ್ಕಿದೆ’ ‘(ರೈಟ್ ಟು ಯೂಸ್’) ಮಾದರಿಯಡಿಯಲ್ಲಿ ಭಾರತಿಯ ರೈಲ್ವೆ ರೇಕುಗಳನ್ನು ನೀಡುವುದು. ಬೋಗಿಗಳನ್ನು ಎನ್ ಆರ್ ಸಿ ಅಂದರೆ ರೈಲ್ವೆಯೇತರ ಗ್ರಾಹಕ (ನಾನ್ ರೈಲ್ ಕಸ್ಟಮರ್) ಯೋಜನೆಯಡಿಯಲ್ಲಿಯೂ ಸಹ ಉತ್ಪಾದನಾ ಘಟಕಗಳಿಂದ ನೇರವಾಗಿ ಪಡೆದುಕೊಳ್ಳಲು ಅವಕಾಶವಿದೆ.

ಸರ್ಕ್ಯೂಟ್ ಯಾತ್ರೆಯ ವಿಷಯ ವಸ್ತು, ಮಾರ್ಗಗಳು, ಪ್ರಯಾಣದ ವಿವರ, ದರ ಹಾಗೂ ಇನ್ನಿತರ ವೈಶಿಷ್ಟತೆಗಳನ್ನು ಐಚ್ಚಿಕವಾಗಿ ನಿರ್ಧರಿಸಬಹುದಾದ ಅವಕಾಶ ಈ ವ್ಯವಹಾರ ಮಾದರಿಯಲ್ಲಿದೆ.ಯಾವುದೇ ವ್ಯಕ್ತಿ, ಕಂಪನಿ, ಪ್ರತಿಷ್ಠಾನ, ಸಂಘ, ಸಂಸ್ಥೆ, ಪಾಲು ದಾರಿಕೆ ಸಂಸ್ಥೆ, ಜಂಟಿ ಉದ್ಯಮಗಳು ಹಾಗೂ ಒಕ್ಕೂಟಗಳು ಈ ಹೊಸ ವ್ಯವಹಾರ ಅವಕಾಶದಲ್ಲಿ ಭಾಗಿಯಾಗಲು ಅರ್ಹವಾಗಿವೆ.
‘ಬಳಸುವ ಹಕ್ಕು’ ಮಾದರಿಯಡಿ ಯಾರೇ ಆಗಲಿ ಒಂದು ರೇಕನ್ನು ಕನಿಷ್ಠ ಎರಡು ವರ್ಷದ ಅವಧಿಗೆ ಹಾಗೂ ಗರಿಷ್ಠ ಬೋಗಿಗಳ ಉಳಿದ ಸೇವಾಶಕ್ತ ಅವಧಿಯವರೆಗೆ ಹೊಂದಬಹುದಾಗಿದೆ.
ಭಾರತದ ಭವ್ಯ ಸಾಂಸ್ಕೃತಿಕ ಹಾಗೂ ಐತಿಹಾಸಿಕ ಪರಂಪರೆಯನ್ನು ಪ್ರದರ್ಶಿಸುವಲ್ಲಿ ಭಾರತೀಯ ರೈಲ್ವೆಯ ಈ ನೂತನ ಪ್ರಯಾಸದ ಅಂಗವಾಗಲು ಖಾಸಗಿ ಪ್ರವಾಸೋದ್ಯಮಗಳಿಗೆ ಭಾರತ್ ಗೌರವ್ ರೈಲುಗಳು ಒಂದು ಹೊಸ ಉದ್ಯಮದ ಅವಕಾಶವನ್ನು ನೀಡುವುವು. ಆಸಕ್ತಿಯುಳ್ಳ ಉದ್ದಿಮೆದಾರರು ಭಾರತೀಯ ರೈಲ್ವೆಯ ಅಧಿಕೃತ ಜಾಲತಾಣವಾದ www.indianrailways.gov.in ನಲ್ಲಿ ಭಾರತ್ ಗೌರವ್ ಟ್ರೈನ್ಸ್ ಕೊಂಡಿಯಡಿಯಲ್ಲಿ (ಲಿಂಕ್ ನಲ್ಲಿ) ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ಮಾಹಿತಿ ಹಾಗೂ ವಿಚಾರಣೆಗಾಗಿ ನೈರುತ್ಯ ರೈಲ್ವೆಯ ಗ್ರಾಹಕ ಸಹಾಯ ಘಟಕವನ್ನು ಈ ಕೆಳಗಿನ ವಿವರಗಳಲ್ಲಿ ಸಂಪರ್ಕಿಸಬಹುದು ಹುಬ್ಬಳ್ಳಿ ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಅನೀಶ ಹೆಗಡೆ ತಿಳಿಸಿದ್ದಾರೆ.

ಕಸ್ಟಮರ್ ಸಪೋರ್ಟ್ ಯೂನಿಟ್
ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರ ಕಚೇರಿ
ಎರಡನೇ ಮಹಡಿ , ಪಶ್ಚಿಮ ವಿಭಾಗ ಶಾಖೆ (ವೆಸ್ಟ್ ವಿಂಗ್)
ರೈಲ್ ಸೌಧ, ಗದಗ ರಸ್ತೆ,
ಹುಬ್ಬಳ್ಳಿ -560020
ದೂರವಾಣಿ ಸಂಪರ್ಕ: 9731977955, 9901132263
ಇ ಮೈಲ್ ವಿಳಾಸ: bharatgauravtrainsswr@gmail.com

Related posts

ಧಮ್ ಮಾರೋ ಧಮ್!! ಗಾಂಜಾ ಸಾಗಿಸುತ್ತಿದ್ದವ ಮುದುಕ ಅಂದರ್!!

eNewsLand Team

ನುಂಗಣ್ಣ ಕ್ಷೇತ್ರದ ಶಾಸಕರಾದರೆ ಹಾನಗಲ್ಲ ಉಳಿತದಾ ? ಸಿದ್ರಾಮಯ್ಯ ಪ್ರಶ್ನೆ …?

eNEWS LAND Team

ಕಾನೂನು ವಿದ್ಯಾರ್ಥಿಗಳಿಂದ ಪ್ರತಿಭಟನೆ

eNEWS LAND Team