ಇಎನ್ಎಲ್ ಅಣ್ಣಿಗೇರಿ : ಪಟ್ಟಣದ ಬಸ್ ನಿಲ್ದಾಣ ಎದುರುಗಡೆ ಟಿ.ಕೆ.ಜಂಗಲ್ ಮಾಲಿಕತ್ವದ ಜಾಗದಲ್ಲಿ ವಾಣಿಜ್ಯ ಅಂಗಡಿ ನಿರ್ಮಾಣಕ್ಕೆ ಪುರಸಭೆ ಒಪ್ಪಿಗೆ ಪಡೆದು ಕಟ್ಟಡ ನಿರ್ಮಾಣಗೊಳಿಸಿದ್ದರು. ಆದರೆ ಒಪ್ಪಿಗೆ ಪಡೆದ ಜಾಗದಲ್ಲಿ ಕಟ್ಟಡ ನಿರ್ಮಾಣಗೊಳಿಸಿಲ್ಲವೆಂದು ಪುರಸಭೆ ಅಧಿಕಾರಿಗಳು 2 ಬಾರಿ ನೋಟಿಸ್ ನೀಡಿ ತೆರವುಗೊಳಿಸುವಂತೆ ಸೂಚಿಸಿದ್ದರು.
ನೂತನವಾಗಿ ನಿರ್ಮಾಣಗೊಂಡ ವಾಣಿಜ್ಯ ಅಂಗಡಿಗಳನ್ನು ಧಾರವಾಡ ಪ್ರೋಬೇಷನರಿ ಅಧಿಕಾರಿ ಮಾದೇವ ಗಿತ್ತಿ ಮುಚ್ಚಿಸಿ, ಅತಿಕ್ರಮಣ ಮಾಡಿರುವ ಮಾಲಿಕರಿಗೆ ಈಗಾಗಲೇ 2 ಬಾರಿ ನೋಟಿಸ್ ನೀಡಿದ್ದರೂ ಸರಕಾರದ ಜಾಗವನ್ನು ತೆರವುಗೊಳಿಸುವಲ್ಲಿ ಕ್ರಮಕೈಗೊಳ್ಳದ ಪರಿಣಾಮ, ತಕ್ಷಣವೇ ಕಾನೂನು ಬಾಹಿರವಾಗಿ ಸರ್ಕಾರದ ಅತಿಕ್ರಮಣ ಜಾಗದಲ್ಲಿ ನಿರ್ಮಾಣಗೊಂಡ ಕಟ್ಟಡದ ನಾಲ್ಕು ಅಂಗಡಿಗಳನ್ನು ಸೀಜು ಮಾಡಿ, ಸರ್ಕಾರ ಜಾಗವನ್ನು ತೆರವುಗೊಳಿಸುವಂತೆ ಸೂಚಿಸಿದರು.
ಅಂಗಡಿ ವರ್ತಕರು ಈಗಾಗಲೇ ಡಿಪಾಸಿಟ್ ಹಣ ನೀಡಿ ಬಾಡಿಗೆ ಕೊಡುತ್ತಿದ್ದು, ಲಕ್ಷಾಂತರ ರೂಗಳ ಬಂಡವಾಳ ಹೂಡಿ ವ್ಯಾಪಾರ ಮಾಡುತ್ತಿದ್ದು, ನಮ್ಮ ಪರಿಸ್ಥಿತಿ ಎನು? ಎಂದು ಪರದಾಡುತ್ತಿದ್ದರು. ಖಾಸಗಿ ಮಾಲಿಕತ್ವದ ಜಾಗದಲ್ಲಿ ನಿರ್ಮಾಣ ಮಾಡಿ, ಸರಕಾರದ ಜಾಗವನ್ನು ಅತಿಕ್ರಮಣ ಮಾಡಿದ್ದು ತಪ್ಪು.ತಕ್ಷಣವೇ ಕ್ರಮಕೈಗೊಳ್ಳದಿದ್ದರೇ ಕಾನೂನು ಪ್ರಕಾರ, ಪೋಲಿಸ್ ಬಂದೋಬಸ್ತ್ ಮೂಲಕ ಪುರಸಭೆ ಜೆಸಿಬಿ ಬಳಿಸಿ ಕಟ್ಟಡವನ್ನು ತೆರವುಗೊಳಿಸಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ಅಣ್ಣಿಗೇರಿ ತಾಲೂಕ ತಹಶೀಲ್ದಾರ, ಪುರಸಭೆ ಮುಖ್ಯಾಧಿಕಾರಿ ಧಾರವಾಡ ಜಿಲ್ಲಾ ಪ್ರೋಬೆಷನರಿ ಅಧಿಕಾರಿ ಮಾದೇವ ಗಿತ್ತಿ, ಪುರಸಭೆ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.