23.8 C
Hubli
ಮಾರ್ಚ್ 28, 2023
eNews Land
ಸುದ್ದಿ

ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?

Listen to this article

 

ಇಎನ್ಎಲ್ ಅಣ್ಣಿಗೇರಿ :  ಶಾಲಾ ಕಾಲೇಜುಗಳಿಗೆ ದಿನ ನಿತ್ಯ ವಿದ್ಯಾರ್ಥಿಗಳು ನಿಗದಿತ ಸಮಯಕ್ಕೆ ತೆರಳಲು ಸಕಾಲಕ್ಕೆ ಬಸ್ ಸೌಲಭ್ಯಗಳಿಲ್ಲದೇ ಬಸ್‌ನಲ್ಲಿ ಹಾಗೂ ಟಾಪ್‌ನಲ್ಲಿ ಬಾಗಿಲಿಗೆ ಜೋತುಬಿದ್ದು,ನೂರಾರು ವಿದ್ಯಾರ್ಥಿಗಳು ಸಂಚರಿಸುವಂತೆ ಪರಿಸ್ಥಿತಿ ತಲೆದೋರಿದೆ. ಪ್ರತಿ ಗ್ರಾಮಗಳಿಂದ ೩೦ರಿಂದ ೪೦ ವಿದ್ಯಾರ್ಥಿಗಳು ಬಸ್ ಮೂಲಕವೇ ಶಾಲಾ ಕಾಲೇಜುಗಳಿಗೆ ಬರಬೇಕಿದೆ. ಆ ಹಿನ್ನಲೆಯಲ್ಲಿ ಸರ್ಕಾರ, ಸಾರಿಗೆ ಇಲಾಖೆ, ಜನಪ್ರತಿನಿಧಿಗಳು, ಕ್ರಮ ಕೈಗೊಳ್ಳಬೇಕಿದೆ. ಎಂದು ವಿದ್ಯಾರ್ಥಿ ಪೂನಮ್ ಶಿರೂರು, ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಆದರೆ ತಾಲೂಕಿನ ಸುತ್ತಮುತ್ತಲಿನ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 7-೦೦ ಗಂಟೆಯಿAದ 1೦.3೦ ಗಂಟೆ ಹಾಗೂ ಸಂಜೆ 4 ಗಂಟೆಯಿAದ 5-3೦ ಗಂಟೆಯವರೆಗೆ ಸಕಾಲಕ್ಕೆ ಬಸ್ ವ್ಯವಸ್ಥೆ ಇಲ್ಲದ ಕಾರಣ ತಡವಾಗಿ ಶಾಲಾ-ಕಾಲೇಜ ತರಗತಿಗಳಿಗೆ ಹೊಗುವ ಸಂದರ್ಭ ಹಾಗೂ ಶಾಲೆ ಬಿಟ್ಟ ನಂತರ ತಮ್ಮ ಗ್ರಾಮಗಳಿಗೆ ತಲುಪಲು ತಡವಾಗುತ್ತಿದ್ದು, ಮನೆಗೆಲಸ ಮುಗಿಸಿ, ಹೋಮವರ್ಕ ಮಾಡಲು ವಿಳಂಭವಾಗುತ್ತಿರೋದು ಕಂಡುಬರುತಿದೆ. ಕ.ಸಾ.ನಿ.ಅಧಿಕಾರಿಗಳು ತಕ್ಷಣವೇ ಹೆಚ್ಚಿನ 4-5 ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಿದರೇ ಮಕ್ಕಳಿಗೆ ಸಂಚರಿಸಲು ಬಸ್ ಸೌಲಭ್ಯ ಒದಗಿಸಲು ಸಾಧ್ಯ.ಎಂದು ಪಾಲಕರು ಆರೋಪಿಸುತ್ತಿದ್ದಾರೆ.
ಕೋವಿಡ್ ನಿಮಿತ್ಯ ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳಿಗೆ ಶಿಕ್ಷಣ ಇಲಾಖೆ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಕುಂಠಿತಗೊಳ್ಳಬಾರದೆಂದು ಆನಲೈನ ಮೂಲಕ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆ ಪರೀಕ್ಷೆ ಆಯೋಜಿಸಿತ್ತು, ಗ್ರಾಮೀಣ ಪ್ರದೇಶದ ಬಡ ಮಕ್ಕಳಲ್ಲಿ ಮೊಬೈಲ್ ಇಲ್ಲದ ಕಾರಣ ಇಂಟರನೆಟ್ ಇಲ್ಲದ ಕಾರಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ.ಕೇವಲ ನಗರಪ್ರದೇಶದ ವಿದ್ಯಾರ್ಥಿಗಳು ಮೊಬೈಲ್ ಇದ್ದವರು ಮಾತ್ರ ಪ್ರಯೋಜನ ಪಡೆವಂತಾಗಿದೆ. ಎಂದು ವಿದ್ಯಾರ್ಥಿನಿ ಅಂಜಲಿ ವಾರದ ತನ್ನ ಅಭಿಪ್ರಾಯವನ್ನು ಹಂಚಿಕೊoಡಳು.
ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳ ಆರೋಗ್ಯ ರಕ್ಷಣೆ ನಿಮಿತ್ಯ ಪರೀಕ್ಷೆ ನಡೆಸದೇ, ಪ್ರಾಥಮಿಕ ಹಂತದಿoದ ಪದವಿ ವರೆಗೆ ಎಲ್ಲರನ್ನು ಪಾಸ್ ಮಾಡಿದ್ದು, ಕೆಟ್ಟ ಪರಂಪರೆ ಎಂದರು.

Related posts

ಥಾಲಾ ಇಸ್ ಬ್ಯಾಕ್!! ಅರ್ಧಶತಕ ಭಾರಿಸಿ ಧೋನಿ ಮ್ಯಾಜಿಕ್..ವಿಸಿಲ್ ಪೋಡು!

eNewsLand Team

ಶಿಕ್ಷಕರ ಮತಕ್ಷೇತ್ರ : ಮತದಾರರ ಹೆಸರು ಸೇರಿಸಲು ಅವಕಾಶ

eNewsLand Team

ರಾಜ್ಯಕ್ಕೆ ಶಾ; ಸಾರ್ವತ್ರಿಕ ಚುನಾವಣೆ ತಯಾರಿಗೆ‌ ಅಡಿಗಲ್ಲು? ಕೋರ್ ಕಮೀಟಿ ಸಭೆ ಸೆಂಟರ್ ಆಫ್ ಎಟ್ರಾಕ್ಷನ್!! 

eNewsLand Team