ಇಎನ್ಎಲ್ ಧಾರವಾಡ: ಹುಬ್ಬಳ್ಳಿಯಲ್ಲಿ ಸೋಮವಾರ ರಾತ್ರಿ ನೆತ್ತರು ಹರಿದಿದೆ. ನಗರದ ಎರಡು ಕಡೆಗಳಲ್ಲಿ ಚಾಕು ಇರಿತವಾಗಿದೆ.
ಶಹರ ಪೊಲೀಸ್ ಠಾಣೆ ವ್ಯಾಪ್ತಿಯ ಹರಿಶ್ಚಂದ್ರ ಕಾಲೋನಿಯಲ್ಲಿ ರಾಜಶೇಖರ್ ಅಯ್ಯರ್(40 ) ಗೆ ದುಷ್ಕರ್ಮಿಗಳು ಚಾಕು ಇರಿದಿದ್ದಾರೆ.
ಸಣ್ಣಪುಟ್ಟ ಜಗಳಕ್ಕೆ ನಾಲ್ವರ ನಡುವೆ ನಡೆದ ಘಟನೆ ವೇಳೆ ಚಾಕು ಇರಿದಿದ್ದಾರೆ.
ಪವನ್ ಬಿಜ್ವಾಡ್, ಶುಭಮ್ ಬಿಜ್ವಾಡ್, ಮೋಹನ್ ಗಂಡಿನವರ ಮತ್ತು ರಾಬಿನ್ ಮರಿಯಾಳ ಆರೋಪಿತರು. ಗಾಯಗೊಂಡ ರಾಜಶೇಖರ ಕಿಮ್ಸ್’ಗೆ ದಾಖಲಾಗಿದ್ದಾನೆ.
ಈ ಬಗ್ಗೆ ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದರ ಜೊತೆ ಬೇಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಕಸ್ತೂರಿಬಾ ನಗರದಲ್ಲಿ ನವೀನ ಎಂಬ ಯುವಕನಿಗೆ ಚಾಕು ಇರಿತವಾಗಿದೆ.
ಗಾಯಗೊಂಡ ನವೀನ ಕಿಮ್ಸ್’ಗೆ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.