22 C
Hubli
ಸೆಪ್ಟೆಂಬರ್ 27, 2023
eNews Land
ಸಿನೆಮಾ ಸುದ್ದಿ

ಡೇಂಜರಸ್ ಅಪ್ಸರಾ!! ಇದು ಆರ್’ಜಿವಿಯ ಲೆಸ್ಬಿನ್ ಕ್ರೈಂ ಸಿನಿಮಾ! ಏ.8ಕ್ಕೆ ತೆರೆಗೆ..

ಇಎನ್ಎಲ್ ಫಿಲ್ಮ ಡೆಸ್ಕ್: ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅರ್ಥಾತ್ ಆರ್’ಜಿವಿ ಹಂಚಿಕೊಂಡ ಫೋಟೊ ಇದು.. ರಾಜಮೌಳಿ ಸರ್ ನಿಮ್ಮ ಬಳಿ ಡೇಂಜರಸ್ ಹುಡುಗರು ಇದ್ದರೆ ನನ್ನ ಹತ್ತಿರ ಡೇಂಜರ್ ಹುಡುಗಿಯರು ಇದ್ದಾರೆ ಎಂದು ಹೇಳಿಕೊಂಡಿದ್ದಾರೆ..

ಅದು ಅಕ್ಷರಶಃ ಸತ್ಯ. ಏನು ಮಾಡಿದರೂ ವಿವಾದ, ಸುದ್ದಿಯಲ್ಲೆ ಇರುವ ಆರ್’ಜಿವಿ ಅಪ್ಸರಾ ರಾಣಿ ಹಾಗೂ ನೈನಾ ಗಂಗೂಲಿ ತಾರಾಗಣದಲ್ಲಿ ಭಾರತದ ಮೊದಲ ಲೆಸ್ಬಿನ್ ಲವ್‌ ಕ್ರೈಮ್ ಸ್ಟೋರಿಯನ್ನು ತೆರೆಯ ಮೇಲೆ ತರುತ್ತಿದ್ದಾರೆ.

ಏ.8 ರಂದು ತೆಲುಗು, ಹಿಂದಿ ಭಾಷೆಯಲ್ಲಿ ಈ ಚಿತ್ರ ಥಿಯೇಟರ್ ನಲ್ಲಿ ಕಾಣಿಸಿಕೊಳ್ಳಲಿದೆ.

ಅಪ್ಸರಾ ರಾಣಿಯನ್ನು ಕೋವಿಡ್ ಲಾಕ್​ಡೌನ್​ನಲ್ಲಿ ತಮ್ಮ ಸಿನಿಮಾದ ಮೂಲಕ ಪರಿಚಯಿಸಿದರು. ಈಕೆ ಹಾಗೂ ನೈನಾ ಗಂಗೂಲಿ ನಟಿಸಿರುವ ಡೇಂಜರಸ್ ಎಂಬ ಲೆಸ್ಬಿನ್ ಲವ್‌ಸ್ಟೋರಿ ಕಥಾದರದ ಸಿನಿಮಾ ಸ್ಟಿಲ್ಸ್ ಸಾಕಷ್ಟು ಸದ್ದು ಮಾಡುತ್ತಿದೆ.

ಅದರಲ್ಲೂ ಅಪ್ಸರಾ ರಾಣಿ ಸೌಥ್ ಇಂಡಿಯಾದ ಹಾಟ್ ಫೆವರೆಟ್ ಎನಿಸುತ್ತಿದ್ದಾರೆ.

ಒರಿಸ್ಸಾ ಮೂಲದ ಈ ನಟಿಗೆ ಈಗ ಟಾಲಿವುಡ್​ನಲ್ಲಿ ಬೇಡಿಕೆ ಶುರುವಾಗಿದೆ. ತೆಲುಗು ಸಿನಿಮಾದ ಐಟಂ ಹಾಡುಗಳಲ್ಲಿ ಅಪ್ಸರಾ ಹೆಜ್ಜೆ ಹಾಕುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಈ ನಟಿ ತಮ್ಮ ಲೆಟೆಸ್ಟ್​ ಸ್ಟಿಲ್ಸ್ ಹಂಚಿಕೊಳ್ಳುತ್ತಲೆ ಇರುತ್ತಾರೆ.  ಅವು ಹುಡುಗರ ಉಸಿರು ಬಿಸಿಯೇರುವಂತೆ ಮಾಡುತ್ತಿವೆ.. ಇನ್ನೂ ಡೇಂಜರಸ್ ಹೇಗಿದೆ ಎಂದು ಕಾದು ನೋಡಬೇಕು ಅಷ್ಟೇ.

Related posts

ಅಣ್ಣಿಗೇರಿ ಪುರಸಭೆ 72% ಮತದಾನ: ಎಲ್ಲರ ಚಿತ್ತ ಫಲಿತಾಂಶದತ್ತ…!

eNEWS LAND Team

ನೆರೆ ಪರಿಹಾರ ಕಾರ್ಯ: ಧಾರವಾಡಕ್ಕೆ 7.5 ಕೋಟಿ ಬಿಡುಗಡೆ; ಮುನೇನಕೊಪ್ಪ

eNewsLand Team

ಪವರ್ ಸ್ಟಾರ್ ಚಿತ್ರಗಳ ಮೆಲುಕು

eNEWS LAND Team