eNews Land
ಸಿನೆಮಾ ಸುದ್ದಿ

ಸಖತ್ ಆಗಿದೆ ಶುರುವಾಗಿದೆ ಸಾಂಗ್‌

Listen to this article

ಗೋಲ್ಡನ್ ಸ್ಟಾರ್ ಗಣೇಶ , ನಿಶ್ವಿಕಾ ನಾಯ್ಡು ಹಾಗೂ ಸುರಭಿ ಪುರಾಣಿಕ್ ಚಿತ್ರ

ಇಎನ್ಎಲ್ ಫಿಲ್ಮ್ ಕ್ಲಬ್

ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಸಿಂಪಲ್ ಸುನಿ ಸಾರಥ್ಯದ ಬಹುನಿರೀಕ್ಷಿತ ಸಿನಿಮಾ ಸಖತ್ ಸಿನಿಮಾ ಅಡ್ಡದಿಂದ “ಶುರುವಾಗಿದೆ ” ಹಾಡು ಬಿಡುಗಡೆ ಆಗಿದ್ದು ಸಖತ್ತಾಗೇ ಸದ್ದು ಮಾಡ್ತಿದೆ.

ನ. 26ಕ್ಕೆ ಅದ್ಧೂರಿಯಾಗಿ ತೆರೆಗೆ ಬರೋದಕ್ಕೆ  ಸಜ್ಜಾಗಿದೆ. ಕೆಲ ದಿನಗಳ ಹಿಂದಷ್ಟೇ ಹಾಡೊಂದನ್ನು ರಿಲೀಸ್ ಮಾಡಿ ನಿರೀಕ್ಷೆ ಹುಟ್ಟಿಸಿತ್ತು. ಶುರುವಾಗಿದೆ‌ ಹಾಡಿಗೆ ಅರ್ಜುನ್ ಲೂಯಿಸ್ ಸಾಹಿತ್ಯ ಬರೆದಿದ್ದು, ಸಿದ್ದಿ ಶ್ರೀರಾಮ್ ಕಂಠದಲ್ಲಿ ರಿವೀಲ್ ಆಗಿದೆ.

ಹಿಂದೆ ಚಮಕ್ ಸಿನಿಮಾ ಮೂಲಕ ಪ್ರೇಕ್ಷಕರಿಗೆ ಚಮಕ್ ಕೊಟ್ಟಿದ್ದ ಗಣಿ-ಸುನಿ ಈ ಬಾರಿ ಸಖತ್ ಸಿನಿಮಾ ಮೂಲಕ ಕಾಮಿಡಿ ಹೂರಣ ಬಡಿಸಲು ಸಕಲ ರೀತಿಯಿಂದ ತಯಾರಿಯಾಗಿದ್ದು, ಗಣಿ ಅಂಧನ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.


ನಿಶ್ವಿಕಾ ನಾಯ್ಡು ಹಾಗೂ ಸುರಭಿ ಪುರಾಣಿಕ್ ಚಿತ್ರದಲ್ಲಿ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಸಾಧುಕೋಕಿಲ, ಧರ್ಮಣ್ಣ ಕಡೂರು ಸೇರಿದಂತೆ ಮುಂತಾದವರು ತಾರಾಗಣದಲ್ಲಿದ್ದಾರೆ.

ಯು ಟ್ಯೂಬ್ ನಲ್ಲಿ ಹಾಡು ನೋಡಲು..

https://youtu.be/GllSAiYxJxs

Related posts

ದೀಪಾವಳಿ ಹೀಗೂ ಆಚರಿಬಹುದು ಎಂದು ತೋರಿಸಿದ ಹಾವೇರಿ ಡಿಸಿ

eNEWS LAND Team

ಹುಬ್ಬಳ್ಳ್ಯಾಗ ಸರಿಗಮಪ ಲಿಟಲ್ ಚಾಂಪ್ಸ್ ಆಡಿಷನ್ಸ್ ಐತಿ; ಮಕ್ಳ ಕರ್ಕೊಂಡು ಹೊಂಡ್ರಿ ಮತ್ತ..!

eNEWS LAND Team

ಚನ್ನಪಟ್ಟಣದ ಜೀಪು ಖರೀದಿಸಿದ ಸಿಎಂ ಬೊಮ್ಮಾಯಿ

eNewsLand Team