29 C
Hubli
ಸೆಪ್ಟೆಂಬರ್ 26, 2023
eNews Land
ಸುದ್ದಿ

32 ಎಕರೆ ಕಬ್ಬು ಬೆಳೆ ಆಹುತಿ; ಎಷ್ಟು ರೈತರು ಕಣ್ಣೀರು ಹಾಕ್ತಿದ್ದಾರೆ ಗೊತ್ತಾ?

ಇಎನ್ಎಲ್ ಕಲಘಟಗಿ:ತಾಲೂಕಿನ ಬೆಲವಂತರ ಗ್ರಾಮದ ಬಳಿ ಸುಮಾರು32 ಎಕರೆಗೆ ಕಬ್ಬಿನ ಹೊಲಕ್ಕೆ ಆಕಸ್ಮಿಕ ಬೆಂಕಿ ತಗಲಿದ ಪರಿಣಾಮ ರೈತರಿಗೆ ಲಕ್ಷಾಂತರ ರೂಪಾಯಿ ಹಾನಿಯಾಗಿದೆ.

ಮಧ್ಯಾಹ್ನದ ವೇಳೆಗೆ ಅಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಏಕಾಏಕಿ ಹಲವಾರು ಎಕರೆಗೆ ಹೂಲದಲ್ಲಿ ಬೆಳದಿದ್ದ ಕಬ್ಬಿಗೆ ಹಬ್ಬಿತು.

ಇದನ್ನು ಗಮನಿಸಿದ ರೈತರು ಅಗ್ನಿಶಾಮಕ ಅಧಿಕಾರಿಗಳಿಗೆ ಕರೆ ಮಾಡಿ ಅವರು ಬರುವ ವೇಳೆಗೆ ಗಾಳಿಗೆ ಬೆಂಕಿ ಹೆಚ್ಚಿನ ಪ್ರಮಾಣದಲ್ಲಿ ಹಬ್ಬಿದ್ದು ಅಪಾರ ಪ್ರಮಾಣದ ಕಬ್ಬು ಬೆಳೆ ಹಾನಿಯಾಗಿದೆ.

ಅಗ್ನಿಶಾಮಕ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಹರಸಾಹಸ ಪಟ್ಟರು. ರೈತರಾದ ಬೈಲಪ್ಪ ಬೇಗೂರ, ಮಲ್ಲಿಕಾರ್ಜುನ ಹಿರೇಮಠ,ನಾಗಯ್ಯ ಕೋಟಿ, ಗಂಗಾದರಯ್ಯ ಹೀರೆಮಠ, ಮಹಾದೇವಪ್ಪ ನೂಲ್ವಿ, ರಾಮಪ್ಪ ಮುತ್ತಗಿ ಮಹದೇವಪ್ಪ ಬಸನಕೊಪ್ಪ ಮುತ್ತುರಾಜ ಬೇಗೂರ ದೊಡ್ಡಶಪ್ಪ ಬೇಗೂರ ಮಹದೇವಪ್ಪ ಬಂದನ್ನವರ, ಮಾಂತೇಶ ಬೇಗೂರ ಅವರ ಹೊಲಗಳಲ್ಲಿನ ಕಬ್ಬು ಸಂಪೂರ್ಣ ಆಹುತಿಯಾಗಿದೆ. ಸರ್ಕಾರದಿಂದ ಪರಿಹಾರ ನೀಡಬೇಕೆಂದು ಈ ರೈತರು ಆಗ್ರಹಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಗ್ನಿಶಾಮಕ ಠಾಣಾಧಿಕಾರಿ ಅರ್ಜುನ್ ಮಾನೆ,ಒಂಬತ್ತು ರೈತರ ಸುಮಾರು 32 ಎಕರೆ ಕಬ್ಬು ಬೆಳೆ ಹಾನಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸಹಾಯಕ ಕೃಷಿ ನಿರ್ದೇಶಕ ಎನ್. ಎಫ್. ಕಟ್ಟೆ ಗೌಡ ಕಬ್ಬು ಬೆಳೆ ಹಾನಿಯಾದ ರೈತರ ದಾಖಲೆಗಳನ್ನು ಪಡೆದು ಸರ್ಕಾರದಿಂದ ಪರಿಹಾರ ಮಂಜೂರು ಮಾಡಲು ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.

Related posts

ಧಾರವಾಡ: 28‌‌ ಹಾಗೂ‌ 29ರಂದು ಅನಧಿಕೃತ ವಿನ್ಯಾಸ ತೆರವು ಕಾರ್ಯಾಚರಣೆ

eNewsLand Team

ವಾಕರಸಾಸಂ: ಇಂಧನ ಉಳಿತಾಯದಲ್ಲಿ ಕಾರ್ಯಕ್ಷಮತೆ ತೋರಿದವರಿಗೆ ಪ್ರಶಸ್ತಿ ಪ್ರದಾನ

eNewsLand Team

CANCELLATION, PARTIAL CANCELLATION, DIVERSION, RESCHEDULING AND REGULATION OF TRAINS / ಕೆಲವು ರೈಲುಗಳ ಸೇವೆಯಲ್ಲಿ ಬದಲಾವಣೆ

eNewsLand Team