27.4 C
Hubli
ಏಪ್ರಿಲ್ 24, 2024
eNews Land
ಸುದ್ದಿ

ಉಕ್ರೇನ್ ಮೇಲೆ ಯುದ್ಧ ಆರಂಭಿಸಿದ ರಷ್ಯಾ; ಜಗತ್ತಿನಲ್ಲಿ ತಲ್ಲಣ

ಇಎನ್ಎಲ್ ಡೆಸ್ಕ್

ಪಾಶ್ಚಿಮಾತ್ಯ ದೇಶಗಳು ಮತ್ತು ವಿಶ್ವ ಸಮುದಾಯದ ಎಚ್ಚರಿಕೆಯನ್ನು ಧಿಕ್ಕರಿಸಿ ರಷ್ಯಾ ನಿರ್ಬಂಧಗಳಿಗೂ ತಲೆ ಕೆಡಿಸಿಕೊಳ್ಳದೆ ಉಕ್ರೇನ್ ವಿರುದ್ಧ ಯುದ್ಧವನ್ನು ಆರಂಭಿಸಿದೆ.

ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಉಕ್ರೇನ್‌ನಲ್ಲಿ ‘ಮಿಲಿಟರಿ ಕಾರ್ಯಾಚರಣೆ’ ಘೋಷಿಸಿದ್ದಾರೆ. ಅದಾದ ಬೆನ್ನಲ್ಲೇ ಉಕ್ರೇನ್ ಪೂರ್ವ ಭಾಗದಿಂದ ರಷ್ಯಾ ಆಕ್ರಮಣ ಆರಂಭಿಸಿದೆ. ಗಡಿ ಪ್ರದೇಶಕ್ಕೆ ಹೊಂದಿಕೊಂಡಿರುವ ನಗರಗಳಿಂದ ಜನರು ಸುರಕ್ಷಿತ ಸ್ಥಳಕ್ಕೆ ತೆರಳುತ್ತಿದ್ದಾರೆ.

ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುವಂತೆಯೂ ಉಕ್ರೇನ್ ಸೈನಿಕರಿಗೆ ರಷ್ಯಾ ಅಧ್ಯಕ್ಷ ಪುಟಿನ್ ಕರೆ ನೀಡಿದ್ದಾರೆ. ಪುಟಿನ್ ನಡೆಯನ್ನು ವಿಶ್ವ ಸಮುದಾಯ ತೀವ್ರವಾಗಿ ಖಂಡಿಸಿದೆ. ರಷ್ಯಾದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರುವುದಾಗಿ ಅಮೆರಿಕ ಅಧ್ಯಕ್ಷ ಜೋ ಬೈಡನ್ ಎಚ್ಚರಿಕೆ ನೀಡಿದ್ದಾರೆ.

ರಷ್ಯಾ ಉಕ್ರೇನ್ ಯುದ್ಧ ಜಗತ್ತಿನಲ್ಲಿ ತಲ್ಲಣ ಉಂಟುಮಾಡಿದೆ. ಈ ಯುದ್ಧ ಎಲ್ಲಿಂದ ಎಲ್ಲಿಗೆ ಹೋಗಿ ಮುಟ್ಟುತ್ತದೊ ಎಂಬ ಆತಂಕ ಆವರಿಸಿದೆ. ತೈಲಬೆಲೆ, ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಸೇರಿದಂತೆ ಸಾಕಷ್ಟು ವಿಚಾರದಲ್ಲಿ ಪ್ರಪಂಚದ ಎಲ್ಲ ರಾಷ್ಟ್ರದ ಮೇಲೆ ಇದರ ಪರಿಣಾಮ ಬೀರುವುದು ನಿಶ್ಚಿತವಾಗಿದೆ.

Related posts

ವಾಯುಪುತ್ರ ಫಿಟ್ನೆಸ್ ಸೆಂಟರ್ ಉದ್ಘಾಟನೆ

eNEWS LAND Team

ಮನಕುಲ ಕಲ್ಯಾಣವೇ  ರೇಣುಕಾಚಾರ್ಯರ ಸಂದೇಶ: ಅಭಿನವ ಪಂಚಾಕ್ಷರಿ ಶಿವಾಚಾರ್ಯ ಶ್ರೀಗಳು

eNEWS LAND Team

ಅಣ್ಣಿಗೇರಿ ಪುರಸಭೆ ಚುನಾವಣೆ ಅಖಾಡಕ್ಕೆ ಆಮ್ ಆದ್ಮಿ- ಸಂತೋಷ ನರಗುಂದ

eNewsLand Team