ಇಎನ್ಎಲ್ ಧಾರವಾಡ: ಹಳೆ ಜಗಳ ಹಿನ್ನೆಲೆಯಲ್ಲಿ ಇಲ್ಲಿನ ಹಳೇ ಹುಬ್ಬಳ್ಳಿ ಬೀರಬಂದ ಓಣಿಯ ಬಳಿ ಹೋಗುತ್ತಿದ್ದ ವ್ಯಕ್ತಿ ಮೇಲೆ ಐವರು ಸೇರಿ ಹಲ್ಲೆ ನಡೆಸಿ ಚೂರಿ ಇರಿದು ಕೊಲೆಗೆ ಯತ್ನಿಸಲಾಗಿದೆ.
ಜಾವೀದ್ ಶಬ್ಬೀರಹ್ಮದ್ ಕುಂದಗೋಳ ಗಾಯಗೊಂಡವರು. ಇವರಿಗೆ ಉಸ್ಮಾನ್ ಎಂಬಾತ ಚೂರಿ ಇರಿದ ಬಗ್ಗೆ ದೂರು ದಾಖಲಾಗಿದೆ. ಸೋಹಿಲ್ ಕಾವಸಾ, ಇಸ್ಮಾಯಿಲ್ ಮನಿಯಾರ್, ತಾಜುದ್ದಿನ್ ಎಲ್., ಫಾರೂಕ್ ಸವಣೂರ ಹಲ್ಲೆ ನಡೆಸಿದ ಇತರೆ ಆರೋಪಿಗಳು. ಬೈಕ್ ತಾಗಿದ್ದನ್ನು ನೆಪವಾಗಿಸಿಕೊಂಡ ಆರೋಪಿಗಳು ಹಳೆ ಜಗಳ ತೆಗೆದು ಥಳಿಸಿದ್ದಾರೆ. ಈ ವೇಳೆ ಉಸ್ಮಾನ್ ಚೂರಿಯಿಂದ ಬೆನ್ನಿಗೆ ಇರಿದಿದ್ದಾಾನೆ. ಜಾವೀದ್ ಚೀರಾಡುತ್ತಿದ್ದಂತೆ ಸ್ಥಳೀಯರು ಬಂದು ಗಲಾಟೆ ಬಿಡಿಸಿದ್ದಾರೆ. ಹಳೆ ಹುಬ್ಬಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.