ಇಎನ್ಎಲ್ ಧಾರವಾಡ: ನೈಋತ್ಯ ರೈಲ್ವೆಯು 2021-22 ರ ಅವಧಿಯಲ್ಲಿ 44.12 ಮಿಲಿಯನ್ ಟನ್ ಮೂಲ ಸರಕು ಸಾಗಣೆ ಲೋಡ್ ಮಾಡಿದ್ದು, ಕಳೆದ ಹಣಕಾಸು ವರ್ಷಕ್ಕಿಂತ 15.5% ಅಭಿವೃದ್ಧಿ ದಾಖಲಿಸಿದೆ.
ಗುಜರಿ ವಸ್ತುಗಳ ಮಾರಾಟದಿಂದ ₹138.04 ಕೋಟಿ ದಾಖಲೆಯ ಗಳಿಕೆ ಮಾಡಿದೆ.
ಒಟ್ಟಾರೆ 511.7 ರೈಲ್ವೆ ರೂಟ್ ಕಿಲೋಮೀಟರ್ ವಿದ್ಯುದೀಕರಣ ಪೂರ್ಣಗೊಳಿಸಲಾಗಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದಲ್ಲಿ 26 ರೈಲುಗಳನ್ನು ವಿದ್ಯುತ್ ಚಾಲಿತಯೊಂದಿಗೆ ಪರಿವರ್ತಿಸಲಾಗಿದೆ.
187 ಕಿಮೀ ಜೋಡಿಮಾರ್ಗ ಮತ್ತು 22 ಕಿಮೀ ಹೊಸ ಮಾರ್ಗವನ್ನು ಪೂರ್ಣಗೊಳಿಸಲಾಗಿದೆ.
ನೈಋತ್ಯ ರೈಲ್ವೆಯು 2021-22 ರ ಆರ್ಥಿಕ ವರ್ಷದಲ್ಲಿ ಉತ್ತಮ ಪ್ರಗತಿ ಸಾಧಿಸಿದೆ. ಗ್ರಾಹಕ ಸ್ನೇಹಿ ವಿಧಾನದೊಂದಿಗೆ, ರೈಲ್ವೇ ಸರಕು ಮತ್ತು ಪಾರ್ಸೆಲ್ ಸಂಚಾರಕ್ಕೆ ಅತ್ಯಂತ ಆದ್ಯತೆಯ ಸಾರಿಗೆ ವಿಧಾನವಾಗಿದೆ. 2021-22 ರ ಹಣಕಾಸು ವರ್ಷದಲ್ಲಿ, ನೈಋತ್ಯ ರೈಲ್ವೆ ಯು 44.12 ಮಿಲಿಯನ್ ಟನ್ ಸರಕು ಸಾಗಣೆಯನ್ನು ಕಳೆದ ಹಣಕಾಸು ವರ್ಷಕ್ಕಿಂತ 15.5% ಅಭಿವೃದ್ಧಿ ದಾಖಲಿಸಿದೆ.
ಲೋಡ್ ಮಾಡಲಾದ ಸರಕುಗಳಲ್ಲಿ 17.04 ಮಿಲಿಯನ್ ಟನ್ ಕಬ್ಬಿಣದ ಅದಿರು, 9.13 ಮಿಲಿಯನ್ ಟನ್ ಕಲ್ಲಿದ್ದಲು, 9.05 ಮಿಲಿಯನ್ ಟನ್ ಪೆಡಸು ಕಬ್ಬಿಣ. ಮತ್ತು ಫಿನಿಶ್ಡ್ ಉಕ್ಕು, 0.77 ಮಿಲಿಯನ್ ಟನ್ ಆಹಾರ ಧಾನ್ಯಗಳು, 0.98 ಮಿಲಿಯನ್ ಟನ್ ಸಿಮೆಂಟ್ ಇತ್ಯಾದಿ. 2021-22 ರ ಅವಧಿಯಲ್ಲಿ ಸರಕು ಸಾಗಾಣಿಕೆಯಿಂದ ಗಳಿಸಿದ ಆದಾಯವು ₹ 4160 ಕೋಟಿ. ಇದು 2020-21 ರ ಹಣಕಾಸು ವರ್ಷದಲ್ಲಿ 28.72% ಕ್ಕಿಂತ ಹೆಚ್ಚಳವಾಗಿದೆ. 2021-22 ರಲ್ಲಿ ನೈಋತ್ಯ ರೈಲ್ವೆ ಯ ಪಾರ್ಸೆಲ್ ಆದಾಯವು ₹ 121.56 ಕೋಟಿ. 2021-22 ಹಣಕಾಸು ವರ್ಷದಲ್ಲಿ ನೈಋತ್ಯ ರೈಲ್ವೆಯು 238 ಆಟೋಮೊಬೈಲ್ ರೇಕ್‌ಗಳನ್ನು ಲೋಡ್ ಮಾಡಲಾಗಿದೆ. ಸಂಡ್ರಿ ಆದಾಯ ಶೇ 71.52% ಹೆಚ್ಚಳದೊಂದಿಗೆ 275.7 ಕೋಟಿ. ಗುಜರಿ ವಸ್ತು ಮಾರಾಟದಿಂದ ₹ 138.04 ಕೋಟಿ ದಾಖಲೆಯ ಗಳಿಕೆ ಮತ್ತು ರೈಲ್ವೆ ಬೋರ್ಡ್ ನಿಗದಿಪಡಿಸಿದ ಗುರಿ ಮೀರಿದೆ.
ಇದನ್ನು ಓದಿ
ನೈಋತ್ಯ ರೈಲ್ವೆ ಈಗ ಹಸಿರು ರೈಲ್ವೆ ಆಗ್ತಿದೆ, ಹೇಗೆ ಗೊತ್ತಾ?
ನೈಋತ್ಯ ರೈಲ್ವೆಯ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತುನ್ನು ನೀಡಿದೆ. 2021-22 ರ ಅವಧಿಯಲ್ಲಿ, 187 ಕಿಮೀ ದ್ವಿಪಥಿಕರಣ ಮತ್ತು 22 ಕಿಮೀ ಹೊಸ ಮಾರ್ಗಗಳು ಮತ್ತು 511.7 ಕಿಮೀ ವಿದ್ಯುದ್ದೀಕರಣ ಪೂರ್ಣಗೊಳಿಸಲಾಗಿದೆ. ನಿವ್ವಳ ಶೂನ್ಯ ಇಂಗಾಲದ ಹೊರಸೂಸುವಿಕೆಯನ್ನು ಸಾಧಿಸುವ ನಿಟ್ಟಿನಲ್ಲಿ, ನೈಋತ್ಯ ರೈಲ್ವೆ ಯು 2021-22 ಹಣಕಾಸು ವರ್ಷದಲ್ಲಿ 26 ರೈಲುಗಳನ್ನು ಎಲೆಕ್ಟ್ರಿಕ್ ಟ್ರಾಕ್ಷನ್‌ನಲ್ಲಿ ಚಲಿಸುವಂತೆ ಪರಿವರ್ತಿಸಲಾಗಿದೆ. ಡೀಸೆಲ್ ಬಳಕೆ ಕಡಿಮೆ ಮಾಡುವ ನಿಟ್ಟಿನಲ್ಲಿ 40 ರೈಲುಗಳು HOG ಪವರ್ ಕಾರ್‌ಗಳನ್ನು ಸಂಚರಿಸಲಾಗುತ್ತದೆ. ಹಸಿರು ಉಪಕ್ರಮವಾಗಿ, ನೈಋತ್ಯ ರೈಲ್ವೆಯು ತನ್ನ ವ್ಯಾಪ್ತಿಯಾದ್ಯಂತ 70 ಸಾವಿರ ಹಣ್ಣು ಕೊಡುವ ನೆಡಲಾಗಿದೆ.
ಪ್ರಧಾನ ವ್ಯವಸ್ಥಾಪಕ ಸಂಜೀವ್ ಕಿಶೋರ್ ರವರು ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳ ಇಲಾಖೆಯ ಪ್ರಧಾನ ಮುಖ್ಯಸ್ಥರ ಮತ್ತು ವಿಭಾಗೀಯ ರೈಲ್ವೆ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿದರು. ಪ್ರಮುಖ ಕ್ಷೇತ್ರಗಳಲ್ಲಿ ಅತ್ಯುನ್ನತ ಸಾಧನೆ ದಾಖಲಿಸಿದ್ದಕ್ಕಾಗಿ ನೈಋತ್ಯ ರೈಲ್ವೆಯ ನೌಕರರನ್ನು ಅವರು ಪ್ರಶಂಶಿಸಿದರು. ಮೊದಲು ಸುರಕ್ಷತೆ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು ಮತ್ತು ಮುಂದಿನ ವರ್ಷ ಇನ್ನೂ ಉತ್ತಮ ಸಾಧನೆ ಸಾಧಿಸುವಲ್ಲಿ ತಮ್ಮ ಮಟ್ಟವನ್ನು ಅತ್ಯುತ್ತಮವಾಗಿ ಪ್ರಯತ್ನಿಸುವಂತೆ ಹೇಳಿದರು.