26 C
Hubli
ಮೇ 25, 2024
eNews Land
ಸುದ್ದಿ

RUNNING OF SPECIAL TRAIN BETWEEN SIR M VISVESVARAYA TERMINAL, BENGALURU AND TIRUCHCHIRAPPALLI

 

ಬೆಂಗಳೂರು ಮತ್ತು ತಿರುಚಿರಾಪಳ್ಳಿ ನಡುವೆ ವಿಶೇಷ ರೈಲು

ಮುಂಬರುವ ಹಬ್ಬದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ತೆರವುಗೊಳಿಸುವ ಸಲುವಾಗಿ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಮತ್ತು ತಿರುಚಿರಾಪಳ್ಳಿ ನಿಲ್ದಾಣಗಳ ನಡುವೆ ಪ್ರತಿ ದಿಕ್ಕಿನಲ್ಲಿ ಒಂದು ಟ್ರಿಪ್‌ಗಾಗಿ ವಿಶೇಷ ರೈಲುಗಳನ್ನು ಓಡಿಸಲು ನಿರ್ಧರಿಸಲಾಗಿದೆ.

1. ರೈಲುಗಳ ಸಂಖ್ಯೆ 06577/06578 ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು- ತಿರುಚಿರಾಪಳ್ಳಿ – ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ಎಕ್ಸ್‌ಪ್ರೆಸ್ ವಿಶೇಷ:

ರೈಲು ಸಂಖ್ಯೆ 06577 ಆಗಸ್ಟ್ 25 ರಂದು (ಶುಕ್ರವಾರ) ಮಧ್ಯಾಹ್ನ 02:30 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರಿನಿಂದ ಹೊರಟು ಅದೇ ದಿನ ರಾತ್ರಿ 11:30 ಗಂಟೆಗೆ ತಿರುಚಿರಾಪಳ್ಳಿ ನಿಲ್ದಾಣವನ್ನು ತಲುಪಲಿದೆ.

ಈ ರೈಲು ಮಾರ್ಗದಲ್ಲಿ ಬಂಗಾರಪೇಟೆ, ಸೇಲಂ, ನಾಮಕ್ಕಲ್, ಕರೂರ್ ಮತ್ತು ತಿರುಚಿರಾಪಳ್ಳಿ ಪೋರ್ಟ್‌ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ 06578 ಆಗಸ್ಟ್ 26 ರಂದು (ಶನಿವಾರ) ತಿರುಚಿರಾಪಳ್ಳಿಯಿಂದ ಬೆಳಗಿನ ಜಾವ 04:45 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 12:00 ಗಂಟೆಗೆ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು ನಿಲ್ದಾಣಕ್ಕೆ ಆಗಮಿಸಲಿದೆ.

ಈ ರೈಲು ಮಾರ್ಗದಲ್ಲಿ ಕರೂರ್, ನಾಮಕ್ಕಲ್, ಸೇಲಂ ಮತ್ತು ಬಂಗಾರಪೇಟೆ ನಿಲ್ದಾಣಗಳಲ್ಲಿ ನಿಲುಗಡೆ ಇರಲಿದೆ.

ಈ ವಿಶೇಷ ರೈಲುಗಳು 24 ಬೋಗಿಗಳನ್ನು ಹೊಂದಿದೆ. ಎಸಿ-ಟು ಟೈಯರ್‌ ಬೋಗಿಗಳು (2), ಎಸಿ ತ್ರಿ ಟೈಯರ್‌ ಬೋಗಿಗಳು (7), ಸ್ಲೀಪರ್ ಕ್ಲಾಸ್ ಬೋಗಿಗಳು (10), ಸಾಮಾನ್ಯ ದ್ವಿತೀಯ ದರ್ಜೆ ಬೋಗಿಗಳು (2), ದಿವ್ಯಾಂಗ್‌ಸ್ನೇಹಿ ಕಂಪಾರ್ಟ್‌ಮೆಂಟ್‌ಗಳಿಂದ ಕೂಡಿದ ಸಾಮಾನ್ಯ ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್‌ ಬೋಗಿಗಳು (2) ಮತ್ತು 1 ಪ್ಯಾಂಟ್ರಿ ಕಾರ್‌ ಬೋಗಿ (ಮುಚ್ಚಿದ ಸ್ಥಿತಿಯಲ್ಲಿ)ಯನ್ನು ಹೊಂದಿರುತ್ತದೆ.

ಸತಾರಾ, ಲೋನಾವಲಾ: ಪ್ರಾಯೋಗಿಕ ನಿಲುಗಡೆಗೆ ಅವಕಾಶ

ಈ ಕೆಳಗಿನ ರೈಲುಗಳಿಗೆ ಆಗಸ್ಟ್‌ 25 ರಿಂದ ಆರು ತಿಂಗಳ ಕಾಲ ಪ್ರಾಯೋಗಿಕ ಆಧಾರದ ಮೇಲೆ ತಾತ್ಕಾಲಿಕ ನಿಲುಗಡೆಗೆ ಅವಕಾಶ ನೀಡಲಾಗುತ್ತಿದೆ. ಸತಾರಾ ಮತ್ತು ಲೋನಾವಲಾ ನಿಲ್ದಾಣಗಳಿಗೆ ಆಗಮಿಸುವ/ನಿರ್ಗಮಿಸುವ ಸಮಯದ ವಿವರ ಈ ಕೆಳಗಿನಂತಿರಲಿದೆ.

ರೈಲು ಸಂಖ್ಯೆ 17317 ಎಸ್‌.ಎಸ್‌.ಎಸ್ ಹುಬ್ಬಳ್ಳಿ – ದಾದರ್ ಎಕ್ಸ್‌ಪ್ರೆಸ್ ರೈಲು ಸತಾರಾ 11:37/11:40PM ಮತ್ತು ಲೋನಾವಲಾ 04:12/04:14 AM ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ. ಹಿಂದಿರುಗುವ ದಿಕ್ಕಿನಲ್ಲಿ ರೈಲು ಸಂಖ್ಯೆ. 17318 ದಾದರ್-ಎಸ್‌.ಎಸ್‌.ಎಸ್ ಹುಬ್ಬಳ್ಳಿ ಎಕ್ಸ್‌ಪ್ರೆಸ್ ರೈಲು ಲೋನಾವಲಾ 11:00/11:02PM ಮತ್ತು ಸತಾರಾ 02:32/02:35 AM ಗಂಟೆಗೆ ಆಗಮಿಸಿ/ನಿರ್ಗಮಿಸಲಿದೆ. ಇವುಗಳು ಆಗಸ್ಟ್‌ 25 ರಿಂದಲೇ ಜಾರಿಗೆ ಬರಲಿದೆ.

 

I. RUNNING OF SPECIAL TRAIN BETWEEN SIR M VISVESVARAYA TERMINAL, BENGALURU AND TIRUCHCHIRAPPALLI

It has been decided to run special train between Sir M. Visvesvaraya Terminal Bengaluru and Tiruchchirappalli station for one trip in view of festive season to clear the extra rush of passengers, as per details mentioned below: –

1. Train No. 06577/06578 Sir M. Visvesvaraya Terminal Bengaluru- Tiruchchirappalli – Sir M. Visvesvaraya Terminal Bengaluru Express Special:

Train No. 06577 will depart from Sir M. Visvesvaraya Terminal Bengaluru at 02:30 PM on August 25, 2023 (Friday) and reach Tiruchchirappalli at 11:30 PM the same day.

Enroute this will have stoppages at Bangarapet, Salem, Namakkal, Karur and Tiruchchirappalli Fort.

In the return direction, Train No. 06578 will depart from Tiruchchirappalli at 04:45 AM on August 26, 2023 (Saturday) and arrive at Sir M. Visvesvaraya Terminal Bengaluru at 12:00 PM the same day.

Enroute this will have stoppages at Karur, Namakkal, Salem and Bangarapet.

The above-mentioned special trains will have a composition of Twenty-four coaches i.e., TWO AC-2 Tier, SEVEN AC-3 Tier, TEN Sleeper Class, TWO General Second Class, TWO Luggage cum Brake Vans with Disabled Friendly Compartments and ONE Pantry Car (Locked Condition).

II. EXPERIMENTAL STOPPAGE FOR TRAINS AT SATARA AND LONAVALA

The following trains will be provided with stoppages at Satara and Lonavala for a period of six months with effect commencing journey from both ends from 25.08.2023 as per details mentioned below: –

Train No. 17317 SSS Hubballi – Dadar Express will arrive/depart Satara at 11:37/11:40 PM and Lonavala at 04:12/04:14 AM. In the return direction Train No. 17318 Dadar – SSS Hubballi Express will arrive / depart Lonaval at 11:00/11:02 PM and Satara at 02:32/02:35 AM with effect commencing journey from both ends from 25.08.2023  Hubballi Chief Public Relations Officer Aneesh Hegde.

 

Related posts

ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಪೂರ್ವ ಕ್ಷೇತ್ರದ ಪ್ರಣಾಳಿಕೆಯ ಬಿಡುಗಡೆ: ಡಾ.ಕ್ರಾಂತಿಕಿರಣ

eNewsLand Team

ಕುಮಾರಸ್ವಾಮಿಗೆ ನನ್ನ ಮೇಲೆ ಪ್ರೀತಿ ಜಾಸ್ತಿ; ಸಿಎಂ ಬೊಮ್ಮಾಯಿ‌ ಹೀಗೆ ಹೇಳಿದ್ಯಾಕೆ!?

eNewsLand Team

ವಿದ್ಯಾರ್ಥಿಗಳ ಗೋಳು ಕೇಳುವವರು ಯಾರು?

eNEWS LAND Team