26 C
Hubli
ಮೇ 25, 2024
eNews Land
ಸುದ್ದಿ

ಕ್ರೀಡೆಯಲ್ಲಿ ಸಮತೋಲಿತ ಭಾವ ಅಗತ್ಯ : ಮಹಾಪೌರ ಈರೇಶ್ ಅಂಚಟಗೇರಿ

ಇಎನ್ಎಲ್  ಧಾರವಾಡ

ಕ್ರೀಡಾ ಚಟುವಟಿಗಳಲ್ಲಿ ಭಾಗವಹಿಸುವುದರಿಂದ ಕೆಲಸದಲ್ಲಿ ಲವಲವಿಕೆ ಮತ್ತು ಉತ್ತಮ ಆರೋಗ್ಯ ಪಡೆಯಲು ಸಾಧ್ಯವಾಗುತ್ತದೆ. ಕ್ರೀಡೆಯಲ್ಲಿ ಭಾಗವಹಿಸುವ ಕ್ರೀಡಾಪಟುಗಳು ಗೆದ್ದರೆ ಸಂತೋಷ ಪಡಬೇಕು ಮತ್ತು ಸೋತರೆ ಅದು ಅನುಭವ ಎಂದು ತಿಳಿದು ಸಮಾಧಾನ ಪಟ್ಟುಗೊಳ್ಳಬೇಕು. ಈ ಸಮತೋಲಿತ ಭಾವ ಇದ್ದರೆ ಮಾತ್ರ ಕ್ರೀಡೆ ಆನಂದಿಸಲು ಸಾಧ್ಯವಾಗುತ್ತದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರ ಈರೇಶ ಅಂಚಟಗೇರಿ ಅವರು ಹೇಳಿದರು.

ಅವರು ಇಂದು ಬೆಳಿಗ್ಗೆ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಆಶ್ರಯದಲ್ಲಿ ಆಯೋಜಿಸಿರುವ ಎರಡು ದಿನಗಳ ಜಿಲ್ಲಾ ಕ್ರೀಡಾಕೂಟ ಉದ್ಘಾಟಿಸಿ, ಮಾತನಾಡಿದರು.

ದೇಸಿಯ ಕ್ರೀಡೆ ಮತ್ತು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಪೆÇ್ರೀತ್ಸಾಹಿಸಿ, ಉಳಿಸಿ ಬೆಳೆಸಲು ಸರಕಾರ ಮತ್ತು ಮಹಾನಗರಪಾಲಿಕೆಯಿಂದ ಸಾಕಷ್ಟು ಅನುದಾನ ನೀಡಲಾಗುತ್ತಿದೆ. ಸರಕಾರಿ ನೌಕರರ ಕ್ರೀಡಾ ಚಟುವಟಿಕೆಗಳಿಗೆ ಪಾಲಿಕೆಯಿಂದ ಆರ್ಥಿಕ ಸಹಾಯ ನೀಡಲಾಗಿದೆ. ಸರಕಾರ ನೀಡಿರುವ ಸೇವೆಯ ಅವಕಾಶವನ್ನು ನೌಕರರು ಸದುಪಯೋಗಪಡಿಸಿಕೊಂಡು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕೆಂದು ಅವರು ಹೇಳಿದರು.

ಪ್ರಾಸ್ತಾವಿಕವಾಗಿ ಜಿಲ್ಲಾ ಅಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಮಾತನಾಡಿ, ಒತ್ತಡದ ಕೆಲಸಗಳ ಮಧ್ಯೆಯೂ ನೌಕರರಿಗೆ ಕ್ರೀಡೆ, ಸಾಂಸ್ಕøತಿಕ ಕಾರ್ಯಕ್ರಮಗಳು ಉಲ್ಲಾಸದಿಂದ, ವಿಶ್ರಾಂತಿಯಿಂದ ತೊಡಗಿಕೊಳ್ಳಲು ಸಹಾಯವಾಗುತ್ತದೆ. ಅದಕ್ಕಾಗಿ ಪ್ರತಿ ವರ್ಷ ಸರಕಾರಿ ನೌಕರ ಸಂಘ ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಕ್ರೀಡಾಕೂಟ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಸಂಘಟಿಸಲಾಗುತ್ತದೆ ಎಂದರು.

ರಾಜ್ಯ ಸರಕಾರ ಈಗಾಗಲೇ 7ನೇ ವೇತನ ಆಯೋಗ ಜಾರಿಯ ಭರವಸೆ ನೀಡಿ, ಆಯೋಗ ರಚಿಸಿ ಆದೇಶಿಸಿದೆ. ಮತ್ತು ನಮ್ಮ ಮುಂದಿನ ಹೋರಾಟ ಎನ್.ಪಿ.ಎಸ್. ರದ್ದತಿಯಾಗಬೇಕು ಹಾಗೂ ಓಪಿಎಸ್ ಜಾರಿಯಾಗಬೇಕು. ಈ ಕುರಿತು ನಮ್ಮ ಎಲ್ಲ ನೌಕರರ ಬೇಡಿಕೆಗೆ ಅನುಗುಣವಾಗಿ ಮುಂದಿನ ಹಂತದಲ್ಲಿ ನೌಕರ ಸಂಘದ ರಾಜ್ಯಾಧ್ಯಕ್ಷರ, ಕೇಂದ್ರ ಘಟಕದ ನೇತೃತ್ವದಲ್ಲಿ ತೀವ್ರ ಹೋರಾಟ ಮಾಡಲಾಗುವುದು ಎಂದು ಜಿಲ್ಲಾದ್ಯಕ್ಷ ಎಸ್.ಎಫ್. ಸಿದ್ದನಗೌಡರ ಅವರು ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ, ರಾಜ್ಯ ಬಯಲು ಸೀಮೆ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತವಣಪ್ಪ ಅಷ್ಟಗಿ ಅವರು ಮಾತನಾಡಿ, ಕಳೆದ ಸಾಲಿನ ರಾಜ್ಯ ಮತ್ತು ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಜಿಲ್ಲೆಯ 20 ಜನ ನೌಕರರು ಪ್ರಶಸ್ತಿ ವಿಜೇತರಾಗಿದ್ದು, ಮುಂದಿನ ವರ್ಷ ಹೆಚ್ಚು ಜನ ಭಾಗವಹಿಸಿ, ಜಿಲ್ಲೆಗೆ ಕೀರ್ತಿ ತರಬೇಕೆಂದು ಹೇಳಿದರು.

ವೇದಿಕೆಯಲ್ಲಿ ಮಹಾನಗರಪಾಲಿಕೆ ಆಯುಕ್ತರಾದ ಡಾ.ಗೋಪಾಲ ಕೃಷ್ಣ ಬಿ., ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆ ಉಪನಿರ್ದೇಶಕ ಎಸ್.ಎಸ್. ಕೆಳದಿಮಠ, ಕ್ಷೇತ್ರ ಶಿಕ್ಷಣಾಧಿಕಾರಿ ಗಿರೀಶ ಪದಕಿ ಹಾಗೂ ಇತರರು ಇದ್ದರು.

ಸ್ಪರ್ಧೆ: ಪ್ರಸಕ್ತ ಸಾಲಿನ ಕ್ರೀಡಾಕೂಟದಲ್ಲಿ 688 ಪುರುಷ ಹಾಗೂ 434 ಜನ ಮಹಿಳೆಯರು ಸೇರಿ ಒಟ್ಟು 1,138 ಜನ ನೌಕರ ಕ್ರೀಡಾಪಟುಗಳು ಭಾಗವಹಿಸಿದ್ದಾರೆ. ಎರಡು ದಿನಗಳ ಜಿಲ್ಲಾ ಕ್ರೀಡಾಕೂಟದಲ್ಲಿ ಒಟ್ಟು 15 ಗುಂಪು ಸ್ಪರ್ಧೆಗಳು ಮತ್ತು 40 ಅಥ್ಲೆಟಿಕ್ ಆಟಗಳು, ತೂಕವಾರು 22 ತರಹದ ಕುಸ್ತಿಗಳು, 12 ತರಹದ ಈಜು ಸ್ಪರ್ಧೆಗಳನ್ನು ಸಂಘಟಿಸಲಾಗುತ್ತಿದೆ. ಸ್ಪರ್ಧೆಗಳ ನಿರ್ಣಾಯಕರಾಗಿ ವಿವಿದ ಸರಕಾರಿ ಪ್ರಾಥಮಿಕ, ಪ್ರೌಢಶಾಲೆಗಳ ಸುಮಾರು 144 ಜನ ದೈಹಿಕ ಶಿಕ್ಷಕರು ಭಾಗವಹಿಸಿದ್ದಾರೆ.

ಕಳೆದ ಸಾಲಿನ ಸರಕಾರಿ ನೌಕರರ ರಾಜ್ಯ ಹಾಗೂ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಧಾರವಾಡ ಜಿಲ್ಲೆಯನ್ನು ಪ್ರತಿನಿಧಿಸಿ, ಪ್ರಶಸ್ತಿ ವಿಜೇತರಾದ ಸರಕಾರಿ ನೌಕರ ಹೆಸರುಗಳನ್ನು ಸಂಘದ ಜಿಲ್ಲಾ ಕಾರ್ಯದರ್ಶಿ ಮಂಜುನಾಥ ಯಡಹಳ್ಳಿ ವೇದಿಕೆಯಲ್ಲಿ ಪ್ರಸ್ತುತಪಡಿಸಿದರು. ಮತ್ತು ಗಣ್ಯರು ಸಂಘದ ಪರವಾಗಿ ಸನ್ಮಾನಿಸಿದರು.

ಬಿ.ಆರ್.ಸಿ. ಜಯಲಕ್ಷ್ಮಿ ಎಚ್. ಪ್ರಾರ್ಥಿಸಿದರು. ಹಿರಿಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ಪ್ರಕಾಶ ಕಂಬಳಿ ನೇತೃತ್ವದ ಸಿರಿಗಂಧ ಕಲಾ ತಂಡದವರು ನಾಡಗೀತೆ ಹಾಡಿದರು.

ಕ್ರೀಡಾಪಟುಗಳಿಗೆ ಶಂಕರ ಘಟ್ಟಿ ಪ್ರತಿಜ್ಞೆ ಬೋಧಿಸಿದರು. ಸಂಘದ ಗೌರವಾಧ್ಯಕ್ಷ ರಮೇಶ ಲಿಂಗದಾಳ ಕಾರ್ಯಕ್ರಮ ನಿರೂಪಿಸಿದರು. ಗಿರೀಶ ಚೌಡಕಿ ವಂದಿಸಿದರು.

ಸಭೆಯ ಆರಂಭದಲ್ಲಿ ನಿನ್ನೆ ಶಿವೈಕ್ಯರಾದ ವಿಜಯಪುರ ಜ್ಞಾನ ಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿಯವರಿಗೆ ಹಾಗೂ ಇತ್ತಿಚಿಗೆ ನಿಧನರಾದ ಆರೋಗ್ಯ ಇಲಾಖೆಯ ಅಧಿಕಾರಿ ಸಲಿಂ ಮಿಶ್ರಕೋಟಿ ಅವರಿಗೆ 2 ನಿಮಿಷಗಳ ಮೌನಾಚರಣೆ ಮೂಲಕ ಸಂತಾಪ ಸೂಚಿಸಲಾಯಿತು.

ವಿವಿಧ ಇಲಾಖೆಗಳ ನೌಕರರು, ಕ್ರೀಡಾಪಟುಗಳು, ಅವರ ಕುಟುಂಬ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Related posts

ನೈಋತ್ಯ ರೈಲ್ವೆ: ಯಾವ ರೈಲು ರದ್ದು? ಮಾರ್ಗ ಬದಲಾವಣೆ, ಇಲ್ಲಿದೆ ಮಾಹಿತಿ

eNEWS LAND Team

ನೆನೆಸಿದ ಖರ್ಜೂರ, ಬಾದಾಮಿ ಆರೋಗ್ಯಕ್ಕೆ ತುಂಬಾ ಒಳ್ಳೆದಂತಾರೆ? ಎಷ್ಟು ನಿಜ?

eNewsLand Team

ಅಣ್ಣಿಗೇರಿಯಲ್ಲಿ ಸಂಭ್ರಮದ ಹೋಳಿ ಹಬ್ಬ

eNEWS LAND Team