27 C
Hubli
ಡಿಸೆಂಬರ್ 7, 2023
eNews Land
ಸುದ್ದಿ

ಆಯುಧವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಜಮೆ ಮಾಡಲು ಆದೇಶ

ಇಎನ್ಎಲ್ ಧಾರವಾಡ ಡಿ.21:

ಆಯುಧ ಲೈಸೆನ್ಸ್ ಹೊಂದಿರುವವರು ಆಯುಧವನ್ನು ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಜಮೆ ಮಾಡಲು ಆದೇಶ
ಅಣ್ಣಿಗೇರಿ ಪುರಸಭೆ ಸಾರ್ವತ್ರಿಕ ಚುನಾವಣೆ-2021, ಚುನಾವಣೆ ಸಮಯದಲ್ಲಿ ಅಣ್ಣಿಗೇರಿ ಪುರಸಭೆ ವ್ಯಾಪ್ತಿಯ ಎಲ್ಲ ಲೈಸೆನ್ಸ ಹೊಂದಿರುವ ಆಯುಧಗಳನ್ನು ಜೊತೆಗಿಟ್ಟುಕೊಂಡು ತಿರುಗಾಡುವುದನ್ನು ನಿಷೇಧಿಸಿ ಹಾಗೂ ತಾವು ಹೊಂದಿರುವ ಆಯುಧ, ಶಸ್ತ್ರಾಸ್ತ್ರಗಳನ್ನು ತಕ್ಷಣ ತಮ್ಮ ವ್ಯಾಪ್ತಿಯಲ್ಲಿ ಬರುವ ಪೊಲೀಸ್ ಠಾಣೆಯಲ್ಲಿ ಠೇವಣಿ ಮಾಡುವಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಇಂದು (ಡಿ.21) ಆದೇಶ ಹೊರಡಿಸಿದ್ದಾರೆ.

ಲೈಸೆನ್ಸ್‍ದಾರರು ಹೊಂದಿರುವ ಆಯುಧಗಳನ್ನು ಠೇವಣಿ ಮಾಡಿದ ಬಗ್ಗೆ ಅಗತ್ಯ ಸ್ವೀಕೃತಿ ಪತ್ರ ನೀಡಲು ಮತ್ತು ಚುನಾವಣೆ ಪ್ರಕ್ರಿಯೆಯು ಮುಗಿದು ಫಲಿತಾಂಶ ಹೊರಬಿದ್ದು ಒಂದು ವಾರದ ನಂತರ ಸಂಬಂಧಿಸಿದವರಿಗೆ ಆಯುಧವನ್ನು ಬಿಡುಗಡೆ ಮಾಡಲು ಕ್ರಮ ತೆಗೆದುಕೊಳ್ಳಲು ಧಾರವಾಡ ಜಿಲ್ಲಾ ಪೊಲೀಸ್ ಆರಕ್ಷಕ ಅಧೀಕ್ಷಕರಿಗೆ ಅವರು ನಿರ್ದೇಶನ ನೀಡಿದ್ದಾರೆ.

ಈ ಆದೇಶವು ಸರ್ಕಾರಿ ಸೇವೆಯಲ್ಲಿ ನಿರತರಾಗಿರುವ ಅಧಿಕಾರಿ, ಸಿಬ್ಬಂದಿಯವರಿಗೆ ಅನ್ವಯಿಸುವುದಿಲ್ಲ. ಮತ್ತು ಬ್ಯಾಂಕ್ ಹಾಗೂ ಇನ್ನಿತರೆ ಖಾಸಗಿ ಸಂಸ್ಥೆಗಳ ಸುರಕ್ಷತೆಗಾಗಿ ರಾಷ್ಟ್ರೀಕೃತ ಅಥವಾ ಸಂಸ್ಥೆಯ ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ.

ಈ ಆದೇಶ ಉಲ್ಲಂಘಿಸಿದವರನ್ನು ಭಾರತೀಯ ದಂಡ ಸಂಹಿತೆಯ ಹಾಗೂ ಪ್ರಜಾಪ್ರತಿನಿಧಿ  ಕಾಯ್ದೆಯಡಿಯಲ್ಲಿ ದಂಡನೆಗೆ ಗುರಿ ಪಡಿಸಲಾಗುವುದೆಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

 

Related posts

ನೈಋತ್ಯ ರೈಲ್ವೆ: ಯಾವ ರೈಲು ರದ್ದು? ಮಾರ್ಗ ಬದಲಾವಣೆ, ಇಲ್ಲಿದೆ ಮಾಹಿತಿ

eNEWS LAND Team

ಹುಬ್ಬಳ್ಳಿಲಿ ಡಿ.ಕೆ.ಶಿ, ಸಿದ್ದರಾಮಯ್ಯ ಸುಟ್ಟಿದ್ದು ಯಾಕೆ ಗೊತ್ತಾ?

eNEWS LAND Team

ಕುಂದಗೋಳದಲ್ಲಿ “ಶಾದಿಮಹಲ್”ಉದ್ಘಾಟನೆ

eNEWS LAND Team