ಇಎನ್ಎಲ್ ಹುಬ್ಬಳ್ಳಿ: ಶಿವರಾತ್ರಿ ಅಂಗವಾಗಿ ಸಿದ್ಧಾರೂಢರ ಹಾಗೂ ಗುರುನಾಥರೂಢರ ಜಾತ್ರೆ ಸಪ್ತಾಹದ ಮೊದಲ ದಿನ ಸದ್ಗುರು ಸಿದ್ಧಾರೂಢ ಮಠವನ್ನು ವಿಶೇಷವಾಗಿ ಅಲಂಕರಿಸಲಾಗಿದೆ.
ಮಾವಿನ ತೊಳಲು ತೆಂಗಿನ ಗರಿ ಬಾಳೆ ಕಂಬ ಗಳಿಂದ ಸಿಂಗಾರ ಗೊಂಡಿದ್ದು ಕೈಲಾಸ ಮಂಟಪ ಸುಂದರ ಋಷಿ ಮುನಿಗಳ ಗೊಂಬೆಗಳಿಂದ ಮತ್ತು ಶಾವಿಗೆ ಅಲಂಕಾರದಿಂದ ಕೂಡಿದ್ದು ಶಾಸ್ತ್ರ ಪ್ರವಚನಕ್ಕೆ ಸಜ್ಜಾಗಿದೆ.
ಫೆ.24ರಿಂದ ಏಳು ದಿನಗಳ ಪರ್ಯಂತ ಶ್ರೀ ಮಠದಲ್ಲಿ ಪ್ರಾತಃಕಾಲದಲ್ಲಿ ಉಭಯ ಸದ್ಗುರು ಗಳಿಗೆ ಅಭಿಷೇಕ ನೈವೆದ್ಯ, ಮಂಗಳಾರತಿ ನಡೆಯುತ್ತದೆ.
ಕೈಲಾಸ ಮಂಟಪದಲ್ಲಿ ಬೆಳಗ್ಗೆ 7:45 ರಿಂದ 9 ರವರೆಗೆ “ಶ್ರೀ ಸಿದ್ಧಾರೂಢ ಭಾರತಿ ಕಲ್ಪದೃಮ” ಪುರಾಣ ಪಠಣ ನಡೆಯುತ್ತದೆ 9 ರಿಂದ 12 ರವರೆಗೆ ಮಹಾತ್ಮ ರಿಂದ ವೇದಾಂತ ಉಪನ್ಯಾಸಗಳು ನಡೆಯುವವು.
ಮಧ್ಯಾಹ್ನ ಮಹಾ ಪ್ರಸಾದ ಸಂಜೆ ಕೈಲಾಸ ಮಂಟಪದಲ್ಲಿ ಮಹಾ ಪೂಜೆ ಸಮಾಧಿ ಮಂದಿರದಲ್ಲಿ ಪಾಲಕಿ ಉತ್ಸವ ನಂತರ ಮಂಗಳಾರತಿ ನಡೆಯುತ್ತದೆ ರಾತ್ರಿ 8 ಕ್ಕೆ ಸಂಗೀತ ಕಾರ್ಯಕ್ರಮ ಕೂಡಾ ಇರುತ್ತದೆ.
ಭಕ್ತಾದಿಗಳು ಎಲ್ಲಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸದುಪಯೋಗ ಪಡೆದುಕೊಳ್ಳಲು ಶ್ರೀಮಠವು ತಿಳಿಸಿದೆ.