35.2 C
Hubli
ಏಪ್ರಿಲ್ 23, 2024
eNews Land
ಸುದ್ದಿ

ಹಿರಿಯರ ಸಮಸ್ಯೆ ಪರಿಹಾರಕ್ಕೆ “ಅನ್ವಯಾ” ಚಾಯ್ ಪೇ ಚರ್ಚಾ

 ಅನ್ವಯಾ ಕ್ಲಬ್ ವೇದಿಕೆ ಆರಂಭ

ಇಎನ್ಎಲ್ ಬೆಂಗಳೂರು: www.anvayaa.com ಭಾರತದ ಮೊದಲ ಮತ್ತು ಏಕೈಕ ಐಒಟಿ ಮತ್ತು ಎಐ ತಂತ್ರಜ್ಞಾನ ಆಧಾರಿತ ವ್ಯಕ್ತಿಗತ ವೃದ್ಧರ ವೇದಿಕೆಯಾಗಿರುವ ಅನ್ವಯಾ ಹಿರಿಯರು ಎದುರಿಸುತ್ತಿರುವ ಅನೇಕ ಸಮಸ್ಯೆಗಳು ಮತ್ತು ಅವುಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಲು `ಅನ್ವಯಾ ಚಾಯ್ ಪೆ ಚರ್ಚಾ’ ಎಂಬ ವೇದಿಕೆಯನ್ನು ಆರಂಭಿಸಿದೆ. ಸುರಕ್ಷತೆ, ಸೂಕ್ತ ಆರೋಗ್ಯ ಆರೈಕೆ ಮತ್ತು ಇತರೆ ಸೇವೆಗಳ ಕೊರತೆ, ಆರ್ಥಿಕ ಮತ್ತು ಕಾನೂನು ಅಡೆತಡೆಗಳು, ಏಕಾಂಗಿತನ ಮತ್ತು ಭಾವನಾತ್ಮಕವಾಗಿ ಕುಗ್ಗಿರುವುದು ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಹಿರಿಯರು ಎದುರಿಸುತ್ತಿದ್ದಾರೆ. ಕುಟುಂಬದವರು ಅಗತ್ಯವಾಗಿ ಬೇಕಾಗಿರುವ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಿದರೂ ಅವರಿಗೆ ಭಾವನಾತ್ಮಕವಾಗಿ ಮತ್ತು ಸಮಯದ ಬೆಂಬಲ ಸಿಗುವುದಿಲ್ಲ. ಬಹುತೇಕ ಪ್ರಕರಣಗಳಲ್ಲಿ ಅನ್ವಯಾದ ತಂತ್ರಜ್ಞಾನ ಪ್ಲಾಟ್ಫಾರ್ಮ್ ತನ್ನ ಕೇರ್ ಮ್ಯಾನೇಜರ್ಸ್ ಅಂಡ್ ಕೇರ್ ಕೋಆರ್ಡಿನೇಟರ್ ಜಾಲದ ಮೂಲಕ ಈ ಹಿರಿಯ ನಾಗರಿಕರಿಗೆ ಉತ್ತಮವಾದ ಆರೈಕೆಯನ್ನು ಒದಗಿಸುತ್ತಾ ಬಂದಿದೆ. ಈ ಒಂದು ಕಾರ್ಯದಲ್ಲಿ 250 ಕ್ಕೂ ಹೆಚ್ಚು ವೆಂಡರ್ ಪಾಲುದಾರರು ಸಹ ಕೈಜೋಡಿಸಿದ್ದಾರೆ. ಈ ಮೂಲಕ ಹಿರಿಯರಿಗೆ ಅಗತ್ಯವಿರುವ ಎಲ್ಲಾ ಸೇವೆಗಳನ್ನು ಒದಗಿಸುತ್ತಿದೆ.

ಆದರೆ, ಅವರು ಎದುರಿಸುತ್ತಿರುವ ಭಾವನಾತ್ಮಕತೆ ಮತ್ತು ಏಕಾಂಗಿತನದ ಸಮಸ್ಯೆಯನ್ನು ಪರಿಹರಿಸುವ ಅಗತ್ಯವಿದೆ.ಹಿರಿಯರ ರಕ್ಷಣೆ ಕುರಿತು ಜನರಲ್ಲಿ ಜಗೃತಿ ಮೂಡಿಸಲೆಂದೇ ಹಿರಿಯರ ನಿಂದನೆ ಜಾಗೃತಿ ದಿನವನ್ನು ಆಚರಿಸಲಾಗುತ್ತದೆ. ಈ ಸಂದರ್ಭದಲ್ಲಿ ಹಿರಿಯರನ್ನು ಗೌರವಯುತವಾಗಿ ನೋಡಿಕೊಳ್ಳುವುದು, ಅವರ ಅಗತ್ಯತೆಗಳನ್ನು ಪೂರೈಸುವ ಬಗ್ಗೆ ಜನರಿಗೆ ಜಾಗೃತಿ ಮೂಡಿಸಲಾಗುತ್ತದೆ. ಇದಲ್ಲದೇ, ಹೆಚ್ಚಿನ ಅಗತ್ಯತೆಗಳನ್ನು ತಂತ್ರಜ್ಞಾನ ಆಧಾರಿತ ಪರಿಹಾರಗಳ ಮೂಲಕ ನೋಡಿಕೊಳ್ಳಬಹುದು. ಆದಾಗ್ಯೂ, ಏಕಾಂಗಿತನ ಅಥವಾ ಒಂಟಿತನದ ಸಮಸ್ಯೆಯನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಾಮಾಜಿಕ ಸಂವಹನಗಳ ಅಗತ್ಯವು ಒಂದು ಸವಾಲಾಗಿ ಪರಿಣಮಿಸಿದೆ. ಅನ್ವಯಾದಲ್ಲಿನ ಕೇರ್ ಕೋಆರ್ಡಿನೇಟರ್ ತಂಡವು ಸಾಂಕ್ರಾಮಿಕ ಸಮಯದಲ್ಲಿ ಈ ವಿಷಯದ ಕುರಿತು ಕೆಲಸ ಮಾಡಲು ಆರಂಭಿಸಿತು ಹಾಗೂ ಅನ್ವಯಾದ ಸದಸ್ಯರಿಗೆ ಇತರರೊಂದಿಗೆ ಸಂವಹನ ನಡೆಸಲು, ಅನುಭವಗಳನ್ನು ಹಂಚಿಕೊಳ್ಳಲು ಹಾಗೂ ಅವರ ಮನೆಗಳ ಸುರಕ್ಷತೆಯಿಂದ ಒಟ್ಟಿಗೆ ಆನಂದಿಸಲು ವರ್ಚುವಲ್ ಎಂಗೇಜ್ಮೆಂಟ್ ಕಾರ್ಯಕ್ರಮವನ್ನು ಆರಂಭಿಸಿತು. ತಂಡವು ಸದಸ್ಯರ ಸಲಹೆಗಳ ಆಧಾರದ ಮೇಲೆ ಅವಧಿಗಳನ್ನು ಕೂಡ ನಿರ್ವಹಿಸಿದೆ. ಪ್ರತ್ಯೇಕತೆ ಮತ್ತು ಒಂಟಿತನದಿಂದ ವ್ಯವಹರಿಸುವ ಹಿರಿಯ ಸಮುದಾಯವನ್ನು ಮತ್ತಷ್ಟು ತಲುಪುವ ಅಗತ್ಯವನ್ನು ಅರಿತುಕೊಂಡ ತಂಡವು ಅನ್ವಯಾ ಕ್ಲಬ್ ಅನ್ನು ಪ್ರಾರಂಭ ಮಾಡಿತು. ಹಿರಿಯರು ಭೇಟಿಯಾಗಲು, ಪರಸ್ಪರ ಬಾಂಧವ್ಯ, ಅನುಭವಗಳನ್ನು ಹಂಚಿಕೊಳ್ಳಲು, ಕಲಿಯಲು ಮತ್ತು ಹವ್ಯಾಸಗಳನ್ನು ಅನುಸರಿಸಲು ಮತ್ತು ಪ್ರತಿಯೊಬ್ಬರೊಂದಿಗೂ ಆನಂದಿಸಲು ವರ್ಚುವಲ್ ಅಥವಾ ದೈಹಿಕ ಸಂವಹನ ವೇದಿಕೆಯಾಗಿದೆ.

ಅನ್ವಯಾದ ಸಂಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ರೆಡ್ಡಿ ಅವರು ಮಾತನಾಡಿ, “ನನ್ನ ಅಭಿಪ್ರಾಯದಲ್ಲಿ ಹಿರಿಯರ ಬಗ್ಗೆ ಕಾಳಜಿ ವಹಿಸದಿರುವುದು ಹಿರಿಯರನ್ನು ನಿಂದನೆ ಮಾಡಿದಂತಾಗುತ್ತದೆ. ಅನ್ವಯಾದಲ್ಲಿ ನಾವು ಭಾರತವನ್ನು ಹಿರಿಯ ಸ್ನೇಹಿ ಸಮುದಾಯವನ್ನಾಗಿ ಮಾಡುವ ಉದ್ದೇಶದಿಂದ ಕೆಲಸ ಮಾಡುತ್ತಿದ್ದೇವೆ. ನಾವು ಭಾರತದಲ್ಲಿ ಹಿರಿಯರ ಆರೈಕೆಗಾಗಿ ದೃಢವಾದ ಪರಿಸರ ವ್ಯವಸ್ಥೆಯನ್ನು ರಚಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಅದೇರೀತಿ ಆರೋಗ್ಯ ರಕ್ಷಣೆ ಮತ್ತು ಮೂಲಭೂತ ಸೌಕರ್ಯಗಳ ಸಂಘಟನೆಯ ಹೊರತಾಗಿ ಹಿರಿಯರ ಭಾವನಾತ್ಮಕ ಮತ್ತು ಇತರ ಕ್ರಿಯಾತ್ಮಕ ಅಗತ್ಯತೆಗಳನ್ನು ಪರಿಹರಿಸುವ ಅಗತ್ಯವಿದೆ ಎಂಬುದನ್ನು ಬಲವಾಗಿ ಭಾವಿಸುತ್ತೇವೆ. ಹಿರಿಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಸೂಕ್ತ ಪರಿಹಾರಗಳನ್ನು ಒದಗಿಸಲು ನವು ಹಿರಿಯರ ವಸತಿ ಸಮುದಾಯಗಳನ್ನು ತಲುಪಲು ಮತ್ತು ವಾಸ್ತವಿಕವಾಗಿ ಹಿರಿಯರು ಎದುರಿಸುತ್ತಿರುವ ವಿವಿಧ ಸವಾಲುಗಳನ್ನು ಚರ್ಚಿಸಲೆಂದು `ಚಾಯ್ ಪೇ ಚರ್ಚಾ’ ಉಪಕ್ರಮವನ್ನು ಆಯೋಜಿಸಿದ್ದೇವೆ. ಹಿರಿಯರಿಗೆ ಮನೆಯನ್ನು ಸುರಕ್ಷಿತವಾಗಿರಿಸಲು ನಾವು ಕೆಲವು ತ್ವರಿತವಾದ ಪರಿಹಾರಗಳನ್ನು ಸಹ ನೀಡಿದ್ದೇವೆ. ನಮ್ಮ ಕೇರ್ ಮ್ಯಾನೇಜರ್ಗಳು ಮತ್ತು ಅನ್ವಯಾ ನೆಟ್ವರ್ಕ್ ಜೊತೆಗೆ ಕಾನೂನು ನೆರವು, ಪ್ರಯಾಣ ನೆರವು, ಹಣಕಾಸು ನೆರವು, ದೇಶೀಯ ಸೇವೆಗಳು, ಆರೋಗ್ಯ ಸೇವೆಗಳು, ತುರ್ತು ಆರೈಕೆ ಇತ್ಯಾದಿ ಕ್ಷೇತ್ರಗಳಲ್ಲಿ ಬೆಂಬಲವನ್ನು ನೀಡುವ 250 ಕ್ಕೂ ಹೆಚ್ಚು ಪರಿಶೀಲಿಸಿದ ಮಾರಾಟಗಾರರ ನೆಟ್ವರ್ಕ್ ಮೂಲಕ ಅನ್ವಯಾ ನಿರ್ಮಿಸಿದ ಸಮಗ್ರ ಪರಿಹಾರಗಳನ್ನು ನಾವು ವಿವರಿಸಿದ್ದೇವೆ’’ ಎಂದು ತಿಳಿಸಿದರು.

Related posts

“ಒಂದು ರೂಪಾಯಿ” ಶುಲ್ಕದಲ್ಲಿ ಕೆಎಎಸ್ ಹಾಗೂ ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ

eNEWS LAND Team

ರೈತರ ‘ಬಾಳು’ ಹಸನು ಮಾಡಿ: ಕೃಷಿ ವಿಜ್ಞಾನಿಗಳಿಗೆ ಸಚಿವ ಮುನೇನಕೊಪ್ಪ ಕರೆ

eNewsLand Team

ಮನೆಯಿಂದಲೇ ಮತದಾನ ಮಾಡಲು ಒಪ್ಪಿಗೆ ನೀಡಿದ ವಿಕಲಚೇತನರ ಹಾಗೂ 80 + ವಯಸ್ಸಾದವರ ಮನೆಗೆ ಏ.29,30 ಹಾಗೂ ಮೇ 1 ರಂದು ಚುನಾವಾಣಾ ಸಿಬ್ಬಂದಿ ಭೇಟಿ: ಜಿಲ್ಲಾಧಿಕಾರಿ ಗುರುದತ್ತ ಹೆಗಡೆ

eNEWS LAND Team